Political News: ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ, ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ, ನಾವು ಪ್ರತೀ ತಿಂಗಳು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿತ್ತು. ಆದರೆ ಈಗ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್, ಇದೇ ಜುಲೈ 1ರಿಂದ ರಾಜ್ಯದ ಜನರಿಗೆ ಅಕ್ಕಿ ಬದಲು ದುಡ್ಡು ಕೊಡಲು ನಿರ್ಧರಿಸಿದೆ.
ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ನಡೆದಿದ್ದು, ಈ ಸಭೆಯಲ್ಲಿ ಅಕ್ಕಿ ಬರುವವರೆಗೂ ದುಡ್ಡು ಕೊಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್ ಮತ್ತು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಈಗಾಗಲೇ ಕೇಂದ್ರದಿಂದ ಬರುತ್ತಿರುವ 5 ಕೆಜಿ ಅಕ್ಕಿ ಬರಲಿದೆ. ಮತ್ತು ರಾಜ್ಯ ಅನ್ನಭಾಗ್ಯ ಯೋಜನೆಯಡಿ ನೀಡಬೇಕಿದ್ದ ಅಕ್ಕಿ ಬದಲಿಗೆ ಖಾತೆಗೆ ಅದಕ್ಕೆ ತಕ್ಕಷ್ಟು ಹಣ ಹಾಕಲಿದೆ ಎಂದು ಹೇಳಿದರು.
ಪ್ರತೀ ಕೆಜಿಗೆ 34 ರೂಪಾಯಿಯಂತೆ, 170 ರೂಪಾಯಿಯನ್ನು ಸರ್ಕಾರ ಜನರ ಖಾತೆಗೆ ಹಾಕಲಿದೆ. ಅಲ್ಲದೇ, ಅಕ್ಕಿ ಸಿಗುತ್ತಿದ್ದಂತೆ, ಅನ್ನಭಾಗ್ಯ ಯೋಜನೆ ಜಾರಿ ಮಾಡಿ, ಅಕ್ಕಿ ಕೊಡಲಾಗುತ್ತದೆ ಎಂದು ಕೂಡ ಸಚಿವರು ಹೇಳಿದ್ದಾರೆ.
‘ವಿದೇಶಗಳಲ್ಲಿ ಇಂತಹ ಟ್ರೈನ್ ನೋಡುತ್ತಿದ್ದೆವು. ವಿಮಾನದಲ್ಲಿ ಹೋದ ಅನುಭವ ಆಗುತ್ತೆ’
ಶತಮಾನದಷ್ಟು ಹಳೆಯದಾದ ಹುಣಸೂರು ಸೇತುವೆ ಶಿಥಿಲ, ನಿಷೇಧವಿದ್ದರೂ ಸಂಚರಿಸುವ ಭಾರಿ ವಾಹನಗಳು