- Advertisement -
Mysore News: ಬೆಂಗಳೂರು- ಮೈಸೂರು ಟೋಲ್ ತಪ್ಪಿಸುತ್ತಿದ್ದವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಕ್ ಕೊಟ್ಟಿದ್ದು, ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಸಂಪರ್ಕ ಕಡಿತಗೊಳಿಸಿದೆ.
ಇಷ್ಟು ದಿನ ಹಲವು ವಾಹನಗಳು ಬಿಡದಿಯ ಬಳಿ ಬಂದು ಎಕ್ಸಿಟ್ ಆಗುತ್ತಿದ್ದವು. ಆದರೆ ಇದೀಗ ಹೀಗೆ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದ್ದು, ಟೋಲ್ ಕಟ್ಟಿಯೇ ಮುಂದೆ ಹೋಗಬೇಕು. ಬಿಡದಿಯಿಂದ ಮುಂದೆ ಸರ್ವಿಸ್ ರಸ್ತೆಗೆ ಇಳಿದು, ಟೋಲ್ ತಪ್ಪಿಸುವ ಕೆಲಸಕ್ಕೆ ಶೀಘ್ರವೇ ಬ್ರೇಕ್ ಹಾಕಲಾಗುತ್ತಿದ್ದು, ಹೆದ್ದಾರಿಯಿಂದಲೇ ವಾಹನ ಪ್ರಯಾಣ ಮಾಡಬೇಕಾಗಿದೆ.
ಆದರೆ ಈ ರಸ್ತೆಗೆ ಎಂಟ್ರಿ ಮಾತ್ರ ಇದ್ದು, ಎಕ್ಸಿಟ್ ಬಂದ್ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡೆಗೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದು, ಒಂದು ಸೂಚನಾ ಫಲಕ ಸಹ ಅಳವಡಿಸಲಿಲ್ಲವೆಂದು ಕಿಡಿ ಕಾರಿದ್ದಾರೆ.
- Advertisement -