Wednesday, February 5, 2025

Latest Posts

ಈ ಗುಣಗಳನ್ನು ಹೊಂದಿರುವವರು ನಿಜವಾಗಿ ವೀರರು..!

- Advertisement -

ಈ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಖಂಡಿತವಾಗಿಯು ವ್ಯಕ್ತಿ ಜೀವನದಲ್ಲಿ ಯಶಸ್ವಿ ಪುರುಷನಾಗುತ್ತಾನೆ ಹಾಗಾಗಿ ಶೂರ ವ್ಯಕ್ತಿಯಲ್ಲಿರುವ ಗುಣಗಳು ಹಾಗೂ ಮೋಸ ಮಾಡುವ ಗುಣಗಳನ್ನು ಕೂಡ ತಿಳಿಸಿದ್ದಾರೆ. ವೀರ ವ್ಯಕ್ತಿಗಳ ಗುಣಲಕ್ಷಣಗಳ ಬಗ್ಗೆ ಕೆಲವೊಂದು ನೀತಿಗಳನ್ನು ಹೇಳಿದ್ದಾರೆ ಇವರನ್ನು ನಿಜವಾದ ಶೂರರು ಎಂದು ಹೇಳಲಾಗುತ್ತದೆ, ಆ ಗುಣ ಲಕ್ಷಣಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ. ವಿದುರರ ನೀತಿಯ ಪ್ರಕಾರ ಇವರ ಪರಾಕ್ರಮಗಳಲ್ಲಿ ಕೆಲವೊಂದು ಲಕ್ಷಣಗಳು ಇರಬೇಕು ಎಂದು ಹೇಳುತ್ತಾರೆ. ಗೆಳೆಯರೇ ಮಹಾತ್ಮ ವಿದುರರು ತಮ್ಮ ಶ್ಲೋಕದಲ್ಲಿ ಈ ರೀತಿಯಾಗಿ ಹೇಳಿದ್ದಾರೆ. ಇದರಲ್ಲಿ ಪುರುಷರ 4 ಲಕ್ಷಣದ ಬಗ್ಗೆ ತಿಳಿಸಿದ್ದಾರೆ, ದುರ್ಬಲ ವ್ಯಕ್ತಿಯನ್ನು ಅವಮಾನಿಸಬಾರದು ಹಾಗೂ ಇನ್ನೊಬ್ಬರ ದೌರ್ಬಲ್ಯವನ್ನು ನೋಡಿ ಅವರನ್ನು ಅಪಹಾಸ್ಯ ಮಾಡಬಾರದು, ಅವರ ಬಗ್ಗೆ ತಪ್ಪು ತಿಳಿಯಬಾರದು, ಹಾಗೂ ಅಸಹಾಯಕ ಮತ್ತು ದೌರ್ಬಲ್ಯ ಮಹಿಳೆಯರ ಮೇಲೆ ಕೈ ಮಾಡಬಾರದು, ಅವರಿಗೆ ಹಿಂಸೆ ಕೊಡಬಾರದು, ಒಂದು ವೇಳೆ ಕೊಟ್ಟರೆ ಇಂತಹ ವ್ಯಕ್ತಿಗಳು ಎಂದಿಗೂ ವೀರಪುರುಷರು ಆಗುವುದಿಲ್ಲ, ಅವರನ್ನು ಸಹಾಯಕರು, ಹುಚ್ಚರು ಎಂದು ಹೇಳಲಾಗುತ್ತದೆ. ಯಾರು ದುರ್ಬಲರಾಗಿರುವ ಜನರಿಗೆ ಸಹಾಯ ಮಾಡುತ್ತಾರೆ ಅಂತವರೇ ನಿಜವಾದ ವೀರರು ಶೂರರು ಎಂದು ಕರೆಸಿಕೊಳ್ಳಲಾಗುತ್ತದೆ.

ಗೆಳೆಯರೆ ಇನ್ನೂ ಕೆಲವು ಪುರುಷರು ಹೆಂಡತಿಯ ಮೇಲೆ ದೌರ್ಜನ್ಯ ಮಾಡಿ ಪುರುಷರು ಎಂದು ಹೇಳಿಕೊಳ್ಳುತ್ತಾರೆ. ಇನ್ನು ಕೆಲವರು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಿ ತಮ್ಮನ್ನು ತಾವು ಹೆಚ್ಚಿನ ಶಕ್ತಿ ಶಾಲಿಗಳು ಎಂದು ತೋರಿಸಿಕೊಳ್ಳಲು ಮುಂದಾಗುತ್ತಾರೆ. ಅವರಿಗೆ ಸಮಾಜದಲ್ಲಿ ಮೂರ್ಖರು ಎಂದು ಹೇಳಲಾಗುತ್ತದೆ. ಇನ್ನು ಗೆಳೆಯರೇ ಯಾರು ತಮಗೆ ಸರಿಸಮಾನವಾದ ಶತ್ರುಗಳನ್ನು ಎದುರಿಸುತ್ತಾರೆ ಅಂಥವರು ನಿಜವಾದ ವೀರರು ಹಾಗೂ ಯಾರು ದುರ್ಬಲರಿಗೆ ಕ್ಷಮೆಯನ್ನು ನೀಡುತ್ತಾರೆ ಅಂತವರು ನಿಜವಾದ ವೀರರು. ಎರಡನೇದಾಗಿ ಯಾವ ವ್ಯಕ್ತಿ ಬಲದಿಂದ ಅಲ್ಲದೇ ಶತ್ರುಗಳು ನಾಶಮಾಡಲು ಬುದ್ಧಿಶಕ್ತಿಯನ್ನು ಉಪಯೋಗ ಮಾಡಿಕೊಳ್ಳುತ್ತಾರೆ ಅಂಥವರು ನಿಜವಾದ ವೀರರು ಎಂದು ಹೇಳಲಾಗುತ್ತದೆ. ಮನುಷ್ಯ ಎಂದಿಗೂ ತನ್ನ ಶಕ್ತಿಯ ಮೇಲೆ ಅಹಂಕಾರವನ್ನು ಇಟ್ಟುಕೊಂಡು ಶತ್ರುಗಳ ಮೇಲೆ ದಾಳಿ ಮಾಡಬಾರದು ಕೆಲವೊಮ್ಮೆ ದುರ್ಬಲ ಶತ್ರುಗಳು ಕೂಡ ತಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸಿಕೊಂಡು ಬಹುದೊಡ್ಡದಾದ ಶತ್ರುಗಳನ್ನು ಹೊಡೆದು ಓಡಿಸುತ್ತಾರೆ. ಇನ್ನೂ ಮೂರನೇದಾಗಿ ತಮಗಿಂತ ಶಕ್ತಿಶಾಲಿಯಾದ ಶತ್ರುವನ್ನು ಎದುರಿಸುವವರು ವೀರಪುರುಷರು ಎಂದು ಹೇಳಲಾಗುತ್ತದೆ ನಿಜವಾದ ಶೂರರು ತಮ್ಮ ವ್ಯಕ್ತಿಯೊಂದಿಗೆ ಶತ್ರುಗಳ ಜೊತೆಗೆ ಸ್ನೇಹವನ್ನು ಬೆಳೆಸುತ್ತಾರೆ ಹಾಗೂ ಮೂರ್ಖ ವ್ಯಕ್ತಿಗೆ ಕುಟುಂಬದ ಬಗ್ಗೆ ಎಂದಿಗೂ ಚಿಂತೆ ಮಾಡುವುದಿಲ್ಲ, ತಮಗಿಂತ ಶಕ್ತಿಶಾಲಿಯಾದ ಶತ್ರುಗಳ ಜೊತೆ ಯುದ್ಧ ಮಾಡಲು ಮುಂದಾಗುತ್ತಾರೆ ಇದರಿಂದಾಗಿ ಕುಟುಂಬಗಳು ಕಷ್ಟದಲ್ಲಿ ಸಿಲುಕಿಕೊಳ್ಳುತ್ತದೆ. ಇನ್ನು ನಾಲ್ಕನೆಯದಾಗಿ ಸರಿಯಾದ ಸಮಯದಲ್ಲಿ ಶೌರ್ಯವನ್ನು ತೋರಿಸುವುದು. ಗೆಳೆಯರೇ ವಿನಾಕಾರಣ ಸಮಯ ವ್ಯರ್ಥ ಮಾಡದೆ ಸರಿಯಾದ ಸಮಯ ಬಂದಾಗ ಬುದ್ಧಿವಂತಿಕೆ ಶಕ್ತಿಯ ಪ್ರದರ್ಶನವನ್ನು ಮಾಡುತ್ತಾರೆ. ದುರ್ಬಲ ವ್ಯಕ್ತಿಯನ್ನು ಭಯ ಪಡಿಸಲು ಜನರಿಂದ ಪ್ರಚಾರ ಪಡೆಯಲು ಶಕ್ತಿಯನ್ನು ಪ್ರದರ್ಶಿಸುವುದಿಲ್ಲ. ಗೆಳೆಯರೇ ಈ ರೀತಿ ಕೆಲವು ಲಕ್ಷಣಗಳನ್ನು ಹೊಂದಿರುವ ಪುರುಷರನ್ನು ವೀರರು ಶೂರರು ಎಂದು ಹೇಳಲಾಗುತ್ತದೆ. 

- Advertisement -

Latest Posts

Don't Miss