National Political News: ನಿನ್ನೆಯಷ್ಟೇ ಬಾಂಗ್ಲಾದೇಶದ ಸಂಸದ ಅನಾರೋಗ್ಯ ನಿಮಿತ್ತವಾಗಿ ಚಿಕಿತ್ಸೆ ಪಡೆಯಲು ಪಶ್ಚಿಮ ಬಂಗಾಳಕ್ಕೆ ಬಂದಿದ್ದರು. ಆದರೆ ಅನ್ವರುಲ್ ಕೆಲ ದಿನಗಳಲ್ಲಿ ನಾಪತ್ತೆಯಾಗಿ, ಮತ್ತೆ ಶವವಾಗಿ ಪತ್ತೆಯಾಗಿದ್ದರು ಎಂಬ ಸುದ್ದಿಯ ಬಗ್ಗೆ ಹೇಳಿದ್ದವು. ಪೊಲೀಸರ ವಿಚಾರಣೆ ಬಳಿಕ ತಿಳಿದು ಬಂದ ಸುದ್ದಿಯೆಂದರೆ, ಸಂಸದ ಅನ್ವರುಲ್ ಸಾವಿಗೂ ಮುನ್ನ ಅವರಿಗೆ ಹನಿಟ್ರ್ಯಾಪ್ ಮಾಡಲಾಗಿತ್ತು.
ಹತ್ಯೆ ಮಾಡಿರುವ ದುರುಳರು, ತಾವು ಮಾಡಿರುವ ಹತ್ಯೆ ಬಗ್ಗೆ ಯಾರಿಗೂ ತಿಳಿಯಬಾರದು ಎಂದು, ಸಂಸದರ ಚರ್ಮ, ಮಾಂಸ ಮತ್ತು ಮೂಳೆಯನ್ನು ಬೇರೆ ಬೇರೆ ಮಾಡಿ, ಶವವನ್ನು ಎಸೆದಿದ್ದಾರೆ. ಆದರೆ ಹತ್ಯೆಗೂ ಮುನ್ನ ಸಂಸದರನ್ನು ಹನಿಟ್ರ್ಯಾಪ್ ಮಾಡಲಾಗಿದ್ದು, ಓರ್ವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿಲಾಂತಿ ರೆಹಮಾನ್ ಹನಿಟ್ರ್ಯಾಪ್ ಆರೋಪದಡಿ ಅರೆಸ್ಟ್ ಆಗಿರುವ ಮಹಿಳೆಯಾಗಿದ್ದು, ಕೊಲೆಯಾದ ಬಳಿಕ, ಪ್ರಕರಣದ ಪ್ರಮುಖ ಆರೋಪಿಯ ಜೊತೆ ತಲೆ ಮರೆಸಿಕೊಂಡಿದ್ದಳು. ಬಳಿಕ ಆಕೆ ಢಾಕಾಗೆ ಬಂದ ನಂತರ ಆಕೆಯನ್ನು ಅರೆಸ್ಟ್ ಮಾಡಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅನ್ವರುಲ್ ಅವರ ಸ್ನೇಹಿತರಾಗಿದ್ದ ಅಖ್ತರುಜ್ಜಮಾಲ್ ಎಂಬುವರೇ, ಹನಿಟ್ರ್ಯಾಪ್ ಮಾಡಿಸಿ, ಕೊಲೆ ಮಾಡಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಅಂಜಲಿ ಕೊಲೆ ಪ್ರಕರಣ , ಆರೋಪಿಯೊಂದಿಗೆ ಬಂದು ಸ್ಥಳ ಮಹಜರು ಮಾಡಿದ ಸಿಐಡಿ
ಧಾರವಾಡ ಕರ್ನಾಟಕ ವಿವಿಯಲ್ಲಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿ ಪರಾರಿಯಾದ ಕಿಡಿಗೇಡಿ
ಕಾನೂನು ರೀತಿಯಲ್ಲಿ ಅಂತರ್ ಧರ್ಮದ ವಿವಾಹ ನೋಂದಣಿಗೆ ಆಗ್ರಹಿಸಿ ಮನವಿ ಸಲ್ಲಿಕೆ