Political News: ಎಲ್.ಆರ್.ಶಿವರಾಮೇಗೌಡ ಸುದ್ದಿಗೋಷ್ಠಿ ನಡೆಸಿದ್ದು, ನನಗೂ ಪೆನ್‌ಡ್ರೈವ್‌ಗೂ ಸಂಬಂಧವಿಲ್ಲ ಎಂದಿದ್ದಾರೆ.
ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಲ್.ಆರ್.ಶಿವರಾಮೇಗೌಡ, ನನಗೂ ಪೆನ್ ಡ್ರೈ ಗೂ ಸಂಬಂಧ ಇಲ್ಲ. ಈಗ ನನ್ನ ಹೆಸರು ಬಳಸ್ತಾ ಇದ್ದಾರೆ. ನಾನು ಕೇವಲ ಫೋನ್ ಕನೆಕ್ಟ್ ಮಾಡಿದ್ದು ಅಷ್ಟೆ. ಆದರೆ ಈಗ ಅವರು ನನ್ನ ಹೆಸರು ಬಳಸಿದ್ದಾರೆ ಅದು ಅಪರಾಧ. ನನ್ನ ದೇವರಾಜೇಗೌಡ ೨೯ ರಂದು ಭೇಟಿ ಮಾಡಿದ್ದು. ಡಿಕೆ ಅವರನ್ನ ಭೇಟಿ ಮಾಡಿಸಿ ಎಂದು ದೇವರಾಜೇಗೌಡ ನನ್ನ ಭೇಟಿ ಮಾಡಿದ್ದರು. ಹೊಳೆನರಸೀಪುರದಲ್ಲಿ ನನ್ನ ಜೊತೆ ಮಾತನಾಡಿದ್ದರು. ನನ್ನ ಭೇಟಿ ಮಾಡಿದ ವೇಳೆ ಎಸ್ ಐ ಟಿ ವಿಚಾರ ಮಾತನಾಡಿದ. ನಂತರ ಡಿಕೆ ಭೇಟಿ ಮಾಡಿಸಿ ಎಂದ.
ನಂತರ ನಾನು ಡಿಕೆ ಅವರನ್ನ ಅವರ ಮನೆಯಲ್ಲಿ ಭೇಟಿ ಮಾಡಿದಾಗ ಈ ವಿಚಾರ ಹೇಳಿದೆ. ಆಗ ದೇವರಾಜೇಗೌಡನಿಗೆ ಕರೆ ಮಾಡಿದೆ ಬಾ ಭೇಟಿ ಮಾಡು ಅಂದೆ. ಈಗ ಆಗಲ್ಲ ಎಂದ ಫೋನ್ ನಲ್ಲಿ ಮಾತನಾಡಿದ. ಡಿಸಿಎಂ ಮಾತನಾಡಿ ನಿನ್ನ ಬಳಿ ಏನಿದ್ದಾವೆ ಅದನ್ನೆಲ್ಲಾ ಎಸ್ ಐ ಟಿ ಗೆ ಕೊಡಿ ಎಂದರು. ಇಷ್ಟೆ ಆಗಿದ್ದು ಆದರೆ ನಂತರ ಅವನು ಈ ನಾಟಕ ಮಾಡಿದ್ದಾರೆ. ಈ ಪೆನ್ ಡ್ರೈ ಗೂ ನನಗೂ ಏನೂ ಸಂಬಂಧ ಇಲ್ಲ ಎಂದು ಶಿವರಾಮೇಗೌಡ ಹೇಳಿದ್ದಾರೆ.
ಕಾರ್ತಿಕ್ ಗೌಡ ಏನು ಮಾತನಾಡಿದ್ದಾನೆ ನೋಡಿದ್ವಿ. ಎಸ್ ಐ ಟಿ ದೇವರಾಜೇಗೌಡ ನನ್ನ ಮೊದಲು ಅರೆಸ್ಟ್ ಮಾಡಿ ಅವನ ಬಳಿ ಇರುವ ಫೋನ್ ವಶ ಮಾಡಿಕೊಳ್ಳಬೇಕು. ಡಿಕೆ ಮಾತನಾಡಿದ ಬಳಿಕ ಮತ್ತೆ ದೇವರಾಜೇಗೌಡ ಇಲ್ಲಿಗೆ ಬಂದಿದ್ದ. ಅವನಿಗೆ ದುಡ್ಡ ಬೇಕಿತ್ತು ಅನ್ನಿಸುತ್ತೆ. ನಾನು ಎಸ್‌ಐಟಿಗೆ ಒತ್ತಾಯ ಮಾಡ್ತೀನಿ. ದೇವರಾಜೇಗೌಡನ ದುಡ್ಡಿನ ಮೂಲ ಹುಡುಕಬೇಕು. ದೇವರಾಜೇಗೌಡ ಬಾಯಿ ಬಿಡಿಸಿದ್ರೆ ಸತ್ಯಾಂಶ ಹೊರ ಬರುತ್ತದೆ. ದೇವರಾಜೇಗೌಡ ಬಾಡಿಯಲ್ಲೆ ಕ್ಯಾಮರಾ ಇದೆ ಅಂತಾರೆ. ಅವರ ಬಳಿ ವಾಕಿ ಟಾಕಿ ಇದೆ. ಅವನ ಮಗನ ಬಳಿ ಒಂದು ವಾಕಿ ಟಾಕಿ ಇರುತ್ತೆ. ಎಸ್ ಐ ಟಿ ಅವನ ಮೂರು ತಿಂಗಳ ಫೋನ್ ಲಿಸ್ಟ್ ತೆಗಿಸಬೇಕು ಎಂದು ಶಿವರಾಮೇಗೌಡ ಒತ್ತಾಯಿಸಿದ್ದಾರೆ.
ದೇವರಾಜೇಗೌಡ ಪೂರ್ಣವಾಗಿ ರೆಕಾರ್ಡ್ ಮಾಡಿರೋ ಆಡಿಯೋ ಬಿಡಲಿ ಎಲ್ಲಾ ಗೊತ್ತಾಗುತ್ತದೆ. ಎಸ್ ಐ ಟಿ ಕ್ರಮ ತೆಗೆದುಕೊಂಡಿದ್ದಾರೆ ಇನ್ನೂ ಬಿಗಿ ಮಾಡಬೇಕು. ಅವನು ಗ್ರಾಮಪಂಚಾಯ್ತಿ ಮೆಂಬರ್ ಆಗೋಕು ಅವ್ನು ಯೋಗ್ಯನಲ್ಲ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದವರು. ಅವರಿಗೆ ಹೆಚ್ಚಿನ ಜ್ಞಾನ ಇದೆ ಮಾತಾಡ್ತಾರೆ. ೪೦ ನಿಮಿಷದ ಆಡಿಯೋ ಇದೆ ಅಂತಿದ್ದಾನೆ ಬಿಡುಗಡೆ ಮಾಡಲಿ.
ದೇವರಾಜೇಗೌಡ ಹೇಳಿದ್ದಾನೆ ಬಿಜೆಪಿ ನಾಯಕರಿಗೆ ಇದರ ಬಗ್ಗೆ ಗೊತ್ತಿದೆ. ಹೀಗಾಗಿ ಅವರೇ ಹೇಳಿದ್ದಾರೆ ಬಿಡುಗಡೆ ಮಾಡಲಿ. ಇದಕ್ಕೆ ರುವಾರಿ ದೇವರಾಜೇಗೌಡ ಹಾಗು ಕಾರ್ತಿಕ್ ಇಬ್ಬರೇ ಕಾರಣ. ಇವತ್ತಿಗೂ ದೇವೇಗೌಡರು ಹಾಗೂ ಕುಮಾರಸ್ವಾಮಿ ಬಗ್ಗೆ ಗೌರವ ಇದೆ. ಒಮ್ಮೆ ರೇವಣ್ಣನವರು ಡಸ್ಟ್ ಬಿನ್ ಅಂತ ನನಗೆ ಕರೆದಿದ್ದರು. ನಾನು ಒಮ್ಮೆ ಇಂಗ್ಲೇಂಡ್ ಗೆ ಹೋದಾಗ ರೇವಣ್ಣ ಜೊತೆಯಲ್ಲೇ ಇದ್ರು. ಆಗಲೇ ಅವರನ್ನ ಆಚೆ ಹಾಕಿದ್ದು ಹೋಟೆಲ್‌ನಿಂದ . ಹೀಗೆ ಅವನು ಮಾಡಿದ್ರೆ ನಾನು ಮಾನನಷ್ಟ ಮೊಕದ್ದಮ್ಮೆ ಹೂಡ್ತಿನಿ. ಇನ್ಮೇಲೆ ಅವನು ಕಾಲ್ ಮಾಡಿದ್ರೆ ಫೋನ್ ಬಿಟ್ಟು ನಮಸ್ಕಾರ ಅಂತಿನಿ ಎಂದು ಶಿವರಾಮೇಗೌಡ ಹೇಳಿದ್ದಾರೆ.
ಕಾರ್ತಿಕ್ ಗೌಡ ಕೂಡ ಹೇಳಿದ್ದಾನೆ. ದೇವರಾಜೇಗೌಡಗೆ ನಾನು ಪೆನ್ ಡ್ರೈವ್ ಕೊಟ್ಟಿದ್ದು ಎಂದು. ಹಾಗಾಗಿ ಇದನ್ನ ಯಾರು ಬಿಡುಗಡೆ ಮಾಡಿದ್ರು ಗೊತ್ತಿಲ್ಲ. ಪೆನ್ ಡ್ರೈವ್ ಪ್ರಕರಣದ ಹಿಂದೆ ದೇವರಾಜೇಗೌಡ ಇದ್ದಾರೆ. ಸಂಪೂರ್ಣ ಅವರೇ ಇದ್ದಾರೆ. ನಾನು ೮೦ ಕೋಟಿ ಡಿಕ್ಲೇರ್ ಮಾಡಿಕೊಂಡಿದ್ದೇನೆ ಅಂದಿದ್ದಾರೆ. ಹಾಗಾಗಿ ದುಡ್ಡಿನ ಮೂಲ ಹುಡುಕಬೇಕು. ದೇವರಾಜೇಗೌಡರ ದುಡ್ಡಿನ ಮೂಲ ಹುಡುಕಬೇಕು.
ಎಸ್ ಐಟಿಯವರು ಇವನ ಬಾಯಿ ಬಿಡಿಸಬೇಕು. ಹೆಣ್ಣುಮಕ್ಕಳ ಭವಿಷ್ಯ ಮುಖ್ಯ. ಹಾಸನದಲ್ಲಿ ಏನಾಗುತ್ತೆ ಅಂತ ಗೊತ್ತಿಲ್ಲ. ಹಾಗಾಗಿ ಸಂಪೂರ್ಣ ತನಿಖೆಯಾಗಬೇಕು. ದೇವರಾಜೇಗೌಡರ ಬಾಡಿಯಲ್ಲೇ ಕ್ಯಾಮೆರಾ ಇದೆ. ಅವನು ಎಲ್ಲಿ ಇಟ್ಕೊಂಡಿದ್ದಾನೆ ಗೊತ್ತಿಲ್ಲ. ಅವನೊಂದು ಕಡೆ ಮಗ ಒಂದು ಕಡೆ ಕೂರ್ತಾನೆ. ಎಸ್ ಐಟಿಯವರು ಅವನ ದುಡ್ಡಿನ ಮೂಲ ಹುಡುಕಬೇಕು. ಮೂರು ತಿಂಗಳ ಸಂಪಾದನೆ ಹುಡುಕಬೇಕು. ಹಾಸನದಲ್ಲಿ ಅನಾಹುತ ನಡೆದು ಹೋಗಿದೆ. ಇದರ ಸತ್ಯಾಂಶ ಹೊರಬರಬೇಕು. ನಾನು ಬಿಜೆಪಿಯಲ್ಲೇ ಇದ್ದೇನೆ. ನನ್ನ ಜೊತೆ ವಿವೇಕ್ ರೆಡ್ಡಿ ಕೂಡ ಇದ್ರು. ದೇವರಾಜೇಗೌಡನನ್ನ ಯಾರೂ ನಂಬಲಾಗಲ್ಲ. ವಿವೇಕ್ ರೆಡ್ಡಿಗೆ ಹೇಳ್ತಿನಿ. ದೇವರಾಜೇಗೌಡ ಜೊತೆ ಎಚ್ಚರ ಆಗಿರಿ ಎಂದು LR ಶಿವರಾಮೇಗೌಡ ಹೇಳಿದ್ದಾರೆ.
ಗೆಲ್ಲುವ ಭರವಸೆ ವ್ಯಕ್ತಪಡಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ: ರಿಲ್ಯಾಕ್ಸ್ ಮೂಡ್‌ನಲ್ಲಿ..!
ಕಾಂಗ್ರೆಸ್ ನಾಯಕರ ವಿರುದ್ಧ ಬೆಂಗಳೂರಿನ ಬಸ್‌ಸ್ಟ್ಯಾಂಡ್‌ನಲ್ಲಿ ರಾರಾಜಿಸಿದ ಪೋಸ್ಟರ್‌ಗಳು