Horoscope: ಹಣ ಉಳಿತಾಯ ಮಾಡುವುದು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಅದರಲ್ಲೂ ಕೊರೋನಾ ಬಂದು ಹೋದ ಬಳಿಕ, ಹಣ ಉಳಿತಾಯದ ಮಹತ್ವವನ್ನು ಎಲ್ಲರೂ ಅರಿತಿದ್ದಾರೆ. ಆದರೆ ಮೊದಲಿನಿಂದಲೂ ಹಣ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗಿರುವ ರಾಶಿಯವರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
ಕನ್ಯಾ: ಕನ್ಯಾ ರಾಶಿಯವರಿಗೆ ಬುದ್ಧಿವಂತಿಕೆ ಹೆಚ್ಚು. ಎಲ್ಲರಿಗಿಂತ ಡಿಫ್ರೆಂಟ್ ಆಗಿ ಯೋಚಿಸುವ ಇವರು, ಉಳಿತಾಯದಲ್ಲೂ ಬುದ್ಧಿವಂತಿಕೆ ವಹಿಸುತ್ತಾರೆ. ಖರೀದಿಸುವಾಗ, ಅಡುಗೆ ಮಾಡುವಾಗ, ಅಥವಾ ಯಾವುದಾದರೂ ವಸ್ತು ಬಳಸುವಾಗ, ಅದರಲ್ಲಿ ಹೇಗೆ ಲಾಭ ಮಾಡಬಹುದು. ಅಥವಾ ಅದರಲ್ಲಿ ಹೇಗೆ ಉಳಿತಾಯ ಮಾಡಬಹುದು ಎಂದು ಇವರು ಖಂಡಿತವಾಗಿಯೂ ಯೋಚಿಸುತ್ತಾರೆ. ಮತ್ತು ಉಳಿತಾಯ ಮಾಡುತ್ತಾರೆ.
ತುಲಾ: ತುಲಾ ರಾಶಿಯವರಿಗೆ ಐಷಾರಾಮಿ ಜೀವನ ನಡೆಸುವುದು ಎಂದರೆ, ಬಲು ಇಷ್ಟ. ಬ್ರ್ಯಾಂಡೆಡ್ ವಸ್ತು ಬಳಸುವುದು, ಟ್ರಿಪ್ ಹೋಗುವುದು, ರುಚಿ ರುಚಿ ತಿಂಡಿ ತಿನ್ನುವುದು ಇವೆಲ್ಲವೂ ಇಷ್ಟ. ಇದರ ಜೊತೆಗೆ ಭವಿಷ್ಯದ ಬಗ್ಗೆ ಯೋಚಿಸುವ ಜಾಣತನವೂ ಇವರಲ್ಲಿದೆ. ಹಾಗಾಗಿ ಕಷ್ಟಕಾಲಕ್ಕೆ ಬೇಕಾಗಬಹುದು ಎಂದು ಹಣ ಕೂಡಿಡುವುದರಲ್ಲಿ ಇವರು ನಿಸ್ಸೀಮರು.
ವೃಶ್ಚಿಕ: ವೃಶ್ಚಿಕ ರಾಶಿಯವರು ಹಣವನ್ನು ಉಳಿಸುವುದರಲ್ಲಿ ನಿಸ್ಸೀಮರು. ಸೇವಿಂಗ್ಸ್ ಮಾಡಲು ಏನೇನು ದಾರಿ ಇದೆಯೋ, ಎಲ್ಲವನ್ನೂ ಬುದ್ಧಿವಂತಿಕೆಯಿಂದ ನಿಭಾಯಿಸುವ ಬುದ್ಧಿವಂತಿಕೆ ವೃಶ್ಚಿಕ ರಾಶಿಯವರಿಗೆ ಇರುತ್ತದೆ. ಅಲ್ಲದೇ ಅವಶ್ಯಕತೆಗೆ ಮೀರಿ ಹಣ ಖರ್ಚು ಮಾಡದ ಕಾರಣ, ಇವರ ಸೇವಿಂಗ್ ಉತ್ತಮವಾಗಿರುತ್ತದೆ. ಅಲ್ಲದೇ, ಪದೇ ಪದೇ ಬಟ್ಟೆ, ಚಪ್ಪಲಿಗೆ ಖರ್ಚು ಮಾಡಲು ಇಚ್ಛಿಸದ ಇವರು ಏನು ಖರೀದಿ ಮಾಡಬೇಕು ಎಂದರೂ ಉತ್ತಮ ಕ್ವಾಲಿಟಿಯದ್ದೇ ಖರೀದಿಸಿಬಿಡುತ್ತಾರೆ. ಇದರಿಂದ ಮೂರ್ನಾಲ್ಕು ವರ್ಷ ಆ ವಸ್ತುವಿಗೆ ಮತ್ತೆ ಖರ್ಚು ಮಾಡಲು ಪ್ರಮೇಯ ಬಾರದಿರಲು ಎಂಬುದು ಅವರ ಉಪಾಯ.
ಮಕರ: ಮಕರ ರಾಶಿಯವರು ಹಣ ಉಳಿಸುವುದರಲ್ಲಿ ಮತ್ತು ಗಳಿಸುವುದರಲ್ಲಿ ನಿಸ್ಸೀಮರು. ಕಷ್ಟಪಟ್ಟು ದುಡಿದ ದುಡ್ಡನ್ನು ಮನಸ್ಸಿಗೆ ಬಂದ ಹಾಗೆ ಖರ್ಚು ಮಾಡುವುದಿಲ್ಲ. ಯಾವುದಾದರೂ ವಸ್ತುವನ್ನು ಖರೀದಿಸಬೇಕಾದರೆ, ಅದು ಅವಶ್ಯಕತೆ ಇದ್ದರೆ ಮಾತ್ರ ಅದನ್ನು ಖರೀದಿಸುತ್ತಾರೆ. ಹಾಗಂತ ಲೈಫನ್ನೇ ಎಂಜಾಯ್ ಮಾಡುವುದಿಲ್ಲ ಅಂತೇನಿಲ್ಲ. ಬದಲಾಗಿ, ಅವರ ಆದಾಯಕ್ಕಿಂತ ಖರ್ಚು ಮಿತಿಮೀರಲು ಬಿಡುವುದಿಲ್ಲ.