Sunday, April 20, 2025

Latest Posts

ಮೊದಲು ರಾಜ್ಯದಲ್ಲಿ ಸರ್ಕಾರ ಎಂಇಎಸ್ ಬ್ಯಾನ್ ಮಾಡಬೇಕು: ಬಸವರಾಜ್ ಹೊರಟ್ಟಿ

- Advertisement -

Dharwad News: ಧಾರವಾಡ:ಧಾರವಾಡದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಮಾಧ್ಯಮದವರ ಜೊತೆ ಮಾತನಾಡಿದ್ದು, ಬೆಳಗಾವಿಯಲ್ಲಿ ಎಂ ಇ ಎಸ್ ನವರ ಪುಂಡಾಟ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಎಂ ಇ ಎಸ್ ಬ್ಯಾನ್ ಮಾಡಬೇಕು. ನಾನು ಮೊದಲನೇಯ ದಿನ ಪತ್ರಿಕೆಯಲ್ಲಿ ಬಂದಾಗ ಹೇಳಿದ್ದೇನೆ. ವಿಧಾನ ಪರಿಷ್ಯತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣ ಸ್ವಾಮಿ ಅವರಿಗೆ ಹೇಳಿದ್ದೇನೆ. ಈ ವಿಚಾರವನ್ನ ಗಂಭಿರವಾಗಿ ತೆಗೆದುಕ್ಕೊಳ್ಳಬೇಕು ಎಂದು ಹೇಳಿದ್ದೆ. ಪ್ರತಿ ಸಾರಿನೂ ಹೀಗೆ ಮಾಡ್ತಾರೆ. ನಮ್ಮಲ್ಲಿ ರಾಜಕಾರಣಿಗಳು ಎಲ್ಲವನ್ನ ಲಿಬರಲ್ ಆಗಿ ತಗೋತಾರೆ. ಮಹಾರಾಷ್ಟ್ರ ದವರು ನಮ್ಮ ರಾಜ್ಯದ ಮೆಲೆ ಡಿಪೆಂಡ್ ಇದ್ದಾರೆ. ಸೊಲ್ಲಾಪೂರದಲ್ಲಿ 80 % ಜನ ಕನ್ನಡ ಮಾತನಾಡುತ್ತಾರೆ. ಬೆಳಗಾವಿಯ ಎಂ ಇ ಎಸ್ ನವರಿಗೆ ಉದ್ಯೂಗವಿಲ್ಲ. ಸುವರ್ಣ ಸೌಧ ನಿರ್ಮಾಣ ಆಗಲೂ ಕಾರಣ ಅಂದ್ರೆ ಎಂ ಇ ಎಸ್ ನವರ ಕಾಟಕ್ಕೆ ಆಗಿದ್ದು. ಕೆಲ ರಾಜಕಾರಣಿಗಳು ಎಂ ಇ ಎಸ್ ನವರು ಓಟ್ ಬ್ಯಾಂಕ್ ಮಾಡಿಕ್ಕೊಂಡಿದ್ದಾರೆ. ಕಂಡಕ್ಡರ್ ಮೆಲೆ ಪೋಕ್ಸೋ ಕೇಸ್ ಹಾಕಿಸಿದ್ದಾರೆ. ರಾಜ್ಯ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೊರಟ್ಟಿ ಹೇಳಿದ್ದಾರೆ.

ಬೆಳಗಾವಿ, ನಿಪ್ಪಾಣಿ, ಖಾನಾಪೂರ, ದಲ್ಲಿ ಕರ್ನಾಟಕದ ಕನ್ನಡಿಗರು ಇದೆವೋ ಇಲ್ಲವೋ ಎಂಬುದು ಸಂಶಯ ಬರುತ್ತೆ. ಕನ್ನಡ ಬಂದವರೆ ಮರಾಠಿ ಮಾತನಾಡುತ್ತಾರೆ. ಬೆಳಗಾವಿಯಲ್ಲಿ ಈ ವಿಷಯವನ್ನ ಗಂಭಿರವಾಗಿ ಪರಿಗಣಿಸಬೇಕು. ಕನ್ನಡಪರ ಹೋರಾಟಗಾರರಿಗೆ ರಕ್ಷಣೆ ಕೊಡಬೇಕು. ನಮ್ಮಲ್ಲಿ ನಮ್ಮವರೆ ವೈರಿಗಳಿದ್ದಾರೆ. ಮಹಾರಾಷ್ಟ್ರ ಸರಕಾರ ಎಂ ಇ ಎಸ್ ನವರನ್ನ ಯಾರು ಅರೆಸ್ಟ್ ಮಾಡಲ್ಲ.

ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಮಾತನಾಡುತ್ತೆನೆ. ಶಾಸಕರುಗಳು ಮತಬ್ಯಾಂಕ್ ಮಾಡಿಕ್ಕೊಂಡಿದ್ದಾರೆ. ರಾಜಕೀಯ ಎಲ್ಲವನ್ನು ಬಿಟ್ಟು ಬೆಳಗಾವಿಯಲ್ಲಿ ಇಂತಹ ಘಟನೆಗಳು ಆಗದಂತೆ ನೋಡಿಕ್ಕೊಳ್ಳಬೇಕು. ಎಂ ಇ ಎಸ್ ನವರು ದೇಶದ್ರೋಹಿ ಕೆಲಸವನ್ನ ಮಾಡುತ್ತಿದ್ದಾರೆ ಇಂತವರನ್ನ ಬ್ಯಾನ್ ಮಾಡಬೇಕು ಎಂದು ಹೊರಟ್ಟಿ ಹೇಳಿದ್ದಾರೆ.

ನಾನು ಎಜ್ಯೂಕೇಶನ್ ಮಿನಿಸ್ಟರ್ ಇದ್ದಾಗ ಬಹಳ‌ ಹಾರಾಡಿದ್ದರು. ಮುಂಬಯಿಯಲ್ಲಿ ನಮ್ಮ ಶಾಲೆಗಳನ್ನ ಬಂದ ಮಾಡಿದ್ದರು. ಖಾನಾಪೂರದಲ್ಲಿ ಕನ್ನಡ ಹೈಸ್ಕೂಲ್ ನಡೆಸಲು ಬಿಡಲಿಲ್ಲ. ನಾನು ತೆಗೆದುಕ್ಕೊಂಡಂತ ನಿರ್ಣಯಗಳನ್ನ ಈಗಿನ ಸರಕಾರ ತೆಗೆದುಕ್ಕೊಳ್ಳುತ್ತಿಲ್ಲ. ನನ್ನ ಕಾರ್ಯಕ್ರಮವನ್ನ ಬಾಯ್ಕೋಟ್ ಮಾಡಿದ್ರು. ನಮ್ಮ‌ ನೀರು,ಗಾಳಿ,ಸೇವಿಸುತ್ತಾರೆ. ಕಂಡಕ್ಟರ್ ಮೆಲೆ ಪೋಕ್ಸೋ ಕೇಸ್ ಹಾಕಿದ್ದಾರೆ. ಅದು ಸರಿಯಲ್ಲ. ಮೊದಲು ರಾಜ್ಯದಲ್ಲಿ ಸರಕಾರ ಎಂ ಇ ಎಸ್ ಅನ್ನ‌ ಬ್ಯಾನ್ ಮಾಡಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಧಾರವಾಡದಲ್ಲಿ ಹೇಳಿಕೆ ನೀಡಿದ್ದಾರೆ.

- Advertisement -

Latest Posts

Don't Miss