International News: ಮುಂಬೈ ಸರಣಿ ಸ್ಪೋಟದ ರೂವಾರಿ, ಭೂಗತ ಪಾತಕಿ ದಾವುದ್ ಇಬ್ರಾಹಿಂ ವಿಷ ಸೇವಿಸಿದ್ದಾನೆಂದು ಶಂಕೆ ವ್ಯಕ್ತವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆಂಬ ಮಾಹಿತಿ ಇದೆ.
ದೂವೂದ್ ಸ್ಥಿತಿ ಗಂಭೀರವಾಗಿದ್ದು, ಪಾಕಿಸ್ತಾನದ ಕರಾಚಿಯ ಆಸ್ಪತ್ರೆಯೊಂದರಲ್ಲಿ ಇಬ್ರಾಹಿಂ ಚಿಕಿತ್ಸೆ ಪಡೆಯುತ್ತಿದ್ದಾನೆಂದು ಹೇಳಲಾಗಿದೆ. ಮೂಲಗಳ ಪ್ರಕಾರ, ದಾವೂದ್ ವಿಷ ಸೇವಿಸಿದ್ದಾನೆಂದು ತಿಳಿದು ಬಂದಿದೆ. ಅಲ್ಲದೇ, ದಾವೂದ್ ದಾಖಲಾಗಿರುವ ಆಸ್ಪತ್ರೆ ಸುತ್ತಲೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕುಟುಂಬದವರು ಮತ್ತು ಅಧಿಕಾರಿಗಳ ಭೇಟಿಗಷ್ಚೇ ಅವಕಾಶ ನೀಡಲಾಗಿದೆ.
ದಾವೂದ್ ಸಂಬಂಧಿಕರ ಜೊತೆ ಸಂಪರ್ಕದಲ್ಲಿರುವ ಮುಂಬೈ ಪೊಲೀಸರು ದಾವೂದ್ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ದಾವೂದ್‌ಗೆ ಪಾಕ್ ಭದ್ರತಾ ಪಡೆಗಳು ಆಶ್ರಯ ನೀಡಿ, ಭದ್ರತೆ ಕಲ್ಪಿಸಿದ್ದಾರೆ. ದಾವೂದ್ ಎರಡನೇಯ ಮದುವೆಯಾಗಿ, ಕರಾಚಿಯಲ್ಲಿ ವಾಸವಾಗಿದ್ದಾನೆಂಬ ಮಾಹಿತಿ ಇದೆ.
ಶೆಟ್ಟರ್ ಕಡೆಯಿಂದ ಸನ್ಮಾನ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ.. ಕಾರಣವೇನು..?
ಎಲ್ಲಾ ರೀತಿಯ ಕ್ರಮಕ್ಕೆ ಸರ್ಕಾರ ಸಿದ್ಧವಾಗಿದೆ ಎಂದಿದ್ದಾರೆ: ಕೋವಿಡ್ ಬಗ್ಗೆ ಸಿಎಂ ಮಾತು




