Horoscope: ಒಂದು ಬೆರಳು ಇದ್ದ ಹಾಗೆ ಇ್ನನೊಂದು ಬೆರಳು ಇರೋದಿಲ್ಲಾ ಅಂತಾ ಹೇಳುತ್ತಾರೆ. ಅದೇ ರೀತಿ ಓರ್ವ ಮನುಷ್ಯನ ಗುಣ ಇದ್ದ ಹಾಗೆ ಇನ್ನೋರ್ವ ಮನುಷ್ಯನ ಗುಣ ಇರುವುದಿಲ್ಲ. ಎಲ್ಲರ ಗುಣ, ಮನಸ್ಥಿತಿ, ಚಿಂತನೆ ಬೇರೆ ಬೇರೆ ರೀತಿ ಇರುತ್ತದೆ. ಅದೇ ರೀತಿ ಒಂದೊಂದು ರಾಶಿಯವರದ್ದೂ ಒಂದೊಂದು ಗುಣ. ಅಂಥ ಗುಣಗಳಲ್ಲಿ ನಾವಿಂದು, ಕೋಪ ಬಂದರೂ, ತಾಳ್ಮೆಯಿಂದ ಇರುವ ರಾಶಿಯವರ ಬಗ್ಗೆ ವಿವರಣೆ ನೀಡಲಿದ್ದೇವೆ.
ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ಮುಗ್ಧ ಸ್ವಭಾವದವರು ಆಗಿರುವುದರಿಂದ, ಇವರು ಯಾರೊಂದಿಗೂ ಜಗಳವಾಡಲು ಬಯಸುವುದಿಲ್ಲ. ಸಂಬಂಧಗಳನ್ನು ಗೌರವಿಸುತ್ತಾರೆ. ಅದನ್ನು ಕಾಪಾಡಿಕೊಳ್ಳುವ ಮನಸ್ಸು ಮಾಡುತ್ತಾರೆ. ಕೆಲವೊಮ್ಮೆ ಚೆನ್ನಾಗಿ ಬೈದು ಬಿಡಬೇಕು. ಎದುರುತ್ತರ ನೀಡಿಬಿಡಬೇಕು ಅಂತಾ ಅನ್ನಿಸಿದರೂ ಕೂಡ, ಅಂಥ ಕೆಲಸ ಮಾಡದೇ, ಸಂಬಂಧ ಕಾಪಾಡಿಕೊಳ್ಳಲು ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳುತ್ತಾರೆ.
ಮೀನ ರಾಶಿ: ಮೀನ ರಾಶಿಯವರು ಕೂಡ ಶಾಂತ ಸ್ವಭಾವದವರು. ಇವರು ಬಹುಬೇಗ ಭಾವುಕರಾಗುತ್ತಾರೆ. ತಮ್ಮ ಮನಸ್ಸಿನಲ್ಲಿರುವ ನೋವನ್ನು ನುಂಗಿ, ಖುಷಿಯಾಗಿರುವಂತೆ, ಏನು ತೊಂದರೆಯೇ ಇಲ್ಲ ಎಂಬಂತೆ ಇರುತ್ತಾರೆ. ಈ ರಾಶಿಯವರಿಗೆ ತಾಳ್ಮೆ ಹೆಚ್ಚು. ಹಾಾಗಾಗಿ ಎಷ್ಟೇ ಕೋಪ ಬಂದರೂ, ಅದನ್ನು ಮುಚ್ಚಿಟ್ಟು, ಮೌನವಾಗಿರುತ್ತಾರೆ.
ಮಿಥುನ ರಾಶಿ: ಮಿಥುನ ರಾಶಿಯವರು ಕೋಪ ಬಂದರೂ, ತಾಳ್ಮೆಯಿಂದ ವರ್ತಿಸುತ್ತಾರೆ. ಆದರೆ ಒಮ್ಮೆ ಇವರ ಕೋಪ ಸ್ಪೋಟಿಸಿದರೆ, ಎದುರಿನವರು ಶಾಂತವಾಗಿರಬೇಕಾಗುತ್ತದೆ. ಅಂಥ ಕೋಪ ಇವರದ್ದಾಗಿರುತ್ತದೆ. ಆದರೆ ಹೆಚ್ಚಿನ ವೇಳೆ ಇವರು ಕೋಪ ಬಂದರೂ, ತಾಳ್ಮೆಯಿಂದ ವರ್ತಿಸುತ್ತಾರೆ. ತಾನು ಮಾತನಾಡಿದರೆ, ಸಂಬಂಧ, ಸ್ನೇಹ ಹಾಳಾಗಬಹುದು. ಗಾಜು ಒಡೆದ ಹಾಗೆ, ಸಂಬಂಧವೂ ಜೋಡಿಸಲಾಗದಂತಾಗಬಹುದು ಎನ್ನುವ ತಿಳುವಳಿಕೆ ಇವರಿಗಿರುತ್ತದೆ.