Sandalwood News: ನಟಿ ಮಮತಾ ರಾವುತ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ನಟ ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ. ರೇಣುಕಾಸ್ವಾಮಿಯಂಥ ಸ್ವಾಮಿಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಹಾಗಾಗಿ ದರ್ಶನ್ ಹೊರಬರಬೇಕು ಅಂತಾ ಮಮತಾ ರಾವುತ್ ಹೇಳಿದ್ದಾರೆ.
ನನಗೂ ಕೂಡ ರೇಣುಕಾಸ್ವಾಮಿ ರಾತ್ರಿ ವೀಡಿಯೋ ಕಾಲ್ ಮಾಡಿದ್ದ. ಅಶ್ಲೀಲ ಮೆಸೇಜ್‌ಗಳನ್ನು ಮಾಡಿದ್ದ. ಈ ಪ್ರಕರಣದ ಬಗ್ಗೆ ಮಾತನಾಡುವುದಾದರೆ, ಎರಡೂ ಕೈ ಸೇರದೇ ಚಪ್ಪಾಳೆ ತಟ್ಟಲಾಗುವುದಿಲ್ಲ. ರೇಣುಕಾಸ್ವಾಮಿ ಮಾಡಿದ ತಪ್ಪಿದೆ, ಸ್ವಲ್ಪ ಸ್ಟ್ರಾಂಗ್ ಆಗಿಯೇ ಪ್ರತಿಕ್ರಿಯಿಸಿದ್ದಾರೆಂದು ಮಮತಾ ಹೇಳಿದ್ದಾರೆ.
ವಿವಾಹಿತೆಯರಿಗೂ ಬಿಡದೇ ಕಾಮೆಂಟ್, ಮೆಸೆಜ್, ಕಾಲ್, ವೀಡಿಯೋ ಕಾಲ್ ಮಾಡುತ್ತಾರೆ. ನಾವು ಅದೆಷ್ಟು ಬ್ಲಾಕ್ ಮಾಡಕ್ಕಾಗತ್ತೆ..? ಅದೆಷ್ಟು ಹೆದರಿಕೊಳ್ಳೋಕ್ಕೆ ಆಗತ್ತೆ..? ಬ್ಲಾಕಿಂಗ್ ಆಪ್ಶನ್ ಬರೀ ನಮ್ಮ ಬಳಿ ಇರುವುದಷ್ಟೇ ಅಲ್ಲ. ನಿಮ್ಮ ಬಳಿಯೂ ಇರುತ್ತದೆ. ನಮ್ಮ ವೀಡಿಯೋ ನಿಮಗೆ ಇಷ್ಟವಾಗದಿದ್ದಲ್ಲಿ, ನಮ್ಮನ್ನು ನೀವು ಬ್ಲಾಕ್ ಮಾಡಬಹುದು. ಅದನ್ನು ಬಿಟ್ಟು ಅಶ್ಲೀಲವಾಗಿ ಯಾಕೆ ಕಾಮೆಂಟ್ ಮಾಡಬೇಕು ಎಂದು ಮಮತಾ ಪ್ರಶ್ನಿಸಿದ್ದಾರೆ.
ಇದು ಸಾಮಾನ್ಯವಾದ ವಿಷಯವಲ್ಲ. ಎಷ್ಟೋ ಹೆಣ್ಣು ಮಕ್ಕಳು ಇಂಥ ಕಾಮೆಂಟ್‌ಗಳು, ಸೋಶಿಯಲ್ ಮೀಡಿಯಾದಲ್ಲಿ ಆಗುವಂಥ ಹೆರಾಸ್ಮೆಂಟ್ ತಡೆಯಲಾಗದೇ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರಗಳನ್ನು ಯಾರೂ ಮಾತನಾಡುವುದಿಲ್ಲ. ಯಾಕೆ ದರ್ಶನ್‌ರನ್ನು ಆರೋಪಿ ಎನ್ನುತ್ತಿದ್ದೀರಿ..? ಯಾಕೆ ರೇಣುಕಾಸ್ವಾಮಿ ಪರವೇ ಮಾತನಾಡುತ್ತಿದ್ದೀರಿ..? ರೇಣುಕಾಸ್ವಾಮಿ ಹಿನ್ನೆಲೆ ಬಗ್ಗೆಯೂ ನೀವು ಮಾತನಾಡಬೇಕು ಎಂದು ನಟಿ ಮಮತಾ ರಾವುತ್ ಆಕ್ರೋಶ ಹೊರಹಾಕಿದ್ದಾರೆ. ಪೂರ್ತಿ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ.