Movie News: ಕನ್ನಡದ ನಟ, ನಿರ್ಮಾಪಕ ಮತ್ತು ನಿರ್ದೇಶಕ ರವಿಕಿರಣ್ಗೆ ಸ್ವಾಮೀಜಿಯೊಬ್ಬರು, ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನಲ್ಲಿರುವ ರವಿಕಿರಣ್ಗೆ, 2 ವರ್ಷಗಳ ಹಿಂದೆ ನವೀನ್ ಮತ್ತು ಭಾಗ್ಯಶ್ರೀ ಎಂಬುವವರು ಪರಿಚಯವಾಗಿದ್ದರು. ನಾವು ಅನಾಥಾಶ್ರಮ ನಡೆಸುತ್ತಿದ್ದೇವೆ. ನಮಗೆ ಸಹಾಯ ಮಾಡಿ ಎಂದು ಕೇಳಿದ್ದಾರೆ. ಅದಕ್ಕೆ ರವಿಕಿರಣ್ ಕರುಣೆ ತೋರಿಸಿ, 2 ಸಾವಿರ ರೂಪಾಯಿ ಗೂಗಲ್ ಪೇ ಮಾಡಿದ್ದಾರೆ. ಈ ನವೀನ್ ಮತ್ತು ಭಾಗ್ಯಶ್ರೀ ಜೊತೆ ಸ್ವಾಮೀಜಿಯೊಬ್ಬರು ಇದ್ದರು.
ಈ ಘಟನೆ ಬಳಿಕ ಈ ಮೂವರು ರವಿಕಿರಣ್ಗೆ ಆತ್ಮೀಯರಾದರು. ಬಳಿಕ ದುಬೈನಲ್ಲಿ ಒಂದು ಕಾರ್ಯಕ್ರಮ ನಡೆಯುತ್ತಿದೆ. ನೀವು ಅಲ್ಲಿ ಚೀಫ್ ಗೆಸ್ಟ್ ಆಗಿ ಹೋಗಬೇಕು. ನಾನು ಅವರ ಬಳಿ ಎಲ್ಲ ಮಾತನಾಡಿಯಾಗಿದೆ ಎಂದು ಹೇಳಿದ್ದಾರೆ. ಭಾಗ್ಯಶ್ರೀ ನವೀನ್ ಮಾತಿಗಿಂತ, ಸ್ವಾಮೀಜಿ ಮಾತಿನ ಮೇಲೆ ರವಿಕಿರಣ್ ನಂಬಿಕೆ ಇಟ್ಟಿದ್ದರು. ಹಾಗಾಗಿ ಅವರು ಸುಳ್ಳು ಹೇಳುವುದಿಲ್ಲವೆಂದು ನಂಬಿ, ರವಿಕಿರಣ್ ದುಬೈ ಫ್ಲೈಟ್ ಬುಕ್ ಮಾಡಲು, ಮೊದಲು 25 ಸಾವಿರ ರೂಪಾಯಿ ಕೊಟ್ಟಿದ್ದಾರೆ.
ಬಳಿಕ ಆ ಖರ್ಚು ಈ ಖರ್ಚು ಎಂದು ಸ್ವಾಮೀಜಿ, ಭಾಗ್ಯಶ್ರೀ ಮತ್ತು ನವೀನ್, ರವಿಕಿರಣ್ ಬಳಿ ಚೆನ್ನಾಗಿ ದುಡ್ಡು ಪೀಕಿದ್ದಾರೆ. ಅದು ಲಕ್ಷ ದಾಟಿದ ಬಳಿಕ, ನೀವು ಹೋಗಬೇಕಾಗಿದ್ದ ಕಾರ್ಯಕ್ರಮ ತಡವಾಗುತ್ತಿದೆ. ಹಾಗಾಗಿ ನೀವು ಆ ಕಾರ್ಯಕ್ರಮಕ್ಕೆ ಹೋಗುವುದು ಬೇಡ. ನೀವು ಈಗಾಗಲೇ ಕೊಟ್ಟಿರುವ ದುಡ್ಡಿಗೆ, ಇನ್ನೊಂದಿಷ್ಟು ಲಕ್ಷ ಸೇರಿಸಿದರೆ, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ, ಒಳ್ಳೆ ಸೈಟ್ ಕೊಡಿಸುತ್ತೇನೆ ಎಂದು ಹೇಳಿದ್ದಾರೆ.
4ರಿಂದ 5 ಲಕ್ಷ ತೆಗೆದುಕೊಂಡ ಬಳಿಕ ಏರ್ಪೋರ್ಟ್ ರಸ್ತೆಯಲ್ಲಿ ಸೈಟ್ ಕೊಡಿಸುವುದಾಗಿ ಹೇಳಿದ್ದಾರೆ. ಅದೂ ಯಾವಾಗ ಸಾಧ್ಯವಾಗಲಿಲ್ಲವೋ, ಆಗ ರವಿಕಿರಣ್ಗೆ ಇದು ಮೋಸವೆಂದು ತಿಳಿದಿದೆ. ಆಗ ಎಚ್ಚೆತ್ತುಕೊಂಡ ರವಿಕಿರಣ್, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳು ಎಸ್ಕೇಪ್ ಆಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಶೆಟ್ಟರ್ ಕಡೆಯಿಂದ ಸನ್ಮಾನ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ.. ಕಾರಣವೇನು..?
ಎಲ್ಲಾ ರೀತಿಯ ಕ್ರಮಕ್ಕೆ ಸರ್ಕಾರ ಸಿದ್ಧವಾಗಿದೆ ಎಂದಿದ್ದಾರೆ: ಕೋವಿಡ್ ಬಗ್ಗೆ ಸಿಎಂ ಮಾತು




