Jammu Kashmir News: ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ, ಮನೆಯೊಂದು ಕುಸಿದು ಬಿದ್ದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದ ಬಾಲಕಿಯರು 2 ಮತ್ತು 5 ವರ್ಷದೊಳಗಿನ ಮಕ್ಕಳಾಗಿದ್ದಾರೆ. ಫಲ್ಲಾ ಅಖ್ತರ್(30), ನಸೀಮಾ(5), ಸಫೀನಾ ಕೌಸರ್(3), ಸಮ್ರೀನ್ ಕೌಸರ್(2) ಸಾವನ್ನಪ್ಪಿದವರಾಗಿದ್ದಾರೆ. ಇದೇ ಮನೆಯ ಸದಸ್ಯರಾದ ಕಾಲು(60), ಬಾನೋ ಬೇಗಂ(60) ಎಂಬುವವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಮೃತ ದೇಹವನ್ನು ಬಿದ್ದ ಗುಡಿಸಿಲಿನ ಅವಶೇಷಗಳಿಂದ ಹೊರತೆಗೆಯಲಾಗಿದೆ.
ಜಮ್ಮು- ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ, ಕಟ್ಟಡಗಳಿಗೆ ಹಾನಿಯಾಗಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸಣ್ಣ ಸಣ್ಣ ಗುಡಿಸಲು ಕಟ್ಟಿಕೊಂಡಿದ್ದವರ ಪಾಡು, ಹೇಳತೀರದಾಗಿದೆ.
ಕುಡಿಯುವ ನೀರಿನ ದಂಧೆ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ರಾಜ್ಯ ಸರ್ಕಾರ..
ಫುಡ್ ವ್ಲಾಗರ್ಸ್, ಹೊಟೇಲ್ ಉದ್ಯಮಿಗಳು ಸೇರಿ ನಾವೆಲ್ಲ ರಾಮೇಶ್ವರಂ ಕೆಫೆಯೊಂದಿಗಿದ್ದೇವೆ: ಸಿಹಿ ಕಹಿ ಚಂದ್ರು

