Horoscope: ಪ್ರಪಂಚದಲ್ಲಿ ಎಲ್ಲ ಜನರೂ ಒಂದೇ ರೀತಿ ಇರುವುದಿಲ್ಲ. ಒಬ್ಬೊಬ್ಬರದ್ದೂ ಒಂದೊದು ರೀತಿಯ ಜೀವನ. ಅದೇ ರೀತಿ ಒಬ್ಬೊಬ್ಬರದ್ದೂ ಒಂದೊಂದು ರೀತಿಯ ಜೀವನ. ಹಾಗಾಗಿ ನಾವಿಂದು ಸದಾ ಹಸನ್ಮುಖಿಯಾಗಿರುವ ಅಂದ್ರೆ, ಸದಾ ನಗುನಗುತ್ತಲೇ ಇರುವ ರಾಶಿ ಯಾವುದು ಅಂತಾ ತಿಳಿಸಲಿದ್ದೇವೆ.
ತುಲಾ: ತುಲಾ ರಾಶಿಯವರು ಸದಾ ನಗು ನಗುತ್ತಲೇ ಇರಲು ಬಯಸುವವರು. ಇವರ ಜೀವನದಲ್ಲಿ ಅದೆಷ್ಟರ ಮಟ್ಟಿಗೆ ಗೊಂದಲಗಳಿರುತ್ತದೆ ಎಂದರೆ, ಇವರು ನಗು ಎನ್ನುವುದನ್ನೇ ಮರೆಯಬೇಕು. ಆದರೆ, ಇವರು ಹಾಗಿರುವುದೇ ಇಲ್ಲ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ, ಧೈರ್ಯದಿಂದ ಮುನ್ನುಗ್ಗುವ ಗುಣ ಇವರದ್ದಾಗಿರುತ್ತದೆ. ಹಾಗಾಗಿ ಇವರು ಸದಾ ನಗು ನಗುತ್ತಲೇ ಇರುತ್ತಾರೆ. ಅಲ್ಲದೇ, ಬೇರೆಯವರಿಗೂ ನಗಿಸುತ್ತಿರುತ್ತಾರೆ.
ವೃಶ್ಚಿಕ: ವೃಶ್ಚಿಕ ರಾಶಿಯವರು ಹೆಚ್ಚಾಗಿ ಕೋಪದ ಸ್ವಭಾವ ಉಳ್ಳವರಾಗಿರುತ್ತಾರೆ. ನಾಯಕತ್ವದ ಗುಣವೂ ಇವರಲ್ಲಿ ಹೆಚ್ಚಾಗಿ ಇರುತ್ತದೆ. ಹಾಗಾಗಿ ಮನಸ್ಸಿನಲ್ಲಿ ಹಲವು ಮನಸ್ತಾಪ, ಕೋಪ, ಕೆಲಸದ ಒತ್ತಡ ಏನೇ ಇದ್ದರೂ ಕೂಡ, ಯಾರಾದರೂ ಮಾತನಾಡಿಸಿದರೆ, ಹಸನ್ಮುಖಿಯಾಗಿಯೇ ಇವರು ಮಾತು ಮುಂದುವರಿಸುತ್ತಾರೆ.
ಮಿಥುನ: ಮಿಥುನ ರಾಶಿಯವರು ಸದಾ ಹಸನ್ಮುಖಿಯಾಗಿರುತ್ತಾರೆ. ಇವರಿಗೆ ಇಂದಿನ ಖುಷಿಗಷ್ಟೇ ಬೆಲೆ ಕೊಡುತ್ತಾರೆ ಹೊರತು. ಹಿಂದೆ ನಡೆದ ಘಟನೆ ಅಥವಾ ಮುಂದೆ ಏನು ನಡೆಯಬಹುದು ಅನ್ನೋ ಬಗ್ಗೆ ಇವರು ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಗಂತ ಇವರಿಗೆ ಜವಾಬ್ದಾರಿ ಇಲ್ಲ ಅಂತಲ್ಲ. ಬಂದಾಗ, ಕಷ್ಟಗಳನ್ನು ಎದುರಿಸಿದರಾಯಿತು ಎಂಬ ಗುಣ ಇವರದ್ದಾಗಿರುತ್ತದೆ. ಹಾಗಾಗಿ ಇವರು ಸದಾ ಲವಲವಿಕೆಯಿಂದ ಇರುತ್ತಾರೆ.
ಮೀನ: ಮೀನ ರಾಶಿಯವರು ಮೌನಿಗಳಾಗಿರುತ್ತಾರೆ. ಹೆಚ್ಚು ಮಾತನಾಡುವುದಿಲ್ಲ. ಅಲ್ಲದೇ, ಬೇಗ ಭಾವುಕರಾಗುವುದು ಕೂಡ ಇವರ ಗುಣವಾಗಿರುತ್ತದೆ. ಮನಸ್ಸಿನಲ್ಲಿ ಹತ್ತು ಹಲವು ಟೆನ್ಶನ್ ಇದ್ದರೂ ಕೂಡ, ಇವರು ಸದಾ ನಗು ನಗುತ್ತಲೇ ಇರುತ್ತಾರೆ.
ಪತ್ನಿಯಲ್ಲಿ ಇಂಥ ಗುಣವಿದ್ದರೆ, ಪತಿ ಶ್ರೀಮಂತನಾಗುವುದು ಗ್ಯಾರಂಟಿ ಅಂತಾರೆ ಚಾಣಕ್ಯರು