Movie News: ಕೆ.ಜಿ.ಎಫ್, ಕಾಂತಾರ ದಂತಹ ಯಶಸ್ವಿ ಚಿತ್ರಗಳ ನಿರ್ಮಾಣದ ಮೂಲಕ ವಿಶ್ವದಾದ್ಯಂತ ಜನಪ್ರಿಯವಾಗಿರುವ ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರ್ ನಿರ್ಮಿಸಿರುವ ಚಿತ್ರ “ಧೂಮಂ. ಈ ಚಿತ್ರದ ಮೂಲಕ ಹೊಂಬಾಳೆ ಫಿಲಂಸ್ ಮಲೆಯಾಳಂ ಚಿತ್ರರಂಗಕ್ಕೂ ಅಡಿಯಿಟ್ಟಿದೆ. “ಲೂಸಿಯಾ”, “ಯೂಟರ್ನ್” ಮಂತಾದ ಜನಪ್ರಿಯ ಚಿತ್ರಗಳ ನಿರ್ದೇಶಕ ಪವನ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಕನ್ನಡ ಹಾಗೂ ಮಲೆಯಾಳಂನಲ್ಲಿ ಇದೇ ಜೂನ್ 23 ರಂದು “ಧೂಮಂ” ಚಿತ್ರ ಬಿಡುಗಡೆಯಾಗಲಿದೆ.
“ಧೂಮಂ” ಚಿತ್ರದ ಕನ್ನಡ ಅವತರಣಿಕೆಯನ್ನು ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಕೇರಳದಲ್ಲೂ ಸುಮಾರು 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣುತ್ತಿದೆ. ಜೂನ್ 29ರಂದು ತೆಲುಗು ಹಾಗೂ ತಮಿಳಿನಲ್ಲಿ ತೆರೆಗೆ ಬರಲಿದೆ.
ಫಹಾದ್ ಫಾಸಿಲ್, ಅಪರ್ಣ ಬಾಲಮುರಳಿ, ಅಚ್ಯುತ್ ಕುಮಾರ್, ರೋಶನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್, ಅನು ಮೋಹನ್, ಜಾಯ್ ಮ್ಯಾಥ್ಯೂ, ನಂದು ಮುಂತಾದವರು ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಸುರೇಶ್ ಅವರ ಸಂಕಲನ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಪವನ್ ಕುಮಾರ್ ಅವರೇ ಬರೆದಿದ್ದಾರೆ. ಈ ಚಿತ್ರದ ಟ್ರೇಲರ್ ಈಗಾಗಲೇ ಸಾಕಷ್ಟು ಪ್ರಶಂಸೆ ಪಡೆದಿದೆ. ಚಿತ್ರದ ಬಗ್ಗೆ ನಿರೀಕ್ಷೆ ಇದೆ.
“ಕೊರಗಜ್ಜ” ಚಿತ್ರಕ್ಕೆ 3ನೇ ಬಾರಿ ಕ್ಲೈಮ್ಯಾಕ್ಸ್ ರೀ ಶೂಟ್: ಹಾಲಿವುಡ್ ತಂತ್ರಜ್ಞರಿಂದ ಗ್ರಾಫಿಕ್ಸ್ ಟಚ್
‘ಪರಂವಃ’ ಚಿತ್ರದ ಎರಡನೇ ಹಾಡು ರಿಲೀಸ್ ಮಾಡಿದ ಲವ್ಲಿ ಸ್ಟಾರ್ ಪ್ರೇಮ್..
ಯಾರಿಗೂ ನೋವುಂಟು ಮಾಡುವ ಉದ್ದೇಶ ನಮ್ಮಗಿಲ್ಲ “ಬ್ರಾಹ್ಮಿನ್ಸ್ ಕೆಫೆ” ಧಾರಾವಾಹಿ ತಂಡದ ಸ್ಪಷ್ಟನೆ