Cricket News: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನ್‌ಬಾಕ್ಸಿಂಗ್ ಆರ್‌ಸಿಬಿ ಕಾರ್ಯಕ್ರಮ ನಡೆಯುತ್ತಿದ್ದು, ಎಲ್ಲ ಆರ್‌ಸಿಬಿ ಆಟಗಾರರು ಹೊಸ ಜರ್ಸಿಯಲ್ಲಿ ಮಿಂಚಿದ್ದಾರೆ. ಕೆಂಪು, ನೀಲಿ ಬಣ್ಣದ ಜೆರ್ಸಿಯಲ್ಲಿ ಚಿನ್ನದ ಬಣ್ಣದ ಸಿಂಹವಿದೆ.
ಇಷ್ಟೇ ಅಲ್ಲದೇ, ಆರ್‌ಸಿಬಿಯ ಹೊಸ ಲೋಗೋ ಬಿಡುಗಡೆಯಾಗಿದ್ದು, ರಾಯಲ್ ಚಾಲೆಂಜರ್ಸ್ ಬ್ಯಾಂಗ್ಲೋರ್ ಈಗ ರಾಯಲ್ ಚಾಾಲೆಂಜರ್ಸ್ ಬೆಂಗಳೂರು ಆಗಿದೆ. ಇದನ್ನೇ ಸ್ಯಾಂಡಲ್‌ವುಡ್ ಸ್ಟಾರ್ಸ್ ಅರ್ಥಾ ಆಯ್ತಾ ಅಂತಾ ಕೇಳಿದ್ದು..
ಇನ್ನು ಈ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, ಇದು ಆರ್‌ಸಿಬಿ ಹೊಸ ಅಧ್ಯಾಯವೆಂದು ಕನ್ನಡದಲ್ಲೇ ಹೇಳಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಕನ್ನಡಿಗರು ಪದೇ ಪದೇ ಕೊಹ್ಲಿ ಕನ್ನಡ ಕೇಳಿ, ಕಿವಿ ತಂಪು ಮಾಡಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಈ ಸಲ ಕಪ್ ನಮ್ದೇ ಅಂತಾ ಹೇಳ್ತಿದ್ದ ವಿರಾಟ್, ಈಗ ಇನ್ನೂ ಸ್ವಲ್ಪ ಮುಂದುವರಿದು, ಇದು ಆರ್‌ಸಿಬಿಯ ಹೊಸ ಅಧ್ಯಾಯವೆಂದು ಹೇಳಿದ್ದಾರೆ. ಇನ್ನು ಹೆಣ್ಣು ಮಕ್ಕಳು ಈ ಸಲ ಕಪ್ ನಮ್ದು ಅನ್ನುವ ಸೌಭಾಗ್ಯ ಕನ್ನಡಿಗರಿಗೆ ತಂದು ಕೊಟ್ಟಂತೆ, ಪುರುಷರ ಆರ್‌ಸಿಬಿ ಟೀಂ ಕೂಡ ಈ ಅವಕಾಶ ಮತ್ತೊಮ್ಮೆ ಕೊಡಿಸಲಿ ಅನ್ನೋದು ಆರ್‌ಸಿಬಿ ಫ್ಯಾನ್ಸ್ ಆಶಯ..
ಇದು #RCB ಯ ಹೊಸ ಅಧ್ಯಾಯ
This Is New Chapter Of RCB pic.twitter.com/s776dW8xDi— PRASHANTH CB (@ThePrashanthCB) March 19, 2024
ಟ್ರೋಫಿ ಗೆದ್ದ ಮಾತ್ರಕ್ಕೆ ನಾನು ವಿರಾಟ್ ಅವರಿಗೆ ಸಮನಲ್ಲ: ಸ್ಮೃತಿ ಮಂದನ
ಹೊಸ ಹೇರ್ ಸ್ಟೈಲ್, ಹೊಸ ಜರ್ಸಿ, ಎಕ್ಸ್‌ಪೆನ್ಸಿವ್ ಸನ್‌ಗ್ಲಾಸ್ ಧರಿಸಿ ಪ್ರ್ಯಾಕ್ಟೀಸ್‌ಗೆ ಬಂದಿಳಿದ ವಿರಾಟ್
ಬ್ಯಾಂಕ್ ಹಾಲಿಡೇ ಇದ್ದಾಗಷ್ಟೇ ಟ್ವೀಟ್ ಮಾಡ್ತಾರಪ್ಪಾ: RCBಗೆ ವಿಶ್ ಮಾಡಲು ಹೋಗಿ ಟ್ರೋಲ್ ಆದ ಮಲ್ಯ