ಮೈಸೂರು: ಮೊದಲ ಪತ್ನಿಯ ಕೊಲೆಯ ಜೈಲುವಾಸದ ನಂತರ ಎರಡನೇ ಪತ್ನಿಯ ಕೊಲೆ.ನಂಜನಗೂಡಿನ ನವಿಲೂರು ಗ್ರಾಮದ ಈರಯ್ಯ ಎಂಬವರು ಮೊದಲ ಪತ್ನಿಯನ್ನು ಕೊಲೆ ಮಾಡಿ ಜೈಲಿಗೆ ಸೇರಿದ್ದರು. ಜೈಲಿನ ಸೆರೆವಾಸದ ನಂತರ ನಿಂಗವ್ವ ಎಂಬುವವರನ್ನು ಮತ್ತೊಂದು ಮದುವೆ ಮಾಡಿಕೊಂಡಿದ್ದು ಅವರ ಮೇಲೆ ಹಲ್ಲೆಗೆ ಮುಂದಾದಾಗ ಅವರ ತಾಯಿ ತಂದೆ ಹಾಗೂ ಇನ್ನಿಬ್ಬರು ತಡೆಯಲು ಬಂದಿದ್ದಾರೆ, ಆಗ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ. ಹೆಂಡತಿ ನಿಂಗವ್ವ ಸಾವನ್ನಪ್ಪಿದ್ದು ಅವರ ತಂದೆ ತಾಯಿ ಗಂಭೀರ ಗಾಯಗಳಿಂದ ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.




