Tuesday, January 14, 2025

Latest Posts

ಮೃದುವಾದ, ಗುಲಾಬಿ ತುಟಿ ನಿಮ್ಮದಾಗಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ…

- Advertisement -

ನಮ್ಮ ಮುಖದ ಸೌಂದರ್ಯ ಇಮ್ಮಡಿಯಾಗೋದೇ ನಮ್ಮ ತುಟಿ ಚಂದಗಾಣಿಸಿದಾಗ. ತುಟಿ ಚಂದಗಾಣಬೇಕಂದ್ರೆ ನಾವು ಪ್ರತಿ ದಿನ ಅದರ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು. ಇಂದು ನಾವು ತುಟಿ ಗುಲಾಬಿ ಬಣ್ಣದಿಂದ ಕೂಡಿ, ಮೃದುವಾಗಿದ್ದು, ಚಂದ ಕಾಣಿಸಬೇಕಂದ್ರೆ, ಏನು ಮಾಡಬೇಕು ಅಂತಾ ಹೇಳಲಿದ್ದೇವೆ.

ನಿಮಗೆ ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಿರಿ. ಇದರಿಂದ ನಿಮ್ಮ ದೇಹದಲ್ಲಿರುವ ಕಲ್ಮಶ ಹೊರಹೋಗಿ, ನಿಮ್ಮ ಮುಖ ಕಾಂತಿಯುತವಾಗುವುದಲ್ಲದೇ, ತುಟಿ ಕೂಡಾ ಆರೋಗ್ಯಕರವಾಗಿರುತ್ತದೆ. ನಿಮ್ಮ ದೇಹದಲ್ಲಿ ನೀರನ ಪ್ರಮಾಣ ಕಡಿಮೆಯಾದಂತೆ ನಿಮ್ಮ ತುಟಿ ಒಣಗುತ್ತದೆ. ಹಾಗಾಗಿ ನಿಮ್ಮ ತುಟಿ ಒಣಗಬಾರದೆಂದರೆ, ನೀವು ಚೆನ್ನಾಗಿ ನೀರು ಕುಡಿಯಬೇಕು. ಆದ್ರೆ ಸಂಜೆ ಆರು 6ಗಂಟೆಗೂ ಮುನ್ನ ನೀವು ಹೆಚ್ಚು ನೀರು ಕುಡಿಯಿರಿ, ನಂತರ ಕಡಿಮೆ ನೀರರು ಕುಡಿಯಬೇಕು. ಪ್ರತಿರಾತ್ರಿ ಮಗುವಾಗ, ತೆಂಗಿನ ಎಣ್ಣೆ ಅಥವಾ ಬಾದಾಮ್‌ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನ ನಿಮ್ಮ ತುಟಿಗೆ ಹಚ್ಚಿಕೊಂಡು, ಮೂರು ನಿಮಿಷಗಳ ಕಾಲ ಮಸಾಜ್ ಮಾಡಿ. ಇದರಿಂದ ತುಟಿ ಸಾಫ್ಟ್ ಆಗುತ್ತದೆ.

ಪ್ರತಿದಿನ ತುಟಿಗೆ ತುಪ್ಪ, ಬೆಣ್ಣೆ ಹಚ್ಚಿಕೊಳ್ಳಿ ವಿನಃ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಪ್ರಾಡಕ್ಟ್ ಬಳಸಬೇಡಿ. ಬೀಟ್‌ರೂಟ್‌ ರಸದಿಂದ ಲಿಪ್‌ ಬಾಮ್ ತಯಾರಿಸಿ, ಹಚ್ಚುವುದರಿಂದ ತುಟಿಗೆ ನ್ಯಾಚುರಲ್ ಗುಲಾಬಿ ಬಣ್ಣಬರುತ್ತದೆ. ಅಥವಾ ಬೀಟ್‌ರೂಟ್‌ ತುಂಡಿನಿಂದ ಕೆಲ ಹೊತ್ತು ತುಟಿಗೆ ಮಸಾಜ್ ಮಾಡಿಕೊಂಡರೂ ನಡೆಯುತ್ತದೆ.

ಇದೆಲ್ಲದರ ಜೊತೆಗೆ ನೀವು ಇನ್ನೊಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು. ಅದೇನಂದ್ರೆ, ಪ್ರತಿದಿನ ಲಿಪ್‌ಸ್ಟಿಕ್ ಹಚ್ಚಿಕೊಳ್ಳುವುದರಿಂದ ನಿಮ್ಮ ತುಟಿಯ ಸೌಂದರ್ಯ ಹೆಚ್ಚುವುದಿಲ್ಲ. ಬದಲಾಗಿ ಚರ್ಮ ತಮ್ಮ ಮೃದುತ್ವ ಮತ್ತು ನಿಜರೂಪ ಕಳೆದುಕೊಳ್ಳುತ್ತದೆ. ಹಾಗಾಗಿ ನೀವು ಆದಷ್ಟು ಲಿಪ್‌ಸ್ಟಿಕ್ ಬಳಸುವುದನ್ನ ನಿಲ್ಲಿಸಿ. ಅಲ್ಲದೇ, ಪದೇ ಪದೇ ನಿಮ್ಮ ನಾಲಿಗೆಯನ್ನು ತುಟಿಗೆ ತಾಗಿಸಬೇಡಿ. ಇದು ಕೆಲ ಸಮಯಕ್ಕೋಸ್ಕರ ನಿಮ್ಮ ತುಟಿಯನ್ನ ಸಾಫ್ಟ್ ಮಾಡಿದರೂ, ಕ್ರಮೇಣ ನಿಮ್ಮ ತುಟಿ ಕಪ್ಪಾಗಿಸುತ್ತದೆ. ಹಾಗಾಗಿ ಈ ಅಭ್ಯಾಸ ಮಾಡಬೇಡಿ.

- Advertisement -

Latest Posts

Don't Miss