ತಮಿಳುನಾಡು : ಕನ್ನಡದಲ್ಲಿ ಗೂಳಿ ಕಾಳಗ ಎಂದು ಕರೆಸಿಕೊಳ್ಳುವ ಈ ಕ್ರೀಡೆ ತಮಿಳುನಾಡಿನ ಬಹುಮುಖ್ಯ ಗ್ರಾಮೀಣ ಕ್ರೀಡೆ ಬರೀ ಕ್ರೀಡೆಯಷ್ಟೇ ಅಲ್ಲದೆ ತಮಿಳುನಾಡಿನ ಸಂಕ್ರಾಂತಿ ಹಬ್ಬದ ಒಂದು ಸಾಂಸ್ಕೃತಿಕ ಆಚರಣೆಯೂ ಕೂಡ. ಚೆನ್ನಾಗಿ ಕೊಬ್ಬಿದ ಹೋರಿಯೊಂದನ್ನು ಮೊದಲೇ ತಯಾರಾಗಿ ನಿಂತ ಜನಗಳ ಗುಂಪಿಗೆ ಹಗ್ಗವಿಲ್ಲದೆ ಬಿಡಲಾಗುತ್ತದೆ.
ಕನ್ನಡದಲ್ಲಿ ಗೂಳಿ ಎಂದು ಕರೆಸಿಕೊಳ್ಳುವ ಜಲ್ಲಿಕಟ್ಟು ಅದೊಂದು ಸಾಂಪ್ರದಾಯಿಕ ಕ್ರೀಡೆ. ಇದನ್ನು ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿ ಅಥವಾ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಆಡಿಸಲಾಗುತ್ತದೆ. ಈ ಕ್ರೀಡೆಯಲ್ಲಿ ಸಾವಿರಾರು ಮಂದಿ ಸೇರಿವ ನಿರೀಕ್ಷೆ ಇರುತ್ತದೆ. ಇದನ್ನು ಮನಗಂಡ ತಮಿಳುನಾಡು ಸರ್ಕಾರ ಕಟ್ಟುನಿಟ್ಟಾದ ಕೋವಿಡ್-19 ಸುರಕ್ಷಾತಾ ಮಾನದಂಡಗಳೊಂದಿಗೆ ಪೊಂಕಲ್ ಹಬ್ಬದ ಸಂದರ್ಭದಲ್ಲಿ ಜನಪ್ರೀಯ ಸಾಂಪ್ರದಾಯಿಕ ಗೂಳಿ ಪಳಗಿಸುವ ಕ್ರೀಡೆಯಾದ ಜಲ್ಲಿಕಟ್ಟು ನಡೆಸಲು ಸರ್ಕಾರ ಅನುಮತಿ ನೀಡಿದೆ.
ನೋಂದಣಿ ಸಮಯದಲ್ಲಿ ಗೂಳಿ ಮಾಲೀಕರು ಮತ್ತು ಅದರ ತರಬೇತಿದಾರರಿಗೆ ಮಾತ್ರ ಅವಕಾಶವಿರುತ್ತದೆ.ಜಲ್ಲಿಕಟ್ಟು 2022ಕ್ಕೆ ಸರ್ಕಾರವು ತೆರೆದ ಸ್ಥಳಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು 150 ಅಥವಾ 50% ಆಸನ ಸಾಮರ್ಥ್ಯ ಇರುತ್ತದೆ.
ಜಲ್ಲಿಕಟ್ಟೆ ನೋಡಲು ಬರುವ ಎರಡು ದಿನ ಮೊದಲು ಆರ್.ಟಿ.ಪಿ.ಸಿ.ಆರ್ ಋಣಾತ್ಮಕ ವರದಿ ಮತ್ತು 2 ಡೋಸ್ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣ ಪತ್ರ ತೋರಿಸಿ ಬೇಕು. ಜಲ್ಲಿಕಟ್ಟುಗಳಲ್ಲಿ ಭಾಗವಹಿಸುವ ಗೂಳಿಗಳಿಗೆ ಹಾನಿ ಮಾಡದಂತೆ ಸಂಘಟಕರು ಮತ್ತು ಭಾಗವಹಿಸುವವರಿಗೆ ನಿರ್ದೇಶನ ನೀಡಿದೆ. ಕೋವಿಡ್-19 ನಿಂದ ಜಲ್ಲಿಕಟ್ಟು, ಮಂಜುವಿರಾಟ್ಟು ಮತ್ತು ವಡಮಡುಗಳಲ್ಲಿ 300 ಮಂದಿ ಪಳಗಿಸುವವರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ ಎಂದು ಎಂಕೆ ಸ್ಟ್ಯಾಲಿನ್ (MK Stalin) ನೇತೃತ್ವದ ಸಭೆಯಲ್ಲಿ ತಿಳಿಸಲಾಗಿದೆ.