Wednesday, October 29, 2025

Latest Posts

‘ಕಚ್ಚಾ ಬಾದಾಮ್’ ಹಾಡು ಸಖತ್ ವೈರಲ್- ಆದರೆ ಬಡ ಹಾಡುಗಾರನಿಗೆ ಮೋಸ..?

- Advertisement -

ಕಚ್ಚಾ ಬಾದಾಮ್, ಕಚ್ಚಾ ಕಚ್ಚಾ ಬಾದಾಮ್ ಅನ್ನೋ ಹಾಡು ಈಗ ಸಖತ್ ಟ್ರೆಂಡಿಂಗ್‌ನಲ್ಲಿರೋ ಹಾಡು. ಇನ್‌ಸ್ಟಾಗ್ರಾಮ್‌ ರೀಲ್ಸ್‌ ಮಾಡೋರು, ಖಂಡಿತವಾಗಿಯೂ ಈ ಹಾಡಿಗೆ ಸ್ಟೆಪ್ ಹಾಕೇ ಹಾಕಿರ್ತಾರೆ. ಈ ಹಾಡು ಹಾಡಿದ್ದು ಯಾರು..? ಯಾವುದಕ್ಕಾಗಿ ಹಾಡಿದ್ದು, ಇದು ಫೇಮಸ್ ಆಗಿದ್ದಾದ್ರೂ ಹೇಗೆ..? ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..

https://www.instagram.com/p/CZUhR6PDOVE/

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿರುವ ಶೇಂಗಾಕಾಳಿನ ಹಾಡು ಕಚ್ಚಾ ಬಾದಾಮ್. ಈ ಹಾಡಿ ಹಿಂದೆ ಇರೋದು ಒಬ್ಬ ಶೇಂಗಾ ಮಾರಾಟಗಾರನ ಕಥೆ. ಪಶ್ಚಿಮ ಬಂಗಾಳದ, ಭೀರ್‌ಭೌಮ್ ಜಿಲ್ಲೆಯ, ಲಕ್ಷ್ಮೀ ನಾರಾಯಣಪುರ ಪಂಚಾಯತ್‌ನ, ಕುರಲ್ಜುರಿ ಗ್ರಾಮದ ನಿವಾಸಿಯಾಗಿರುವ , ಭುವನ್ ಬಡ್ಯಾಕರ್ ಎಂಬುವವರು ಶೇಂಗಾ ಮಾರಾಟಗಾರರು. ತಮ್ಮ ಬಳಿ ಜನ ಬಂದು ಶೇಂಗಾ ತೆಗೆದುಕೊಳ್ಳಲಿ ಎಂಬು ಕಾರಣಕ್ಕೆ, ಜನರನ್ನು ತಮ್ಮತ್ತ ಸೆಳೆಯುವುದಕ್ಕೆ, ಈ ಭುವನ್ ಕಚ್ಚಾ ಬಾದಾಮ್ ಅನ್ನೋ ಹಾಡು ಹೇಳಿದ್ದರು. ಅಲ್ಲದೇ ಯಾವುದಾದರೂ ಬೆಲೆ ಬಾಳುವ ವಸ್ತು ಕೊಟ್ರೆ, ಅದಕ್ಕೆ ತಕ್ಕಷ್ಟು ಶೇಂಗಾಕಾಳನ್ನ ಭುವನ್ ನೀಡುತ್ತಾರೆ.

https://www.instagram.com/p/CZKid5It2WP/

ಭುವನ್ ಹಾಡನ್ನ ಒಂದು ಯೂಟ್ಯೂಬ್ ಚಾನೆಲ್‌ನವರು ಪ್ರಸಾರ ಮಾಡಿದ್ರು. ಅದಾದ ನಂತರ,  ರೀಚತ್ ಎಂಬುವರು, ಈ ಹಾಡನ್ನ ಹಾಡಿ, ಇದಕ್ಕೆ ಟ್ಯೂನ್ ಮಾಡಿ, ಸಾಮಾಜಿಕ ಜಾಲತಾಣಕ್ಕೆ ಬಿಟ್ಟಿದ್ದಾರೆ. ಹಾಗಾಗಿ ಈಗ ಎಲ್ಲೆಲ್ಲೂ ಭುವನ್ ಹಾಡಿದ, ಕಚ್ಚಾ ಬಾದಾಮ್ ಹಾಡಿನದ್ದೇ ಗುಂಗು. ಆದ್ರೆ ಭುವನ್ ಈ ಹಾಡು ತುಂಬಾ ವೈರಲ್ ಆಗಿದೆ, ಇದರಿಂದ ಸಂಗ್ರಹವಾದ ದುಡ್ಡಿನಲ್ಲಿ ನನಗೂ ಸ್ವಲ್ಪ ಭಾಗ ಹಣ ನೀಡಿ ಸಹಾಯ ಮಾಡಬೇಕೆಂದು ಸ್ಥಳೀಯ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

https://www.instagram.com/p/CZSCrCaMFmA/

- Advertisement -

Latest Posts

Don't Miss