Monday, November 17, 2025

Latest Posts

ಸತ್ತ ಹೆಣ ಹೊರೋಕೆ 4 ಜನ ಇರ್ತಾರೆ! ನಿರ್ದೇಶನ ಒಬ್ಬನೇ ಹೊರಬೇಕು: Tabla Nani Podcast

- Advertisement -

Sandalwood: ಸದ್ಯ ಕಲಾವಿದರಾಗಿರುವ ತಬಲಾ ನಾಣಿಯವರು ತಬಲಾ ವಾದಕರೂ ಹೌದು. ಆದರೆ ಅವರಿಗಿರುವ ಜ್ಞಾ ನೋಡಿದಾಗ, ಇವರು ಸಿನಿಮಾ ನಿರ್ದೇಶಿಸಲು ಕೂಡ ಅರ್ಹರು ಅಂತಾ ಅನ್ನಿಸಿಯೇ ಇರುತ್ತದೆ. ಹಾಗಾಗಿ ನೀವು ಸಿನಿಮಾ ನಿರ್ದೇಶನ ಮಾಡಲಿದ್ದೀರಾ ಎಂಬ ನಿರೂಪಕರ ಪ್ರಶ್ನೆಗೆ ನಾಣಿಯವರು ಈ ರೀತಿ ಉತ್ತರಿಸಿದ್ದಾರೆ.

ಸಿನಿ ಜರ್ನಿಯ ಬಗ್ಗೆ ಮಾತನಾಡಿರುವ ನಾಣಿ ಅವರು, ಜೀವನದಲ್ಲಿ ಲೆಕ್ಕ ತುಂಬಾ ಮುಖ್ಯ. ನಾವು ಜೀವನದಲ್ಲಿ ಕೆಲವರನ್ನು ಕೂಡಿಸಬೇಕು. ಕೆಲವರನ್ನು ಕಳೆಯಬೇಕು. ದೇವರಿಗೆ ತಲೆ ಬಾಗಿಸಬೇಕು. ಗುಣ ನೋಡಿ ಗುಣಾಕಾರ ಮಾಡಿ ಕಳುಹಿಸಬೇಕು. ಆವಾಗ ಲೆಕ್ಕ ಪಕ್ಕ ಇರುತ್ತದೆ ಎಂದು ನಾಣಿ ಅರ್ಥಪೂರ್ಣವಾದ ಮಾತನ್ನಾಡಿದ್ದಾರೆ.

ಇನ್ನು ಹಲವರು ಜೀವನದಲ್ಲಿ ದುಡ್ಡಿನ ಮುಖವನ್ನು ನೋಡಿ, ಹಲವರನ್ನು ತಮ್ಮ ಜೀವನದಿಂದ ಕಳೆದುಕ~`ಳ್ಳುತ್ತಾರೆ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆದಾಗ ಮಾತ್ರ ನಾವು ಅಂಥವರಿಂದ ದೂರವಾಗಬೇಕು. ಕೆಲವರನ್ನು ಅಪೇಕ್ಷೆಯಿಂದ ಕೂಡಿಸಬೇಕು. ಕೆಲವರ ಗುಣ ನೋಡಿ ಗುಣಿಸಬೇಕು ಅಂತಾರೆ ನಾಣಿ.

ಇನ್ನು ನಿರ್ದೇಶನದ ಬಗ್ಗೆ ಮಾತನಾಡಿರುವ ನಾಣಿ, ನನಗೆ ಎಲ್ಲರೂ ಕೇಳ್ತಾರೆ ಯಾಕೆ ನಿರ್ದೇಶನ ಮಾಡುವುದಿಲ್ಲ ನೀವು ಎಂದು ಕೇಳುತ್ತಾರೆ. ಇದಕ್ಕೆ ಉತ್ತರವೆಂದರೆ, ಅದು ತುಂಬಾ ಜವಾಬ್ದಾರಿಯುತವಾದ ಕೆಲಸ. 2 ವರ್ಷ ಸತತವಾಗಿ ಅದರ ಬಗ್ಗೆಯೇ ಗಮನವಿರಬೇಕು. ನಟನೆ ಮಾಡಿ ವರ್ಷಕ್ಕೆ 8ರಿಂದ 10 ಸಿನಿಮಾ ಮಾಡಬಹುದು. ಆದರೆ ನಿರ್ದೇಶಕನಾದರೆ, ಬೇರೆ ಕೆಲಸ ಮಾಡುವ ಹಾಗಿಲ್ಲ. ನಿರ್ದೇಶನದ ಬಗ್ಗೆಯೇ ಗಮನವಿರಬೇಕು.

ಅಲ್ಲದೇ ನಮಗೆ ಸಿಗಬೇಕಾದ ನಟನಾ ಅವಕಾಶವನ್ನು ತಪ್ಪಿಸಲು ಹಲವರು ಕಾದು ಕುಳಿತಿರುತ್ತಾರೆ. ಸತ್ತ ಹೆಣ ಹೋರಲು 4 ಜನರಿರುತ್ತಾರೆ. 1 ಸಿನಿಮಾವನ್ನು ನಿರ್ದೇಶಕ ಮಾತ್ರ ಹೊರಬೇಕು. ಹಾಗಾಗಿ ನಿರ್ದೇಶನ ಮಾಡಿ, ಸಿನಿಮಾ ಗೆಲ್ಲಿಸಬೇಕು ಅಂದ್ರೆ ಅಂಥವರು ತುಂಬಾ ಗ್ರೇಟ್ ಆಗಿರಬೇಕು. ಅದು ದೀಕ್ಷೆ ಇದ್ದ ಹಾಗೆ ಅಂತಾರೆ ನಾಣಿ.

- Advertisement -

Latest Posts

Don't Miss