Thursday, October 16, 2025

Latest Posts

ಪ್ರೀತಿಯ ವಿಷಯದಲ್ಲಿ ಹೆಚ್ಚು ಟೆನ್ಶನ್ ತೆಗೆದುಕೊಳ್ಳದ ರಾಶಿಯವರು ಇವರು

- Advertisement -

Spiritual: ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಒಂದು ಸಲವಾದ್ರೂ ಪ್ರೀತಿ ಆಗೇ ಆಗುತ್ತದೆ. ಪ್ರೀತಿಸಿದವರು ಸಿಗದಿದ್ದರೂ, ಒಬ್ಬರ ಮೇಲಾದರೂ ಪ್ರೀತಿ ಮೂಡಿರುತ್ತದೆ. ಕೆಲವರು ಪ್ರೀತಿಯನ್ನು ಸದಾಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಸಾಯುವ ಕೊನೆ ಘಳಿಗೆಯ ತನಕವೂ ಅವರಿಗೆ ಆ ಪ್ರೀತಿ ನೆನಪಿನಲ್ಲಿರುತ್ತದೆ. ಆದ್ರೆ ಇನ್ನು ಕೆಲವರು ಪ್ರೀತಿಯನ್ನು ಅಷ್ಟು ಸಿರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಬಂದವರು ಬರಲಿ, ಹೋದವರು ಹೋಗಲಿ ಅನ್ನುವ ಮನಸ್ಥಿತಿ ಅವರದ್ದು. ಅಂಥವರ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.

ಮೇಷ: ಮೇಷ ರಾಶಿಯವರು ಪ್ರೀತಿ ವಿಷಯದಲ್ಲಷ್ಟೇ ಅಲ್ಲ. ಯಾವುದಕ್ಕೂ ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಜೊತೆಗೆ ಇರುವವರನ್ನು ಪ್ರೀತಿ, ಕಾಳಜಿಯಿಂದ ಕಾಣುತ್ತಾರೆ. ಅವರಿಂದ ದೂರವಾದ ಮೇಲೆ ಅವರು ಕೇರ್ ಮಾಡುವುದಿಲ್ಲ. ಅವರು ತಾವಾಯಿತು ತಮ್ಮ ಜೀವನವಾಯಿತು ಅನ್ನುವ ರೀತಿ ಇರುತ್ತಾರೆ.

ಮಿಥುನ: ಮಿಥುನ ರಾಶಿಯವರು ಸದಾ ಕಾಲ ಕೂಲ್ ಆಗಿರುತ್ತಾರೆ. ಯಾವುದೇ ಕೆಲಸಕ್ಕೂ ಟೆನ್ಶನ್ ತೆಗೆದುಕೊಳ್ಳುವುದಿಲ್ಲ. ತಮ್ಮ ಪ್ರಯತ್ನ ತಾವು ಮಾಡುತ್ತಾರೆ. ಪ್ರಯತ್ನ ವಿಫಲವಾದರೂ, ಸಫಲವಾದರೂ ಅವರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇವರು ಕೂಡ ಪ್ರೀತಿಯ ವಿಷಯದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.

ಕುಂಭ: ಕುಂಭ ರಾಶಿಯವರು ಹುಂಬರು ಅಂತಾ ಹೇಳಲಾಗುತ್ತದೆ. ಕೊಂಚ ವ್ಯಂಗ್ಯವಾಗಿ ಮಾತನಾಡುವುದು ಇವರ ಗುಣ. ಅದರಂತೆ, ಪ್ರೀತಿಯ ವಿಷಯದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳದೇ, ಬಂದರೆ ಬರಲಿ, ಬಿಟ್ಟರೆ ಬಿಡಲಿ ಎಂಬ ಸ್ವಭಾವದವರು. ತಮಗೆ ಸಿಗದಿದ್ದನ್ನು ಅಲ್ಲೆ ಮರೆತು ಮುಂದೆ ಸಾಗುವ ಗುಣ ಇವರದ್ದಾಗಿರುತ್ತದೆ. ಜೀವನದಲ್ಲಿ ಯಶಸ್ಸು ಗಳಿಸಬೇಕು. ಸ್ವಾಭಿಮಾನದಿಂದ ಇರಬೇಕು ಎನ್ನುವುದು ಇವರ ಸ್ವಭಾವ.

ಧನು: ಧನು ರಾಶಿಯವರು ಸಂಸಾರ ಸುಖಕ್ಕಿಂತ ಹೆಚ್ಚು, ಪ್ರಪಂಚ ಪರ್ಯಟನೆಗೆ ಒತ್ತು ಕೊಡುತ್ತಾರೆ. ಮದುವೆ ಎಂದರೆ ದೂರ ಓಡುವ ಇವರು, ಮದುವೆಯಾದ ಮೇಲೆ ಸಂಗಾತಿ ಜೊತೆ ಮನೆಯಲ್ಲಿ ಸಂಸಾರ ಮಾಡುವುದಕ್ಕಿಂತ ಹೆಚ್ಚು, ಪ್ರವಾಸಕ್ಕೆ ಹೆಚ್ಚು ಕಾಲ ಕಳೆಯಲು ಪ್ರಯತ್ನಿಸುತ್ತಾರೆ. ಕಷ್ಟವನ್ನು ಸುಖವಾಗಿ ಪರಿವರ್ತಿಸುವ ಗುಣ ಇವರದ್ದಾಗಿರುತ್ತದೆ. ಹಾಗಾಗಿ ಇವರು ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.

- Advertisement -

Latest Posts

Don't Miss