Thursday, July 10, 2025

Latest Posts

ನಮ್ಮ ಪ್ರಾರ್ಥನೆಗೂ ಮುನ್ನವೇ ಬ್ರಹ್ಮೋಸ್ ಕ್ಷಿಪಣಿಗಳನ್ನ ಹಾರಿಸಿ ನಮ್ಮ ಪ್ರದೇಶಗಳನ್ನ ಭಾರತ ಉಡೀಸ್‌ ಮಾಡಿದೆ : ಸತ್ಯ ಕಕ್ಕಿದ ಪಾಕ್‌ ಪ್ರಧಾನಿ..

- Advertisement -

ಆಪರೇಷನ್‌ ಸಿಂಧೂರ್‌ ವಿಶೇಷ :

ನವದೆಹಲಿ : ಪಹಲ್ಗಾಮ್‌ ದಾಳಿಯ ಬಳಿಕ ಪಾಕ್‌ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತ ನಡೆಸಿದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯನ್ನು ಈ ಜನ್ಮದಲ್ಲಿ ಪಾಪಿಸ್ತಾನ ಮರೆಯುವಂತಿಲ್ಲ. ಕಳೆದ ಕೆಲ ದಿನಗಳ ಹಿಂದಷ್ಟೇ ಭಾರತದ ನೀಡಿದ ಬಲವಾದ ಹೊಡೆತದ ಪರಿಣಾಮವನ್ನು ವಿವರಿಸುತ್ತಲೇ, ದಾಳಿಯ ತೀವ್ರತೆಯನ್ನು ಖುದ್ದು ಪಾಕ್‌ ಶೆಹಬಾಜ್‌ ಷರೀಫ್‌ ಬಿಚ್ಚಿಟ್ಟಿದ್ದರು. ಅಲ್ಲದೆ ಮಧ್ಯೆ ರಾತ್ರಿಯೇ ನಮ್ಮ ಸೇನೆಯ ದಿಕ್ಕು ತಪ್ಪಿತ್ತು, ಭಾರತದಿಂದ ಬಂದ ಡ್ರೋನ್‌, ಮಿಸೈಲ್‌ಗಳ ಭೀಕರತೆಯಿಂದ ಅಂತಲೂ ಸಾರ್ವಜನಿಕವಾಗಿಯೇ ಒಪ್ಪಿಕೊಂಡಿದ್ದರು. ಈ ಮೂಲಕ ಷರೀಫ್ ಭಾರತದ ಪರಾಕ್ರಮದ ಮುಂದೆ ಶರಣಾಗಿದ್ದರು.‌

ರಾವಲ್ಪಿಂಡಿ ವಿಮಾನ ನಿಲಾಣದ ಮೇಲೂ ದಾಳಿಯಾಗಿದೆ..

ಇನ್ನೂ ಇದೀಗ ಮತ್ತೊಮ್ಮೆ ಭಾರತದ ದಾಳಿಯ ಬಗ್ಗೆ ಬಾಯಿ ಬಿಟ್ಟಿದ್ದು, ಭಾರತ ಹೇಗೆಲ್ಲ ತನ್ನ ದಾಳಿ ಮಾಡುವ ಮೂಲಕ ತನ್ನ ದೇಶದಲ್ಲಿನ ಮಿಲಿಟರಿ ಹಾಗೂ ಮೂಲ ಸೌಕರ್ಯಗಳಿಗೆ ಹಾನಿ ಮಾಡಿದೆ ಎಂಬುದಾಗಿ ಎಳೆಎಳೆಯಾಗಿ ಹೊರಹಾಕಿದ್ದಾರೆ. ಅಜೆರ್ಬೈಜಾನ್‌ದಲ್ಲಿ ಮಾತನಾಡಿರುವ ಷರೀಫ್‌, ಭಾರತವು ಮೇ 10 ರ ಮುಂಜಾನೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸಿಕೊಂಡು ತನ್ನ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಅಡಿಯಲ್ಲಿ ಕ್ಷಿಪಣಿ ದಾಳಿಯನ್ನು ನಡೆಸಿದೆ. ಪಾಕಿಸ್ತಾನದ ಸೇನೆಯ ಶಕ್ತಿಯನ್ನೂ ಮೀರಿ ರಾವಲ್ಪಿಂಡಿಯ ವಿಮಾನ ನಿಲ್ದಾಣ ಸೇರಿದಂತೆ ಪಾಕಿಸ್ತಾನದೊಳಗಿನ ಅನೇಕ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ಒಪ್ಪಿಕೊಂಡಿದ್ದಾರೆ.

ಬ್ರಹ್ಮೋಸ್ ಕ್ಷಿಪಣಿಗಳನ್ನು ಹಾರಿಸಿ ಉಡೀಸ್‌ ಮಾಡಿದೆ : ಸತ್ಯ ಒಪ್ಪಿಕೊಂಡ ಪಾಕ್‌..

ಮೇ 9 ಮತ್ತು 10 ರ ಮಧ್ಯರಾತ್ರಿ ಭಾರತೀಯ ಕ್ಷಿಪಣಿಗಳು ಪಾಕಿಸ್ತಾನದೊಳಗಿನ ಅನೇಕ ಕೇಂದ್ರಗಳನ್ನು ಹೊಡೆದುರುಳಿಸಿವೆ ಎಂದು ಪಾಕಿಸ್ತಾನದ ಪ್ರಧಾನಿ ಮತ್ತೊಮ್ಮೆ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ – ಪಾಕಿಸ್ತಾನದ ಸೈನ್ಯಕ್ಕೆ ತಿಳಿಯದಂತೆ ಹೊಡೆದು ಹಾಕಿದ್ದಾರೆ. ಪಾಕಿಸ್ತಾನದ ಸಶಸ್ತ್ರ ಪಡೆಗಳು ಬೆಳಿಗ್ಗೆ 4:30 ಕ್ಕೆ – ಅವರ ಫಜ್ರ್ ಪ್ರಾರ್ಥನೆಯ ನಂತರ – ಭಾರತದ ಮೇಲೆ ದಾಳಿ ಮಾಡಲು ಯೋಜಿಸುತ್ತಿದ್ದರು, ಆದರೆ ಅದಕ್ಕೂ ಮೊದಲು, ಭಾರತವು ರಾವಲ್ಪಿಂಡಿಯ ವಿಮಾನ ನಿಲ್ದಾಣ ಸೇರಿದಂತೆ ಪಾಕಿಸ್ತಾನದ ಹಲವು ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡು ಬ್ರಹ್ಮೋಸ್ ಕ್ಷಿಪಣಿಗಳನ್ನು ಹಾರಿಸಿ ಉಡೀಸ್‌ ಮಾಡಿತ್ತು ಎಂದು ಅಳಲುತೋಡಿಕೊಂಡಿದ್ದಾರೆ.

ಮುನೀರ್‌ ನನ್ನ ಗಮನಕ್ಕೆ ತಂದಿದ್ದರು..!

ಇನ್ನೂ ಈ ತಿಂಗಳ ಆರಂಭದಲ್ಲಿ, ಪಾಕಿಸ್ತಾನದ ಪ್ರಧಾನಿ ಮೇ 10 ರ ಮುಂಜಾನೆ ನೂರ್ ಖಾನ್ ವಾಯುನೆಲೆ ಮತ್ತು ಪಾಕಿಸ್ತಾನದೊಳಗಿನ ಇತರ ಕೇಂದ್ರಗಳ ಮೇಲೆ ಭಾರತೀಯ ಕ್ಷಿಪಣಿಗಳು ದಾಳಿ ಮಾಡಿದ್ದನ್ನು ದೃಢಪಡಿಸಿದ್ದರು. ಇಸ್ಲಾಮಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ್ದ ಷರೀಫ್, ಭಾರತ ನಡೆಸಿದ ಕ್ಷಿಪಣಿ ದಾಳಿಯ ಬಗ್ಗೆ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಅವರು ಬೆಳಗಿನ ಜಾವ 2:30 ಕ್ಕೆ ಕರೆ ಮಾಡಿದ್ದನ್ನು ನೆನಪಿಸಿಕೊಂಡು ಆಗಲೂ ಸಹ ಭಾರತದ ದಾಳಿಯ ಬಗ್ಗೆ ಬಿಚ್ಚಿಟ್ಟಿದ್ದರು.

ವಿಕ್ಟಿಮ್‌ ಕಾರ್ಡ್‌ ಪ್ಲೇ ಮಾಡುವ ನಾಟಕಕ್ಕೆ ಮುಂದಾದ ಪಾಕ್..

ಮೇ 9-10ರ ಮಧ್ಯರಾತ್ರಿ, ಬೆಳಗಿನ ಜಾವ 2:30 ರ ಸುಮಾರಿಗೆ, ಜನರಲ್ ಆಸಿಫ್ ಮುನೀರ್ ನನಗೆ ಸುರಕ್ಷಿತ ಫೋನ್ ಮೂಲಕ ಕರೆ ಮಾಡಿ, ಭಾರತ ತನ್ನ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ತಿಳಿಸಿದ್ದರು. ಒಂದು ನೂರ್ ಖಾನ್ ವಾಯುನೆಲೆಯಲ್ಲಿ ಮತ್ತು ಕೆಲವು ಇತರ ಪ್ರದೇಶಗಳಲ್ಲಿ ಇಳಿದಿವೆ ಎಂದು ಮುನೀರ್‌ ಮಾಹಿತಿ ನೀಡಿದ್ದರು ಎಂದು ಷರೀಫ್‌ ಹೇಳಿಕೊಂಡಿದ್ದರು. ಪಾಕಿಸ್ತಾನದಲ್ಲಿ ಭಾರತ ತೀವ್ರ ಪ್ರಮಾಣದ ದಾಳಿ ನಡೆಸಿದೆ ಎಂಬುದಾಗಿ ಉಗ್ರರಾಷ್ಟ್ರ ಒಪ್ಪಿಕೊಂಡಿದೆ. ಇನ್ನೂ ಭಾರತದ ದಾಳಿಯ ವಿಚಾರವನ್ನ ತಮ್ಮ ಪ್ರತಿ ಭಾಷಣದಲ್ಲಿಯೂ ಮಂತ್ರದಂತೆ ಪಠಿಸುತ್ತಿರುವ ಪಾಕ್‌ ಪ್ರಧಾನಿ ಜಾಗತಿಕ ಮಟ್ಟದಲ್ಲಿ ವಿಕ್ಟಿಮ್‌ ಕಾರ್ಡ್‌ ಪ್ಲೇ ಮಾಡುವ ನಾಟಕಕ್ಕೆ ಮುಂದಾಗಿರುವುದು ಸ್ಪಷ್ಟವಾಗುತ್ತಿದೆ.

- Advertisement -

Latest Posts

Don't Miss