Tuesday, October 14, 2025

Latest Posts

ಕೇಳುಗರ ಮನ ಗೆಲ್ಲುತ್ತಿದೆ “ಮೆಲೋಡಿ ಡ್ರಾಮ”ದ ಹಾಡು .

- Advertisement -

Movie News: ಪ್ರೈಮ್ ಸ್ಟಾರ್ ಸ್ಟುಡಿಯೋ ಲಾಂಛನದಲ್ಲಿ ಎಂ.ನಂಜುಂಡ ರೆಡ್ಡಿ ಅವರು ನಿರ್ಮಿಸಿರುವ, ಮಂಜು ಕಾರ್ತಿಕ್ ನಿರ್ದೇಶನದ “ಮೆಲೋಡಿ ಡ್ರಾಮ” ಚಿತ್ರಕ್ಕಾಗಿ ಹೃದಯ ಶಿವ ಬರೆದಿರುವ “ಯಾರು ಬರೆಯದ ಕವಿತೆ” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿ, ಜನಮನಸೂರೆಗೊಳ್ಳುತ್ತಿದೆ. ಈಗಾಗಲೇ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿ ಮುನ್ನುಗುತ್ತಿದೆ. ಕಿರಣ್ ರವೀಂದ್ರನಾಥ್ ಸಂಗೀತ ನೀಡಿರುವ ಈ ಹಾಡನ್ನು ಪಲಾಕ್ ಮುಚ್ಚಲ್ ಹಾಗೂ ವರುಣ್ ಪ್ರದೀಪ್ ಹಾಡಿದ್ದಾರೆ.

ಚಿತ್ರದ ಮೊದಲ ಹಾಡು ಇದಾಗಿದ್ದು, ಒಟ್ಟು ಏಳು ಹಾಡುಗಳು ಈ ಚಿತ್ರದಲ್ಲಿದೆ. ಸೋನು ನಿಗಮ್ , ಕೈಲಾಶ್ ಖೇರ್, ಪಲಾಕ್ ಮುಚ್ವಲ್, ಮುಂತಾದ ಖ್ಯಾತ ಗಾಯಕರು ಈ ಹಾಡುಗಳನ್ನು ಹಾಡಿದ್ದಾರೆ. ಪ್ರಥಮಪ್ರತಿ ಸಿದ್ದವಾಗಿದ್ದು, ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ಸತ್ಯ ಈ ಚಿತ್ರದ ನಾಯಕನಾಗಿ, ಸುಪ್ರೀತ ಸತ್ಯನಾರಾಯಣ ಅವರು ನಾಯಕಿಯಾಗಿ ನಟಿಸಿದ್ದಾರೆ. ರಂಗಾಯಣ ರಘು, ಅನು ಪ್ರಭಾಕರ್, ರಾಜೇಶ್ ನಟರಂಗ, ಬಾಲು ರಾಜವಾಡಿ, ಲಕ್ಷ್ಮೀ ಸಿದ್ದಯ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಹೊಸ ರೂಪದಲ್ಲಿ ರಾಜನ್ ನಾಗೇಂದ್ರ ಸಂಗೀತ ನೀಡಿರುವ ಹಾಡುಗಳು .

Crazy Star Birthday Special: “ದ ಜಡ್ಜ್ ಮೆಂಟ್” ಸಿನೆಮಾ ಫಸ್ಟ್ ಲುಕ್ ಪೋಸ್ಟರ್ ಮತ್ತು ವಿಡಿಯೋ ಬಿಡುಗಡೆ

ಅಂಬಿ ಸಮಾಧಿಯ ಮೇಲೆ ಮಗನ ಮದುವೆಯ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ ಸಲ್ಲಿಸಿದ ಸುಮಲತಾ..

- Advertisement -

Latest Posts

Don't Miss