Monday, December 23, 2024

Latest Posts

ಕೆಲಸಕ್ಕೆ ರಿಸೈನ್ ಕೊಟ್ಟು, ಬಾಸ್ ಎದುರು ಢೋಲು ಬಾರಿಸಿ, ಡಾನ್ಸ್ ಮಾಡಿದ ಯುವಕ, ವೀಡಿಯೋ ವೈರಲ್

- Advertisement -

Viral News: ಎಷ್ಟೋ ಯುವಕ ಯುವತಿಯರು ತಾವು ಮಾಡುವ ಕೆಲಸ ಇಷ್ಟವಿಲ್ಲದಿದ್ದರೂ, ಬಾಸ್ ಬಗ್ಗೆ ಉತ್ತಮ ಅಭಿಪ್ರಾಯವಿಲ್ಲದಿದ್ದರೂ, ಸಹಉದ್ಯೋಗಿಗಳು ದರ್ಪದಿಂದ ಮೆರೆಯುತ್ತಿದ್ದರೂ ಕೂಡ ಕೆಲಸ ಬಿಡುವ ಪರಿಸ್ಥಿತಿಯಲ್ಲಿರುವುದಿಲ್ಲ. ಏಕೆಂದರೆ ಅವರಿಗೆ ಮನೆ ಖರ್ಚಿನ ಜವಾಬ್ದಾರಿ ಇರುತ್ತದೆ. ತಾಳ್ಮೆ ಕಳೆದುಕೊಂಡು ಕೋಪ ಮಾಡಿದರೆ, ಮನೆ ಮಂದಿಯ ಹೊಟ್ಟೆ ಪಾಡೇನು ಅಂತಾ ಯೋಚಿಸಿ, ಕೆಲಸ ಮುಂದುವರಿಸುತ್ತಾರೆ.

ಆದರೆ ಇಲ್ಲೋರ್ವ ವ್ಯಕ್ತಿ ತನಗಿಷ್ಟವಲ್ಲದ ಕೆಲಸಕ್ಕೆ ರಾಜೀನಾಮೆ ನೀಡಿ, ಹೋಗುವಾಗ ಢೋಲು ಬಾರಿಸಿ, ಡಾನ್ಸ್ ಮಾಡುತ್ತ, ತನ್ನ ಸೆಂಡ್ ಆಫ್‌ ಪಾರ್ಟಿಯನ್ನು ತಾನೇ ಮಾಡಿಕೊಂಡಿದ್ದಾರೆ. ಅನಿಕೇತ್ ಎಂಬ ವ್ಯಕ್ತಿ 3 ವರ್ಷದಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಮೂರು ವರ್ಷದಿಂದ 1 ರೂಪಾಯಿ ಸ್ಯಾಲರಿ ಕೂಡ ಏರಿಸಿರಲಿಲ್ಲ. ಅಲ್ಲದೇ, ಕೆಲಸಗಾರರ ಜೊತೆ ಬಾಸ್ ಆದವನು ಅಷ್ಟು ಉತ್ತಮವಾಗಿ ಇರಲಿಲ್ಲ. ಹಾಗಾಗಿ ಅನಿಕೇತ್ ಕೆಲಸಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದ್ದರು.

ಇದನ್ನು ರೆಕಾರ್ಡ್ ಮಾಡಿದ್ದ ಅವರ ಸ್ನೇಹಿತರೊಬ್ಬರು, ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಈ ವೀಡಿಯೋದಲ್ಲಿ ಅನಿಕೇತ್ ತಾನು ಯಾಕೆ ಕೆಲಸ ಬಿಡುತ್ತಿದ್ದೇನೆ ಅಂತಾ ಹೇಳಿದ್ದಾರೆ. ಅಲ್ಲದೇ, ಕೆಲಸ ಬಿಡುವಾಗ, ಬಿಂದಾಸ್ ಆಗಿ ಸ್ಟೆಪ್ ಹಾಕಿ, ಆಫೀಸಿನಿಂದ ಹೊರನಡೆದಿದ್ದಾನೆ. ಬಳಿಕ ಬಾಸ್ ಇವರನ್ನು ಆಫೀಸಿನಿಂದ ಹೊರಗೆ ಹೋಗುವಂತೆ ಹೇಳಿದ್ದಾರೆ.

ಇನ್ನು ಕೆಲಸ ಬಿಟ್ಟು ಅನಿಕೇತ್ ಮುಂದೇನು ಮಾಡುತ್ತಾರೆಂದು ಹೇಳಿದ್ರೆ, ಅವರು ಜನರಿಗೆ ಫಿಟ್‌ನೆಸ್ ಟ್ರೇನಿಂಗ್ ಕೊಡಲಿದ್ದಾರೆ. ಹಾಗಾಗಿ ಅವರ ಗೆಳೆಯರು ಅನಿಕೇತ್ ಜೊತೆಗೂಡಿ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿ, ಬಳಿಕ ಪಾರ್ಟಿ ಅರೆಂಜ್ ಮಾಡಿ, ಅಲ್ಲಿ ಅನಿಕೇತ್‌ಗೆ ಶೂಸ್ ಗಿಫ್ಟ್ ಮಾಡಿದ್ದಾರೆ.

ಈ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಮಗಳ ಸಾವಿಗೆ ಫಯಾಝ್ ಸಾವು ನ್ಯಾಯವಾಗಬೇಕು: ನಿರಂಜನಯ್ಯ ಆಗ್ರಹ..!

120 ದಿನದಲ್ಲಿ ನ್ಯಾಯ ಕೊಡಸ್ತಿವಿ, ನಿರಂಜನಯ್ಯ ಕುಟುಂಬದ ಜೊತೆಗಿದ್ದೇವೆ: ಸಿಎಂ ಸಿದ್ಧರಾಮಯ್ಯ

ನೇಹಾ ಮನೆಗೆ ಸಿಎಂ ಸಿದ್ಧರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

- Advertisement -

Latest Posts

Don't Miss