Movie News: ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ರಿಯಾಲಿಟಿ ಶೋನಲ್ಲಿ ಕೆಲವು ಸ್ಪರ್ಧಿಗಳು ಸಖತ್ ಸುದ್ದಿ ಆಗುತ್ತಿದ್ದಾರೆ. ಆಟದ ಕಾರಣಕ್ಕೆ ಸುದ್ದಿಯಾದರೆ ಪರವಾಗಿಲ್ಲ. ಆದರೆ ಹೊರ ಜಗತ್ತಿನ ವಿಚಾರಕ್ಕೆ ಕಿರಿಕ್ ಮಾಡಿಕೊಂಡು ಸುದ್ದಿಯಾದರೆ ಸಂಕಷ್ಟ ಎದುರಾಗುತ್ತದೆ. ಸದ್ಯ ವರ್ತೂರು ಸಂತೋಷ್ ಮತ್ತು ತನಿಷಾ ಕುಪ್ಪಂಡ ಅವರು ಈ ರೀತಿ ಸುದ್ದಿ ಆಗಿದ್ದಾರೆ. ಕಾಕತಾಳೀಯ ಏನಂದರೆ, ಇವರಿಬ್ಬರು ಬಿಗ್ ಬಾಸ್ ಮನೆಯೊಳಗೆ ಜೋಡಿಯಾಗಿದ್ದಾರೆ. ದೊಡ್ಮನೆಯ ಹೊರಗೆ ಇವರ ಹೆಸರುಗಳು ವಿವಾದಕ್ಕೆ ಸಿಲುಕಿವೆ. ಜಾತಿ ನಿಂದನೆ ಮಾಡಿದ ಆರೋಪದಲ್ಲಿ ತನಿಷಾ ಕುಪ್ಪಂಡ ಅವರ ಮೇಲೆ ದೂರು ದಾಖಲಾಗಿದೆ. ಹುಲಿ ಉಗುರು ಹೊಂದಿದ್ದ ಆರೋಪದಲ್ಲಿ ವರ್ತೂರು ಸಂತೋಷ್ ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕೆಲವರ ನಡುವೆ ಬಾಂಧವ್ಯ ಬೆಳೆಯುತ್ತದೆ. ಈ ಬಾರಿ ವರ್ತೂರು ಸಂತೋಷ್ ಮತ್ತು ತನಿಷಾ ಕುಪ್ಪಂಡ ನಡುವೆ ಅಂತಹ ಒಂದು ಸ್ನೇಹ ಬೆಳೆದಿದೆ. ಕಾಕತಾಳೀಯ ಎಂದರೆ ಇವರಿಬ್ಬರು ವಿವಾದ ಮಾಡಿಕೊಂಡಿದ್ದಾರೆ. ಇಬ್ಬರಿಗೂ ಕಾನೂನಿನ ಸಂಕಷ್ಟ ಎದುರಾಗಿದೆ. ವರ್ತೂರು ಸಂತೋಷ್ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿ ಬಿಗ್ ಬಾಸ್ ಮನೆಗೆ ಮರುಪ್ರವೇಶ ಪಡೆದಿದ್ದರೆ, ತನಿಷಾ ಕುಪ್ಪಂಡ ಅವರು ಅರೆಸ್ಟ್ ಆಗುವ ಸಾಧ್ಯತೆ ಇದೆ. ಯಾವ ಕ್ಷಣದಲ್ಲಾದರೂ ಇವರಿಬ್ಬರು ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕಾಗಬಹುದು.
ಒಮ್ಮೆ ಜೈಲಿಗೆ ಹೋಗಿ ಮತ್ತೊಮ್ಮೆ ಬಿಗ್ ಬಾಸ್ ಮನೆ ಪ್ರವೇಶಿಸಿದ ಬಳಿಕ ವರ್ತೂರು ಸಂತೋಷ್ ಅವರು ಡಲ್ ಆಗಿದ್ದರು. ಆಟವನ್ನು ಅರ್ಧಕ್ಕೆ ನಿಲ್ಲಿಸಲು ಅವರು ತೀರ್ಮಾನಿಸಿದ್ದರು. ಆದರೆ ನಿರೂಪಕ ಕಿಚ್ಚ ಸುದೀಪ್, ಅತಿಥಿಯಾಗಿ ಬಂದಿದ್ದ ಸುಷ್ಮಾ ರಾವ್ ಹಾಗು ಬಿಗ್ ಬಾಸ್ ಮನೆಯೊಳಗಿನ ಸ್ಪರ್ಧಿಗಳು ವರ್ತೂರು ಸಂತೋಷ್ ಅವರ ಮನ ಒಲಿಸಲು ಪ್ರಯತ್ನಿಸಿದರು. ಅಂತಿಮವಾಗಿ ತಾಯಿಯೇ ಬಂದು ಧೈರ್ಯ ತುಂಬಿದ ಬಳಿಕ ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಆಟದಲ್ಲಿ ಮುಂದುವರಿಯಲು ನಿರ್ಧರಿಸಿದರು. ತನಿಶಾ ಮತ್ತು ವರ್ತೂರು ಸಂತೋಷ್ ನಡುವೆ ದಿನದಿಂದ ದಿನಕ್ಕೆ ಆಪ್ತತೆ ಹೆಚ್ಚುತ್ತಿರುವುದನ್ನು ಎಲ್ಲರೂ ಗಮನಿಸುತ್ತಿದ್ದಾರೆ.
ಇದು 10ನೇ ಸೀಸನ್ ಆದ್ದರಿಂದ ಈ ಬಾರಿ ‘ಕನ್ನಡ ಬಿಗ್ ಬಾಸ್’ ಬಗ್ಗೆ ವೀಕ್ಷಕರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ನಿರೀಕ್ಷೆಗೂ ಮೀರಿ ಟಿಆರ್ಪಿ ಸಿಗುತ್ತಿದೆ. ಇದರಿಂದ ‘ಕಲರ್ಸ್ ವಾಹಿನಿ’ ಕೂಡ ಖುಷಿಯಾಗಿದೆ. ಜಿಯೋ ಸಿನಿಮಾದಲ್ಲಿ ದಿನದ 24 ಗಂಟೆಯೂ ಲೈವ್ ನೋಡುವ ಅವಕಾಶ ಇದೆ. ವಿನಯ್ ಗೌಡ, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್ ಮುಂತಾದವರು ಸ್ಟ್ರಾಂಗ್ ಸ್ಪರ್ಧಿಗಳು ಎನಿಸಿಕೊಂಡಿದ್ದಾರೆ. 6ನೇ ವಾರದಲ್ಲಿ ಹಣಾಹಣಿ ಮುಂದುವರಿದಿದೆ.
ಪ್ರಧಾನಿ ಮೋದಿಯವರೇ, ನಿಮಗೆ ನಾಚಿಕೆ ಆಗತ್ತೋ ಇಲ್ಲವೋ?: ಸಿಎಂ ಸಿದ್ದರಾಮಯ್ಯ
‘ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಅವರು ರಾಜೀನಾಮೆ ಕೊಡಲಿ’
ಸಾಕು ನಾಯಿ ಕಚ್ಚಿದ ಪ್ರಕರಣ: 15 ನಿಮಿಷ ವಿಚಾರಣೆಗೆ ಹಾಜರಾದ ನಟ ದರ್ಶನ್