Friday, November 22, 2024

Latest Posts

ನಿರ್ಲಕ್ಷ್ಯದಿಂದಲೇ ತಮ್ಮ ಜೀವನದಲ್ಲಿ ನಷ್ಟ ಅನುಭವಿಸುವ ರಾಶಿಯವರು ಇವರು

- Advertisement -

Horoscope: ನೀವು ಕೆಲವರನ್ನು ಗಮನಿಸಿರಬಹುದು. ನಾಲ್ಕೈದು ಬಾರಿ, ಕರೆದರೂ ಕೇಳಿಸದ ಹಾಗೆ, ಕೆಲಸ ಹೇಳಿದಾಗ, ನನಗೂ ಅದಕ್ಕೂ ಸಂಬಂಧವೇ ಇಲ್ಲದ ಹಾಗೆ ವರ್ತಿಸುತ್ತಾರೆ. ಇಂಥ ವರ್ತನೆಯಿಂದಲೇ ಅವರು ತಮ್ಮ ಜೀವವನದಲ್ಲಿ ನಷ್ಟ ಅನುಭವಿಸುತ್ತಾರೆ. ಹೀಗೆ ನಿರ್ಲಕ್ಷ್ಯವನ್ನೇ ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡ ರಾಶಿಗಳು ಯಾವುದು ಅಂತಾ ತಿಳಿಯೋಣ ಬನ್ನಿ..

ಮೇಷರಾಶಿ: ಮೇಷ ರಾಶಿಯವರು ಬೇರೆಯವರ ಮಾತನ್ನು, ಬೇರೆಯವರ ಮನವಿಯನ್ನು ಹೆಚ್ಚು ತಿರಸ್‌ಕರಿಸುತ್ತಾರೆ. ಏಕೆಂದರೆ, ಇವರಿಗೆ ತಮ್ಮ ಸ್ವಾರ್ಥವೇ ಕೆಲವೊಮ್ಮೆ ಮುಖ್ಯ ಎನ್ನಿಸುತ್ತದೆ. ಹಾಗಾಗಿ ಎದುರಿನವರ ಮಾತಿಗೆ ಇವರು ಬೆಲೆ ಕೊಡುವುದಿಲ್ಲ. ಇದೇ ನಿರ್ಲಕ್ಷ್ಯ ಇವರೊಂದಿಗಿನ ಸಂಬಂಧ ಹಾಳಾಗಲು ಕಾರಣವಾಗುತ್ತದೆ. ಇವನ ಮಾನಸಿಕ ನೆಮ್ಮದಿ ಹಾಳಾಗಲು ಕೂಡ, ಇದೇ ನಿರ್ಲಕ್ಷ್ಯವೇ ಕಾರಣ.

ಮಿಥುನ ರಾಶಿ: ಮಿಥುನ ರಾಶಿಯವರು ಮನಸ್ಸಿನಿಂದ ಒಳ್ಳೆಯವರೇ ಆಗಿದ್ದರೂ ಕೂಡ, ಕೆಲವೊಮ್ಮೆ ಉದಾಸೀನದಿಂದ ಕೆಲವರ ಮಾತನ್ನು, ತಮ್ಮವರನ್ನು ನಿರ್ಲಕ್ಷಿಸುತ್ತಾರೆ. ಆದರೆ ಇದೇ ಉದಾಸಿನದಿಂದ ಮಾಡಿದ ನಿರ್ಲಕ್ಷ್ಯ ಇವರ ನೆಮ್ಮದಿಯನ್ನು ಹಾಳು ಮಾಡುವ ಹಂತಕ್ಕೆ ಹೋಗಬಹುದು. ಹಾಗಾಗಿ ಇವರು ಪ್ರೀತಿ ಪಾತ್ರರನ್ನು, ಮತ್ತವರ ಮಾತನ್ನು ನಿರ್ಲಕ್ಷ್ಯ ಮಾಡದಿದ್ದಲ್ಲಿ ಉತ್ತಮ.

ಸಿಂಹ ರಾಶಿ: ಕಾಡಿನ ರಾಜ ಸಿಂಹ ಹೇಗೆ ಕಾಡಿನ ನಾಯಕತ್ವ ವಹಿಸಿಕೊಂಡಿರುತ್ತಾನೋ., ಅದೇ ರೀತಿ ಸಿಂಹ ರಾಶಿಯವರು ಕೂಡ ಲೀಡರ್ ಆಗುವ ಎಲ್ಲ ಗುಣಗಳನ್ನು ಹೊಂದಿರುತ್ತಾರೆ. ಅದರೊಂದಿಗೆ ಕೊಂಚ ಸ್ವಾರ್ಥ ಮತ್ತು ಅಹಂಕಾರವೂ ಅವರಲ್ಲಿರುತ್ತದೆ. ಹಾಗಾಗಿ ಎದುರಿನವರ ಮಾತು ಅವರಿಗೆ ತೃಣಕ್ಕೆ ಸಮ ಎನ್ನಿಸುತ್ತದೆ. ಇದರಿಂದಲೇ ಅವರು ಜೀವನದಲ್ಲಿ ಕಷ್ಟ ಅನುಭವಿಸುತ್ತಾರೆ. ಆಪ್ತರನ್ನು ದೂರ ಮಾಡಿಕೊಳ್ಳುತ್ತಾರೆ.

ಧನು ರಾಶಿ: ಉತ್ಸಾಹಭರಿತವಾದ ಜೀವನ ಇವರದ್ದಾಗಿರುವುದರಿಂದ, ಜೀವನೋತ್ಸಾಹದಲ್ಲಿ ಮುಳುಗಿ, ಕೆಲವೊಮ್ಮೆ ತಮ್ಮವರನ್ನೇ ನಿರ್ಲಕ್ಷಿಸುತ್ತಾರೆ. ಇವರು ಉತ್ತಮ ಸ್ವಭಾವದವರಾಗಿದ್ದರೂ ಕೂಡ, ಇವರ ಅತೀಯಾದ ಜೀವನೋತ್ಸಾಹವೇ, ಇವರು ತಮ್ಮ ಆಪ್ತರನ್ನು ನಿರ್ಲಕ್ಷಿಸುವುದಕ್ಕೆ ಕಾರಣವಾಗುತ್ತದೆ. ಇವರು ಉದ್ದೇಶಪೂರ್ವಕವಾಗಿ ಯಾರನ್ನೂ ನಿರ್ಲಕ್ಷಿಸುವವರು ಅಲ್ಲ. ಆದರೆ, ತಮ್ಮವರೇ ಅಲಾ ಎಂಬ ಸಲುಗೆಯಿಂದ ಮಾಡುವ ನಿರ್ಲಕ್ಷದಿಂದಲೇ, ಇವರ ನೆಮ್ಮದಿ ಹಾಳಾಗುತ್ತದೆ.

Horoscope: ಹೆಚ್ಚು ಆತ್ಮವಿಶ್ವಾಸವಿಲ್ಲದ ರಾಶಿಯವರು ಇವರು

ಪ್ರತಿದಿನ ಸ್ನಾನ ಮಾಡಲೇಬೇಕು ಎಂದು ಹಿಂದೂಗಳಲ್ಲಿ ನಿಯಮವಿರಲು ಕಾರಣವೇನು..?

ಶಿವನಿಗೆ ಏಕೆ ಮುಕ್ಕಣ್ಣನೆಂದು ಕರೆಯುತ್ತಾರೆ ಗೊತ್ತಾ..? ಇದರ ಹಿಂದಿರುವ ರಹಸ್ಯವೇನು..?

- Advertisement -

Latest Posts

Don't Miss