Friday, November 22, 2024

Latest Posts

ತಾವು ಧರಿಸುವ ಬಟ್ಟೆಯಿಂದಲೇ ಗಮನ ಸೆಳೆಯುವ ರಾಶಿಯವರು ಇವರು

- Advertisement -

Horoscope: ಬಟ್ಟೆ ಧರಿಸುವುದು ಸಾಮಾನ್ಯ ವಿಷಯ. ಮನುಷ್ಯ ತನ್ನ ಮಾನ ಮುಚ್ಚಿಕೊಳ್ಳಲು ಬಟ್ಟೆ ಧರಿಸುತ್ತಾನೆ. ಆದರೆ ಇಂದಿನ ಕಾಲದಲ್ಲಿ ಬಟ್ಟೆಯನ್ನು ಬರೀ ದೇಹ ಮುಚ್ಚಿಕೊಳ್ಳಲು ಬಯಸುವುದಿಲ್ಲ. ಬದಲಾಗಿ, ಚೆಂದವಾಗಿ ಕಾಣಲು, ನಾಲ್ಕು ಜನರ ಮಧ್ಯೆ ಆಕರ್ಷಕವಾಗಿ ಕಾಣಲು ಧರಿಸುತ್ತಾರೆ. ಇಂದು ನಾವು ಯಾವ ಬಟ್ಟೆ ಹಾಕಿದರೂ ಸೆಂಟರ್ ಆಫ್ ಅಟ್ರ್ಯಾಕ್ಷನ್ ರೀತಿ ಕಾಣಿಸುವ ರಾಶಿಯವರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಮೇಷ: ಮೇಷ ರಾಶಿಯವರ ಸೆಲೆಕ್ಷನ್ ತುಂಬಾ ಉತ್ತಮವಾಗಿರುತ್ತದೆ. ಬಟ್ಟೆ, ಕಿವಿಯೋಲೆ, ಚಪ್ಪಲಿ ಎಲ್ಲವನ್ನೂ ಸಖತ್ ಆಗಿ ಸೆಲೆಕ್ಟ್ ಮಾಡುತ್ತಾರೆ. ಅಲ್ಲದೇ, ಅವರು ಯಾವ ರೀತಿಯ ಫ್ಯಾಷನ್ ಮಾಡಿದರೂ ಅದು ಅವರಿಗೆ ಒಪ್ಪುವ ರೀತಿ ಇರುತ್ತದೆ. ಹಾಗಾಗಿ ಮೇಷ ರಾಶಿಯವರು ತವು ಧರಿಸುವ ಬಟ್ಟೆಯಿಂದಲೇ ಗಮನ ಸೆಳೆಯುತ್ತಾರೆ.

ಸಿಂಹ: ಸಿಂಹ ರಾಶಿಯವರು ತಮ್ಮ ಗಾಂಭೀರ್ಯದಿಂದಲೇ ಚೆಂದಗಾಣಿಸುತ್ತಾರೆ. ಇನ್ನು ಫ್ಯಾ,ನ್ ವಿಚಾರಕ್ಕೆ ಬಂದರೆ, ಹೆಚ್ಚು ಅಥವಾ ಪದೇ ಪದೇ ಖರ್ಚು ಮಾಡದೇ, ಉತ್ತಮ ಕ್ವಾಲಿಟಿಯ ಬಟ್ಟೆಯನ್ನೇ ಧರಿಸಲು ಇಚ್ಛಿಸುತ್ತಾರೆ. ಹಾಗಾಗಿ ಇವರು ನಾಲ್ಕು ಜನರ ಮಧ್ಯೆ ಎದ್ದು ಕಾಣಿಸುತ್ತಾರೆ.

ತುಲಾ: ತುಲಾ ರಾಶಿಯವರು ಸದಾಕಾಲ ನೀಟ್ ಆಗಿ ಇರಲು ಇಷ್ಟಪಡುತ್ತಾರೆ. ಅಲ್ಲದೇ, ಬ್ರ್ಯಾಂಡೆಡ್, ಕಾಸ್ಟ್‌ಲೀ ವಸ್ತುಗಳನ್ನು ಬಳಸುವ ಆಸೆ ಇವರಿಗೆ ಇರುತ್ತದೆ. ಯಾವಾಗಲೂ ಟಿಪ್‌ಟಾಪ್ ಆಗಿ ಕಾಣಲು ಬಯಸುತ್ತಾರೆ. ಅದೇ ರೀತಿ ಎಲ್ಲಾದರೂ ಹೋಗುವಾಗ ಸಿಂಪಲ್ ಆದರೂ, ಗಮನ ಸೆಳೆಯುವಂತೆ ರೆಡಿಯಾಗುತ್ತಾರೆ.

ಕುಂಭ: ಕಾಲ ತಕ್ಕಂತೆ ಬದಲಾಗುವುದು ಕುಂಭ ರಾಶಿಯವರ ಸ್ವಭಾವ. ಹಾಗಾಗಿ ಇವರಿಗೆ ಟ್ರೆಂಡಿಯಾಗಿರು, ಫ್ಯಾಷನೇಬಲ್ ಆಗಿರುವ ಬಟ್ಟೆ ಧರಿಸುವುದೆಂದರೆ ಬಲು ಇಷ್ಟ. ಆದರೆ ಮಿತಿಮೀರಿ ಫ್ಯಾಷನ್ ಮಾಡುವುದು, ಮೇಕಪ್ ಮಾಡುವುದೆಲ್ಲ ಇವರಿಗೆ ಇಷ್ಟವಾಗುವುದಿಲ್ಲ. ಸಿಂಪಲ್ ಆಗಿಯೇ ಚೆಂದಗಾಣಿಸಲು ಇವರು ಇಷ್ಟಪಡುತ್ತಾರೆ.

- Advertisement -

Latest Posts

Don't Miss