Friday, June 20, 2025

Latest Posts

ಕೋತಿಗಳ ಕಾಟಕ್ಕೆ ಬೇಸತ್ತ ಗ್ರಾಮಸ್ಥರು

- Advertisement -

www.karnatakatv.net : ರಾಯಚೂರು: ಕೋತಿಗಳ ಕಾಟಕ್ಕೆ ಬೇಸತ್ತು ಊರು ತೊರೆಯುವ ನಿರ್ಧಾರಮಾಡಿರುವ ಗ್ರಾಮಸ್ಥರು.ಈ ಘಟನೆ ರಾಯಚೂರಿನ ಪಲವಲದೊಡ್ಡಿ ಗ್ರಾಮದಲ್ಲಿ ನಡೆದಿದೆ.  . ಎರಡು ವರ್ಷಗಳಿಂದ   ಕೋತಿಗಳು ಕಾಡಿನಿಂದ ಊರಿಗೆ ಸೇರಿದ್ದವು ಜನಗರಿಗೆ ಮನೆಯಿಂದ ಹೊರಗೆ ಬರಲು ಬಿಡುತ್ತಿಲ್ಲ . ಆ ಗ್ರಾಮದಲ್ಲಿ ಜನರಿಗಿಂತ ಕೋತಿಗಳೇ ಹೆಚ್ಚು.ಮನೆಗಳಿಗೆ ನುಗ್ಗುತ್ತವೆ, ಕೈಗೆ ಸಿಕ್ಕಿದ್ದು ದೋಚುತ್ತವೆ. ವಿದ್ಯುತ್ ವೈಯರ್, ಟಿವಿ ಕೇಬಲ್, ಕಚ್ಚಿ ಹಾಕುತ್ತವೆ. ಎರಡು ವರ್ಷಗಳಿಂದ ಸುಮಾರು  ಮಕ್ಕಳ ಮೈ ಚುರಿವೆ . ಪಲವಲದೊಡ್ಡಿ ಗ್ರಾಮದಲ್ಲಿ 120  ಮನೆಗಳಿವೆ . ಸರಿಸುಮಾರು 200 ಕೋತಿಗಳು ಇರುತ್ತವೆ.  ಜಮೀನಿಗೆ ನುಗ್ಗಿ ತರಕಾರಿ ಬೆಳೆ ನಾಶ ಮಾಡುತ್ತವೆ. 

  ಕೋತಿಗಳ ಕಾಟಕ್ಕೆ ಮನೆಯಿಂದ ಹೊರಗೆ ಬರಲು ಗ್ರಾಮಸ್ಥರು ಭಯಭಿತರಾಗಿದರೆ.   ಅರಣ್ಯ ಇಲಾಖೆಗೆ ಪತ್ರ ಬರೆದರೂ ಕ್ಯಾರೆ ಎನ್ನದ ಅಧಿಕಾರಿಗಳು. ಮನೆಗಿಷ್ಟು ಅಂತ ಪಟ್ಟಿ ಹಾಕಿ ಹಣ ಕೊಡುತ್ತೇವೆ ಕೋತಿ ಹಿಡಿದುಕೊಂಡು ಹೋಗಿ ಎಂದರೂ ಯಾರೂ‌ ಮುಂದೆ  ಬರ್ತಿಲ್ಲ.ಸಾಮೂಹಿಕವಾಗಿ ಊರು ತೊರೆಯಲು ನಿರ್ಧಾರ  ಮಾಡಿದ ರೈತರು. .ಇನ್ನಾದರು ಮುಂದಿನ ದಿನಗಳಲ್ಲಿ ಅಧಿಕಾರಿಗಳು ಇವರ ಸಮಸ್ಯೆ ಗೆ ಸಹಕರಿಸಬೇಕೆಂದು ಮನವಿ ಮಾಡಿದರು.

- Advertisement -

Latest Posts

Don't Miss