Sunday, April 20, 2025

Latest Posts

ಮೂರು‌ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾದ “ಮಾಫಿಯಾ”ಚಿತ್ರದ ಟೀಸರ್..!

- Advertisement -

ಪ್ರಜ್ವಲ್ ದೇವರಾಜ್(Prajwal Devaraj) ನಟನೆಯ “ಮಾಫಿಯಾ”(Mafia) ಚಿತ್ರದ ಟೀಸರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸುತ್ತಿರುವ, ಲೋಹಿತ್ ನಿರ್ದೇಶನ(Directed by Lohit)ದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ “ಮಾಫಿಯಾ” ಚಿತ್ರದ ಟೀಸರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ‌. ಚಿತ್ರದ ಟೀಸರ್ ಕೂಡ ಏಕಕಾಲಕ್ಕೆ ಬಿಡುಗಡೆಯಾಗಿದೆ. ಕನ್ನಡದಲ್ಲಿ ಧ್ರುವ ಸರ್ಜಾ, ಸತೀಶ್ ನೀನಾಸಂ ಹಾಗೂ ರಿಷಬ್ ಶೆಟ್ಟಿ(Rishab Shetty), ತೆಲುಗಿನಲ್ಲಿ ಸುಧೀರ್ ಬಾಬು ಮತ್ತು ರಾಜಶೇಖರ್ ಹಾಗೂ ತಮಿಳಿನಲ್ಲಿ ಸತ್ಯರಾಜ್, ವೆಂಕಟ್ ಪ್ರಭು, ಪಾರ್ಥಿಬನ್ ಹಾಗೂ ನಿರ್ದೇಶಕ ಶಿಶೀಂದ್ರನ್ “ಮಾಫಿಯಾ” ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಅಷ್ಟೇ ಅಲ್ಲದೇ ಚಿತ್ರದ ಆಡಿಯೋ ಹಕ್ಕು ಸಹ ಆನಂದ್ ಆಡಿಯೋಗೆ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ(Aditi Prabhudeva) ನಟಿಸುತ್ತಿದ್ದಾರೆ. ದೇವರಾಜ್ ಅವರು ಸಹ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಧುಕೋಕಿಲ(Sadhu Kokila) ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ. ತರುಣ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

- Advertisement -

Latest Posts

Don't Miss