Wednesday, July 2, 2025

Latest Posts

MES ಪುಂಡರ ಜಾಮೀನು ಅರ್ಜಿ ತಿರಸ್ಕಾರ..!

- Advertisement -

ಬೆಳಗಾವಿ :  ನಗರದಲ್ಲಿ ಪುಂಡಾಟ ಮೆರೆದಿದ್ದ ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ರಮಾಕಾಂತ್(Ramakant), ಎಂಇಎಸ್​(MES)ನ ಮುಖಂಡ ಶುಭಂ ಶೆಳ್ಕೆ (Shubham Shellke)ಸೇರಿ 38 ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಲಾಗಿದೆ. ಬೆಳಗಾವಿಯ 8ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಪುಂಡಾಟ ಮೆರೆದಿದ್ದ 38 ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಿದೆ.

ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ, ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೊಲೆ ಯತ್ನದ ಗಂಭೀರ ಆರೋಪ ಇದೆ ಎಂದು ವಾದ ಮಾಡಲಾಗಿದೆ. ಕರ್ನಾಟಕ ಸರ್ಕಾರ ಪರ ಸರ್ಕಾರಿ ಅಭಿಯೋಜಕ ಕಿರಣ್ ಪಾಟೀಲ್ ಈ ವಾದ ಮಂಡಿಸಿದ್ದರು. ಹೀಗಾಗಿ ಸದ್ಯ ನ್ಯಾಯಾಧೀಶ ಹೇಮಂತ ಕುಮಾರ್‌ರಿಂದ ಎಂಇಎಸ್ ಪುಂಡರ ಜಾಮೀನು ಅರ್ಜಿ ತಿರಸ್ಕಾರವಾಗಿದೆ.
ಬೆಂಗಳೂರಲ್ಲಿ ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ್ದನ್ನು ಖಂಡಿಸಿ, ಡಿ‌.17ರಂದು ಬೆಳಗಾವಿಯ ಸಂಭಾಜಿ ವೃತ್ತದಲ್ಲಿ ಎಂಇಎಸ್, ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಪ್ರತಿಭಟನೆ ನಡೆಸಿತ್ತು. ಆದರೆ ಪ್ರತಿಭಟನೆ ವೇಳೆ ಸರ್ಕಾರಿ ವಾಹನಗಳನ್ನೇ ಗುರಿಯಾಗಿಸಿ ಕಲ್ಲು ತೂರಾಟ ನಡೆಸಿದ್ದ ಕೆಲ ಕಿಡಿಗೇಡಿಗಳು, ನಂತರ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಈವರೆಗೂ 38 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು 22 ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಅದರಲ್ಲಿ ಎಂಇಎಸ್ ಮಾಜಿ ಮೇಯರ್ ಸರಿತಾ ಪಾಟೀಲ್ ಸೇರಿ 11 ಆರೋಪಿಗಳು ತಲೆಮರಿಸಿಕೊಂಡು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ 11 ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ತಿರಸ್ಕಾರ ಮಾಡಲಾಗಿದೆ.

- Advertisement -

Latest Posts

Don't Miss