Movie News: ಹಲವು ಪ್ರೇಮಕಥೆಯಾಧಾರಿತ ಚಿತ್ರಗಳು ಮತ್ತು ಹಾಡುಗಳಲ್ಲಿ ಅಭಿನಯಿಸುವ ಮೂಲಕ ‘ಕಿಂಗ್ ಆಫ್ ರೊಮ್ಯಾನ್ಸ್’ ಎಂಬ ಬಿರುದಿಗೆ ಭಾಜನರಾದವರು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್. ಆ ಬಿರುದನ್ನು ನಿಜಗೊಳಿಸುವಂತೆ ಅವರು ಇನ್ನೊಮ್ಮೆ ಒಂದು ಅದ್ಭುತ ಗೀತೆಯೊಂದಿಗೆ ವಾಪಸ್ಸಾಗಿದ್ದಾರೆ.
‘ಜವಾನ್’ ಚಿತ್ರದ ‘ಹಯ್ಯೋಡಾ’ ಎಂಬ ಹಾಡು ಇಂದು ಬಿಡುಗಡೆಯಾಗಿದ್ದು, ಭಾರತೀಯ ಚಿತ್ರರಂಗದದಲ್ಲೇ ಹಲವು ರೊಮ್ಯಾಂಟಿಕ್ ಮತ್ತು ಮಧುರಗೀತೆಗಳಿಗೆ ಜನಪ್ರಿಯರಾದ ಶಾರುಖ್ ಖಾನ್ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಅನಿರುದ್ಧ್ ರವಿಚಂದರ್ ಸಂಯೋಜಿಸಿದ್ದು, ಅನಿರುದ್ಧ್ ಮತ್ತು ಪ್ರಿಯಾ ಮಾಲಿ ಹಾಡಿದ್ದಾರೆ. ಈ ಸುಮಧುರ ಹಾಡಿಗೆ ವಿವೇಕ್ ಸಾಹಿತ್ಯ ರಚಿಸಿದ್ದಾರೆ.
ಇದೇ ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಂಡಿರುವ ಶಾರುಖ್ ಖಾನ್ ಮತ್ತು ನಯನತಾರಾ, ತೆರೆಯ ಮೇಲೆ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ತಮ್ಮ ಅಭಿನಯದಿಂದ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು, ಭಾರತೀಯ ಚಿತ್ರರಂಗದ ಜನಪ್ರಿಯ ಕೊರಿಯೋಗ್ರಾಫರ್ ಆಗಿರುವಂತಹ ಫರಾ ಖಾನ್ ನೃತ್ಯ ನಿರ್ದೇಶನ ಮಾಡಿದ್ದಾರೆ.
‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಸಂಸ್ಥೆಯಡಿ ಗೌರಿ ಖಾನ್ ನಿರ್ಮಿಸಿದರೆ, ಗೌರವ್ ವರ್ಮಾ ಸಹನಿರ್ಮಾಪಕರಾಗಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶಿಸಿರುವ ಈ ಚಿತ್ರವು ಜಗತ್ತಿನಾದ್ಯಂತ ಸೆಪ್ಟೆಂಬರ್ 7ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
Sunny Leone : ಭಾರತದಲ್ಲಿ ಕಳೆದು ಕೊಂಡರಂತೆ ಸನ್ನಿಲಿಯೋನ್ ಮೂರು ಕಾರು..?!