Friday, March 14, 2025

Latest Posts

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾಗಲೇ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ನಟಿ..

- Advertisement -

ಮುಂಬೈ: ನಟಿಯೊಬ್ಬಳು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾಗಲೇ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ಈಕೆಯೊಂದಿಗಿದ್ದ ಇಬ್ಬರು ಯುವತಿಯರನ್ನ ಪೊಲೀಸರು ರಕ್ಷಿಸಿದ್ದಾರೆ. ಅಲ್ಲದೇ ಈಕೆಯನ್ನ ಅರೆಸ್ಟ್ ಮಾಡಿರುವ ಮುಂಬೈ ಪೊಲೀಸರು, ಸೆಕ್ಷನ್ 370ರ ಅಡಿಯಲ್ಲಿ ಈಕೆ ವಿರುದ್ಧ ದೂರು ದಾಖಲಿಸಿದ್ದಾರೆ.

ಬಾಲಿವುಡ್ ನಟಿ ಮತ್ತು ನಿರ್ದೇಶಕಿಯಾಗಿರುವ ಆರತಿ ಮಿತ್ತಲ್ (27), ಬಂಧಿತ ಆರೋಪಿಯಾಗಿದ್ದಾಳೆ. ಬಾಲಿವುಡ್‌ನಲ್ಲಿ ಹಿರೋಯಿನ್‌ ಆಗಬೇಕು ಎಂಬ ಕನಸಿನೊಂದಿಗೆ ಬರುವ ಹೆಣ್ಣು ಮಕ್ಕಳಿಗೆ ಹಣದ ಆಮಿಷವೊಡ್ಡಿ, ಈ ರೀತಿ ದಂಧೆಗೆ ನೂಕುತ್ತಿದ್ದಳು ಎಂಬ ಮಾಹಿತಿ ಇದೆ. ಈಕೆಯೊಂದಿಗೆ ಸಿಕ್ಕಿಬಿದ್ದ ಇಬ್ಬರು ಹೆಣ್ಣು ಮಕ್ಕಳು ಕೂಡ ಮಾಡೆಲ್‌ಗಳೇ ಆಗಿದ್ದಾರೆ.

ನಟಿ, ಆ ಮಾಡೆಲ್‌ಗಳಿಗೆ ತಲಾ 15 ಸಾವಿರ ರೂಪಾಯಿ ಕೊಡುತ್ತಾಳೆ ಎಂದು ಹೇಳಿದ್ದಳಂತೆ. ಈ ಕಾರಣಕ್ಕೆ ಅವರಿಬ್ಬರೂ, ಈ ಕೆಟ್ಟ ಕೆಲಸಕ್ಕೆ ಒಪ್ಪಿಕೊಂಡು ಬಂದಿದ್ದಾರೆ. ಇನ್ನು ಈಕೆಯ ಜಾಲವನ್ನ ಪೊಲೀಸರು ಬೇಧಿಸಿದ ರೀತಿಯೇ ರೋಚಕ. ಈಕೆ ಮಾಡೆಲ್‌ಗಳನ್ನ ಈ ರೀತಿಯಾಗಿ ಬಳಸಿಕೊಳ್ಳುತ್ತಿದ್ದ ವಿಷಯ ಪೊಲೀಸ್ ಅಧಿಕಾರಿ, ಮನೋಜ್ ಸುತಾರ್ ಅವರಿಗೆ ಮೊದಲೇ ತಿಳಿದಿತ್ತು. ಹಾಗಾಗಿ ಅವರೇ ಈಕೆಯನ್ನು ಗಿರಾಕಿಯ ವೇಷದಲ್ಲಿ ಕಾಂಟಾಕ್ಟ್ ಮಾಡಿದ್ದರು.

ಇವರ ಬಳಿ ನಟಿ, 60 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದಳು. ಇಬ್ಬರು ಮಾಡೆಲ್‌ಗಳ ಫೋಟೋವನ್ನು ಇವರ ಮೊಬೈಲ್‌ಗೆ ಕಳುಹಿಸಿದ್ದಳು. ಗೋರೆಗಾಂವ್ ಹೊಟೇಲ್‌ಗೆ ಮಾಡೆಲ್‌ಗಳು ಬರುತ್ತಾರೆಂದು ಹೇಳಿದ್ದಳು. ಅದರಂತೆ ಸುತಾರ್, ತಮ್ಮ ಪೊಲೀಸ್ ಗುಂಪಿನೊಂದಿಗೆ ಹೊಟೇಲ್‌ಗೆ ತೆರಳಿದ್ದಾರೆ. ಆದರೆ ಆ ಬಗ್ಗೆ ಯಾರಿಗೂ ಸುಳಿವು ಸಿಗದ ಹಾಗೆ ಇದ್ದಾರೆ.

ಇಬ್ಬರು ಪೊಲೀಸರನ್ನ ಗ್ರಾಹಕರ ಸೋಗಿನಲ್ಲಿ ಆ ಹೋಟೇಲ್‌ಗೆ ಕಳುಹಿಸಿ, 2 ರೂಂ ಬುಕ್ ಮಾಡಿಸಿದ್ದಾರೆ. ಈ ವೇಳೆ ನಟಿ, ಮಾಡೆಲ್‌ಗಳೊಂದಿಗೆ ಬಂದು, ಗ್ರಾಹಕರಿಗೆ ಕಾಂಡೋಮ್‌ ನೀಡಿದ್ದಾಳೆ. ಈಕೆ ಹೊಟೇಲ್‌ಗೆ ಬಂದಾಗಿಂದ ಆಕೆಯ ವೀಡಿಯೋ ಕ್ಯಾಮೆರಾದಲ್ಲಿ ರೆಕಾರ್ಡ್ ಆಗುತ್ತಿದ್ದವು. ಆಕೆ ರೂಂಗೆ ಹೋದಾಗ, ಆಕೆಯನ್ನ ರೂಂನಲ್ಲಿ ಲಾಕ್ ಮಾಡಿ, ಪೊಲೀಸರು ಆಕೆಯನ್ನ ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ. ಈಕೆಯನ್ನ 370 ಕೇಸ್ ಅಡಿ ಅರೆಸ್ಟ್ ಮಾಡಿ, ಜೈಲಿಗೆ ಹಾಕಲಾಗಿದೆ.

ರಾಕಿ ಮೀಟ್ಸ್ ರಾಧಿಕಾ: ಕೆಜಿಎಫ್ ಶೂಟಿಂಗ್ ನೆನಪು ಮೆಲುಕು ಹಾಕಿದ ರಾಧೆ..

ಗಿಚ್ಚಿ ಗಿಲಿಗಿಲಿಯಲ್ಲಿ ತನ್ನದೇ ಛಾಪು ಮೂಡಿಸಿದ ಜಾಹ್ನವಿ.. ಸ್ಕಿಟ್ ಮೂಲಕ ಭೇಷ್ ಎನ್ನಿಸಿಕೊಂಡ ಆ್ಯಂಕರ್

ಕೊನೆಗೂ ಮಾಜಿ ಪತಿಯ ಡೇಟಿಂಗ್ ಬಗ್ಗೆ ಮೌನ ಮುರಿದ ನಟಿ ಸಮಂತಾ..

- Advertisement -

Latest Posts

Don't Miss