Wednesday, February 5, 2025

Latest Posts

ಸ್ಮೃತಿ ಮಂದಾನ ಅರ್ಧಶತಕ…!

- Advertisement -


ಭಾರತ ಮಹಿಳಾ ತಂಡ ವೆಸ್ಟ್ ಇಂಡೀಸ್ ವಿರುಧ್ಧದ ಏಕದಿನ ಪಂದ್ಯದಲ್ಲಿ 6 ವಿಕಟ್‌ಗಳಿಂದ ಭರ್ಜರಿ ಜಯಗಳಿಸಿದೆ.

ಟೀಂ ಇಂಡಿಯಾ ಆರಂಭಿಕ ಆಟಗಾರರ ನೆರವಿನಿಂದ ಕೊನೆಯ ಹಾಗೂ 3ನೇ ಏಕದಿನ ಪಂದ್ಯವನ್ನು 6 ವಿಕಟ್‌ಗಳಿಂದ ಗೆಲುವಿನ ನಗೆ ಬೀರಿದೆ.
ವೆಸ್ಟ್ ಇಂಡಿಸ್‌ನಲ್ಲಿ ನೆಡೆಯುತ್ತಿದ್ದ 3 ಏಕದಿನ ಪಂದ್ಯಗಳಲ್ಲಿ ಮೊದಲ ಪಂದ್ಯವನ್ನು ಸೋತಿದ್ದ ಭಾರತದ ವನಿತೆಯರ ತಂಡವು ಉಳಿದ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ.
ವೆಸ್ಟ್ ಇಂಡಿಸ್ ತಂಡವು ನಿಗಧಿತ 50 ಓವರಗಳಲ್ಲಿ 194 ರನ್‌ಗಳಿಗೆ ಎಲ್ಲಾ ವಿಕೆಟ್‌ಗಳನ್ನು ಕಳೆದು ಕೊಂಡಿತು. 195 ಗುರಿಯನ್ನು ಬೆನ್ನಟ್ಟಿದ ಭಾರತದ ಮಹಿಳಾ ತಂಡಕ್ಕೆ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನಾ ಅರ್ಧಶತಕದ ನೆರವಿನಿಂದ ಮತ್ತು ಜೆಮಿಜಾ ರೊಡಿಗ್ರಸ್ ನೆರವಿನಿಂದ ಭಾರತದ ವನಿತೆಯರು ಕೊನೆಯ ಏಕದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಂಡರು.
ಈ ಪಂದ್ಯದಲ್ಲಿ ಸ್ಮೃತಿ ಮಂದಾನ 63ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 74 ರನ್‌ಗಳನ್ನು ಕಲೆಹಾಕಿದರು. ಇನ್ನೊಂದೆಡೆ ಜೆಮಿಜಾ ರೊಡಿಗ್ರಸ್ 92 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 69ರನ್‌ಗಳನ್ನು ಗಳಿಸಿದರು.

- Advertisement -

Latest Posts

Don't Miss