Monday, July 22, 2024

Latest Posts

ನಗ್ನವಾಗಿ ಡ್ಯಾನ್ಸ್ ಮಾಡಲು ಮಹಿಳೆಯರಿಗೆ ಒತ್ತಾಯ- ಇಬ್ಬರ ಬಂಧನ

- Advertisement -

ಗುವಾಹಾಟಿ: ಖಾಸಗಿ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಲು ಬಂದಿದ್ದ ಬುಡಕಟ್ಟು ಮಹಿಳೆಯರಿಗೆ ನಗ್ನವಾಗಿ ನೃತ್ಯ ಮಾಡುವಂತೆ ರೌಡಿ ಗುಂಪೊಂದು ಒತ್ತಾಯಿಸಿದ ಅಮಾನವೀಯ ಘಟನೆ ನಡೆದಿದೆ.

ನಿನ್ನೆ ರಾತ್ರಿ ಅಸ್ಸಾಂ ನ ಗುವಾಹಾಟಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನಕ್ಕಾಗಿ ಬುಡಕಟ್ಟು ಮಹಿಳೆಯರು ಬಂದಿದ್ದರು ಆದ್ರೆ ಅಲ್ಲಿ ನೆರೆದಿದ್ದ ರೌಡಿಗಳ ಗುಂಪು ಮಹಿಳೆಯರಿಗೆ ತಮ್ಮ ವಸ್ತ್ರಗಳನ್ನು ಕಳಚಿ ಡ್ಯಾನ್ಸ್ ಮಾಡೋದಕ್ಕೆ ಒತ್ತಾಯಿಸಿದೆ. ಸುಮಾರು 500ಕ್ಕೂ ಹೆಚ್ಚು ಮಂದಿ ಪುರುಷರಿಂದ ಈ ಒತ್ತಾಯದಿಂದ ಮಹಿಳೆಯರು ಬೆಚ್ಚಿಬಿದ್ದರು. ಆದ್ರೆ ಕೊನೆಗೆ ಹೇಗೋ ಉಪಾಯದಿಂದ ಅಲ್ಲಿಂದ ಪಾರಾಗಿದ್ದಾರೆ. ಅಲ್ಲದೆ ಈ ವೇಳೆ ಅವರ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ.

ಇನ್ನು ಈ ಕಾರ್ಯಕ್ರಮ ಆಯೋಜಕರು ಕಾರ್ಯಕ್ರಮದಲ್ಲಿ ನಗ್ನವಾಗಿ ಡ್ಯಾನ್ಸ್ ಮಾಡಿಸಲಾಗುತ್ತೆ ಎಂದು ಮಾಹಿತಿ ನೀಡಿ ಹೆಚ್ಚಿನ ಬೆಲೆಗೆ ಟಿಕೆಟ್ ಗಳನ್ನು ಮಾರಾಟ ಮಾಡಿದ್ದರು ಅಂತ ತಿಳಿದುಬಂದಿದೆ. ಈ ಕುರಿತು ಬುಡಕಟ್ಟು ಮಹಿಳಾ ತಂಡ ಪ್ರಕರಣ ದಾಖಲಿಸಿದ್ದು ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ ಹಲವರಿಗಾಗಿ ಶೋಧ ನಡೆದಿದೆ.

ನಿಜಕ್ಕೂ ಇವರು ಅಮಿತ್ ಶಾ ಜೊತೆ ಕೈಜೋಡಿಸ್ತಾರಾ…?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=uGUT0AUa7V8
- Advertisement -

Latest Posts

Don't Miss