- Advertisement -
polictical story :
ನಾಗಾಲ್ಯಾಂಡ್, ತ್ರಿಪುರಾ ಮತ್ತು ಮೇಘಾಲಯ ವಿಧಾನಸಭಾ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು ತ್ರಿಪುರಾದಲ್ಲಿ ಫೆಬ್ರುವರಿ 16ಕ್ಕೆ ಚುನಾವಣೆ ನಡೆಯಲಿದೆ. ಮೇಘಾಲಯ ಮತ್ತು ನಾಗಾಲ್ಯಾಂಡ್ನಲ್ಲಿ ಫೆ.27ಕ್ಕೆಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಹಿಂಸಾಚಾರ ಮುಕ್ತ ಚುನಾವಣೆಗೆ ಆಯೋಗ ಬದ್ಧವಾಗಿದೆ, ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಜಾಗವಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಪ್ರತಿಯೊಂದು ಚುನಾವಣೆಗೂ ತನ್ನದೇ ಆದ ಸವಾಲುಗಳಿರುತ್ತವೆ. ಕಷ್ಟಕರವಾದ ಭೂಪ್ರದೇಶಗಳ ಹೊರತಾಗಿಯೂ, ಈ 3 ರಾಜ್ಯಗಳು ಭಾಗವಹಿಸುವಿಕೆಯ ವಿಷಯದಲ್ಲಿ ದೇಶದ ಉಳಿದ ಭಾಗಗಳಿಗೆ ಮಾದರಿಯಾಗಿವೆ. ಚುನಾವಣಾ ಆಯೋಗವು ಮುಕ್ತ, ನ್ಯಾಯಸಮ್ಮತ, ಭಾಗವಹಿಸುವಿಕೆ, ಒಳಗೊಳ್ಳುವಿಕೆ, ಪ್ರಚೋದನೆ ಮುಕ್ತ ಮತ್ತು ಶಾಂತಿಯುತ ಚುನಾವಣೆ ನಡೆಸಲು ಬದ್ಧವಾಗಿದೆ.
- Advertisement -