Monday, September 9, 2024

Latest Posts

ಮತ್ತೆ ಬೇಬಿ ಸಿಟ್ಟರ್ ಆದ ರಿಷಬ್ ಪಂತ್..!!

- Advertisement -

ಇಂಗ್ಲೆಂಡ್: ಟೀಮ್ ಇಂಡಿಯಾ ಓಪನರ್ ಶಿಖರ್ ಧವನ್ ಗಾಯಕ್ಕೆ ತುತ್ತಾದ ಕಾರಣ ಬದಲಿ ಆಟಗಾರನಾಗಿ ತಂಡವನ್ನು ಸೇರಿರುವ ರಿಷಬ್ ಪಂತ್ ಈಗ ಮತ್ತೆ ಬೇಬಿ ಸಿಟ್ಟರ್ ಆಗಿದ್ದಾರೆ.

ಪಾಕ್ ವಿರುದ್ಧದ ನಿನ್ನೆಯ ಹೈ ವೋಲ್ಟೇಜ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಪಂತ್, ಬೇಬಿ ಸಿಟ್ಟರ್ ಆಗಿದ್ರು. ಪ್ಲೇಯಿಂಗ್ 11ರಿಂದ ಹೊರಗುಳಿದಿದ್ದ ಯಂಗ್ ವಿಕೆಟ್ ಕೀಪರ್,  ಧೋನಿಯ ಮುದ್ದಿನ ಮಗಳು ಜಿವಾಳೊಂದಿಗೆ ಕಾಲ ಕಳೆಯುತ್ತಿದ್ದರು. ಪಂದ್ಯ ಆರಂಭವಾಗೋದಕ್ಕೂ ಮುನ್ನ,  ರಿಷಬ್ ಪಂತ್ ಜಿವಾ ಜೊತೆ ಆಟವಾಡುತ್ತಿದ್ದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದ್ಯ ಈ ವಿಡಿಯೋ ನೋಡಿದ ಅಭಿಮಾನಿಗಳು ಪಂತ್ ರನ್ನ  ಮತ್ತೆ ಬೇಬಿ ಸಿಟ್ಟರ್ ಅಂತ ಕರೆದಿದ್ದಾರೆ. ಒಬ್ಬ ಅಭಿಮಾನಿ ಪಂತ್ ರನ್ನ ” ಬೇಬಿ ಸಿಟ್ಟಿಂಗ್ ಮಾಸ್ಟರ್” ಅಂತ ಕರೆದಿದ್ರೆ, ಮತ್ತೊಬ್ಬ ಅಭಿಮಾನಿ “ರಿಯಲ್ ಬೇಬಿ ಸಿಟ್ಟರ್ ಫ್ರಮ್ ಇಂಡಿಯನ್ ಕ್ರಿಕೆಟ್ ಟೀಮ್” ಅಂತ ಬರೆದಿದ್ದಾರೆ.

ಆಸಿಸ್ ನ ಟಿಮ್ ಪೇನ್ ಮಡದಿ ಹಾಗೂ ಮಕ್ಕಳೊಂದಿಗೆ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ ಪೋಸ್

ಈ ಹಿಂದೆ ಕೊಹ್ಲಿ ಪಡೆ, ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ, ಎದುರಾಳಿ ಆಸಿಸ್ ಪಡೆಯ ಟೆಸ್ಟ್ ಕ್ಯಾಪ್ಟನ್ ಟಿಮ್ ಪೈನ್, ಮೈದಾನದಲ್ಲಿ ರಿಷಬ್ ಪಂತ್ ರನ್ನ ಬೇಬಿ ಸಿಟ್ಟರ್ ಅಂತ ಸ್ಲಡ್ಜಿಂಗ್ ಮಾಡಿದ್ರು. ಪರಿಣಾಮ ಸರಣಿಯುದ್ದಕ್ಕೂ ಪಂತ್ ಮತ್ತು ಪೈನ್ ಸ್ಲಡ್ಜಿಂಗ್ ನಡೆಸಿದ್ದು ಸಾಕಷ್ಟು ಚರ್ಚೆ ಆಗಿತ್ತು. ಇದೆಲ್ಲದರ ನಡುವೆ ಸರಣಿ ನಂತರ ಆಸ್ಟ್ರೇಲಿಯಾ ಟೆಸ್ಟ್ ಕ್ಯಾಪ್ಟನ್ ಟಿಮ್ ಪೈನ್ ಮನೆಗೆ ಭೇಟಿ ನೀಡಿದ್ದ ಪಂತ್, ಪೈನ್  ಮಕ್ಕಳನ್ನ ಆಟವಾಡಿಸಿದ್ರು. ಆ ಸಮಯದಲ್ಲಿ ಪಂತ್ ‘ಟೀಮ್ ಇಂಡಿಯಾ ದ ಬೇಬಿ ಸಿಟ್ಟರ್’  ಫೇಮಸ್ ಆಗಿದ್ರು. ಸದ್ಯ ಜಿವಾಳ ಜೊತೆ ಆಟವಾಡುತ್ತಿದ್ದ ಪಂತ್ ರನ್ನ ನೋಡಿ ಅಭಿಮಾನಿಗಳು ಮತ್ತೆ ಬೇಬಿ ಸಿಟ್ಟರ್ ಅಂತ ಕರೆದಿದ್ದಾರೆ.

ಸಚಿನ್ ಮಗಳ ಲವ್ ಸ್ಟೋರಿ ನಿಜಾನಾ..??ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=GQw_O_G-Qsc

- Advertisement -

Latest Posts

Don't Miss