National News: ಭೋಪಾಲ್: ಹಿಂದೂ ಯುವಕನ ಕುತ್ತಿಗೆಗೆ ಹಗ್ಗ ಕಟ್ಟಿ, ನಾಯಿಯಂತೆ ಬೊಗಳುವಂತೆ ಹೇಳಿದ ಮೂವರು ಯುವಕರನ್ನು ಬಂಧಿಸಿದ್ದು, ಅವರ ಮನೆಯನ್ನ ಕೂಡ ಧ್ವಂಸ ಮಾಡಲಾಗಿದೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಈ ಘಟನೆ ನಡೆದಿದ್ದು, ವಿಜಯ್ ರಾಮ್ ಚಂದಾನಿ ಎಂಬ ಹಿಂದೂ ಯುವಕನ ಕುತ್ತಿಗೆಗೆ ಹಗ್ಗ ಕಟ್ಟಿ, ನಾಯಿಯಂತೆ ಬೊಗಳು ಹೇಳಿರುವ ಮತ್ತು ಥಳಿಸಿ, ಧಾರ್ಮಿಕವಾಗಿ ನಿಂದಿಸಿರುವ ವೀಡಿಯೋ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೀಡಿಯೋ ಬಗ್ಗೆ ವಿಚಾರಣೆ ನಡೆಸಿದಾಗ, ಇದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ.
ಸ್ಥಳೀಯ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದು, ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಆದೇಶದ ಪ್ರಕಾರ ಅವರ ಮನೆಯನ್ನ, ಬುಲ್ಡೋಜರ್‌ನಿಂದ ಧ್ವಂಸ ಮಾಡಿದ್ದಾರೆ.
ಉತ್ತರಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್‌ರನ್ನ ಭೇಟಿಯಾದ ನಿಖಿಲ್ ಕುಮಾರ್.
ಕೋಟಿ ಕೋಟಿ ಕದ್ದವರನ್ನ ಪತ್ತೆ ಹಚ್ಚಲು ಸಹಾಯವಾಗಿದ್ದು, 10 ರೂಪಾಯಿ ಜ್ಯೂಸ್..
ವ್ಹೀಲ್ ಚೇರ್ ಇಲ್ಲದ್ದಕ್ಕೆ, ಸ್ಕೂಟಿಯಲ್ಲೇ ಆಸ್ಪತ್ರೆಯ ಲಿಫ್ಟ್ ಏರಿ ಹೋದ ವ್ಯಕ್ತಿ : ವೀಡಿಯೋ ವೈರಲ್