Friday, October 31, 2025

Latest Posts

ನೇಹಾ ಪ್ರಕರಣಕ್ಕೆ ಬೇರೆ ಬಣ್ಣ ಬಳಿಯುವ ಕೆಲಸ ರಾಜ್ಯ ಸರ್ಕಾರದ ಮಾಡುತ್ತಿದೆ: ಬಿ.ವೈ.ವಿಜಯೇಂದ್ರ

- Advertisement -

Hubli News: ಹುಬ್ಬಳ್ಳಿ: ಮೃತ ನೇಹಾ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ನೇಹಾ ತಾಯಿ ನಿರಂಜನ್ ಮತ್ತು ಗೀತಾ ಅವರಿಗೆ ವಿಜಯೇಂದ್ರ ಸಾಂತ್ವನ ಹೇಳಿದ್ದಾರೆ.

ಈ ವೇಳೆ ಮಾತನಾಡಿದ ವಿಜಯೇಂದ್ರ,  ಪ್ರಕರಣ ನಡೆದು ಮೂರ್ನಾಲ್ಕು ದಿನ‌ಕಳೆದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಹಿನ್ನೆಲೆ ಬಿಜೆಪಿಯಿಂದ ಉಗ್ರವಾದ ಹೋರಾಟ ನಡೆಸಲಾಯಿತು. ಈಗ ರಾಜ್ಯ ಸರ್ಕಾರ ಸಿಓಡಿ ತನಿಖೆಗೆ ಒಪ್ಪಿಸಿದೆ. ಸಿಓಡಿಗೆ ಒಪ್ಪಿಸಿದರೂ ಇನ್ನೂ ಅವರ ಕುಟುಂಬಸ್ಥರನ್ನ ಅಧಿಕಾರಿಗಳು ಮಾಡಿಲ್ಲ. ನೇಹಾ ತಂದೆ ಹೇಳಿದ್ದರೂ ಕೇವಲ‌ ಒಬ್ಬನ ಬಂಧನವಾಗಿದೆ. ಈ ಪ್ರಕರಣ ಯಾವ ಹಂತಕ್ಕೆ ತಲುಪುತ್ತೆ ಅನ್ನೋ ಪ್ರಶ್ನೆ ಮೂಡಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ನಾವು ಯಾವುದೇ ರಾಜಕೀಯ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ‌ ಸಿಬಿಐಗೆ ಒಪ್ಪಿಸಬೇಕು. ದಿನೇ ದಿನೇ ಇಂತಹ ಪ್ರಕರಗಳು‌ ಉದ್ಭವಿಸುತ್ತಿವೆ. ರಾಜ್ಯದ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ ಎಂಬುದರ ಬಗ್ಗೆ ಭಯ ಹೆಚ್ಚಿಸಿದೆ. ಇಂತಹ ಘಟನೆಗಳು‌ ಮರುಕಳಿಸದಂತೆ ಸರ್ಕಾರ ಜವಾಬ್ದಾರಿ ವಹಿಸಬೇಕಿದೆ ಎಂದು ಬಿ.ವೈ.ವಿಜಯೇಂದ್ರ.

ರಾಜ್ಯ ಸರ್ಕಾರದ ನಡೆ ಸಾಕಷ್ಟು ಪ್ರಶ್ನೆ ಹುಟ್ಟು ಹಾಕಿದೆ. ಇದಕ್ಕೆ ಜಾತಿ‌, ಧರ್ಮದ‌ ಬಣ್ಣ‌ ಬೇಕಿಲ್ಲ. ತಕ್ಷಣವೇ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಬೇಕು. ರಾಜ್ಯದ ಮಹಿಳೆಯರ ಸುರಕ್ಷತೆ ಬಗ್ಗೆ ಸವಾಲು ಎದ್ದಿದೆ. ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿದಾಗ ತಮ್ಮ ಶಾಸಕರ ರಕ್ಷಣೆಗೆ ಕಾಂಗ್ರೆಸ್ ಹೋಗಲಿಲ್ಲ. ಅಲ್ಪ ಅಸಂಖ್ಯಾತರ ಮನೋಭಾವಕ್ಕೆ ದಕ್ಕೆ ಆಗುತ್ತೆ ಅಂತ ಅವರ ಶಾಸಕರನ್ನೇ ಕಾಂಗ್ರೆಸ್ ರಕ್ಷಣೆ ಮಾಡಲಿಲ್ಲ. ಇದು ಕಾಂಗ್ರೆಸ್ ಸರ್ಕಾರದ ಸಂಸ್ಕೃತಿ. ನೇಹಾ ಪ್ರಕರಣಕ್ಕೆ ಬೇರೆ ಬಣ್ಣ ಬಳಿಯುವ ಕೆಲಸ ರಾಜ್ಯ ಸರ್ಕಾರದ ಮಾಡುತ್ತಿದೆ. ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಇದನ್ನು ನೋಡಿಕೊಂಡು ನಾವು ಸುಮ್ಮನೆ ಇರಬೇಕಾ..? ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಿ ಸೂಕ್ತ ತನಿಖೆಯಾಗಬೇಕು ಎಂದು ವಿಜಯೇಂದ್ರ ಹೇಳಿದ್ದಾರೆ.

ಸಚಿವ ಸಂತೋಷ ಲಾಡ್ ಗೆ ನಾಲಾಯಕ್‌ ಎಂಬ ಪದಬಳಕೆ ವಿಚಾರದ ಬಗ್ಗೆ ಮಾತನಾಡಿದ ವಿಜಯೇಂದ್ರ,  ರಾಜ್ಯದ ಮುಖ್ಯಮಂತ್ರಿ, ಸಚಿವರು ಪ್ರಧಾನಿ ಅವರನ್ನು ಏಕವಚನದಲ್ಲಿ ಮಾತನಾಡಿದ್ರೆ ನಾವು ಸುಮ್ಮನೆ ಇರಬೇಕಾ..? ನಾನು ಹೀರೋ ಅಂತ ಹೇಳಿಕೊಂಡಿಲ್ಲ ನಾನು ಮರಾಠರಿಗೆ ದಕ್ಕೆಯಾಗುವ ರೀತಿಯಲ್ಲಿ ಮಾತನಾಡಿಲ್ಲ. ಸಂತೋಷ ಲಾಡ್ ಹೇಳಿಕೆಗೆ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಪೊಲೀಸ್ ಠಾಣೆಗಳು ಸೆಟ್ಲಮೆಂಟ್ ಸೆಂಟರ್ ಆಗಿವೆ: ಬಸವರಾಜ್ ಬೊಮ್ಮಾಯಿ ವಾಗ್ದಾಳಿ

ಲೋಕಸಭೆ ಚುನಾವಣೆ ಸಮೀಪಿಸುತ್ತಲೇ ಬಿಜೆಪಿಗೆ ಶಾಕ್: ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ..

ಕರ್ನಾಟಕದಲ್ಲಿ ತಾಲಿಬಾನ್ ಆಡಳಿತ‌ನಡೀತಿದೆಯಾ? ಜನಪರ ಸರ್ಕಾರ‌ ಇದೆಯಾ?: ಪಿ.ರಾಜೀವ್

- Advertisement -

Latest Posts

Don't Miss