Spiritual Story: ಮೊದಲ ಮತ್ತು ಎರಡನೇಯ ಭಾಗದಲ್ಲಿ ನಾವು ಶ್ರೀಕೃಷ್ಣನ ಜೀವನಕ್ಕೆ ಸಂಬಂಧಪಟ್ಟ 6 ಸತ್ಯಗಳನ್ನು ಹೇಳಿದ್ದೆವು. ಈ ಭಾಗದಲ್ಲಿ ಇನ್ನೂ 2 ಸತ್ಯದ ಬಗ್ಗೆ ತಿಳಿಯೋಣ ಬನ್ನಿ..
ಏಳನೇಯ ಸತ್ಯ. ಒಮ್ಮೆ ಶ್ರೀಕೃಷ್ಣ ಅನಾರೋಗ್ಯಕ್ಕೀಡಾಗಿದ್ದ. ಆಗ ಶ್ರೀಕೃಷ್ಣನ ಚಿಕಿತ್ಸೆಗೆ ಬಂದ ವೈದ್ಯರು, ಇವರನ್ನು ಹೆಚ್ಚು ಪ್ರೀತಿಸುವವರು, ತಮ್ಮ ಪಾದದ ಧೂಳನ್ನು ತಂದು ಇವರ ಹಣೆಗೆ ಹಚ್ಚಬೇಕು. ಆಗಲಷ್ಟೇ ಇವರು ಆರೋಗ್ಯವಂತರಾಗಲು ಸಾಧ್ಯ ಎಂದರು. ಶ್ರೀಕೃಷ್ಣನಿಗೆ 16 ಸಾವಿರ ಪತ್ನಿಯರಿದ್ದರೂ ಕೂಡ, ಅರಮನೆಯಲ್ಲಿ, ಶ್ರೀಕೃಷ್ಣನ ಇಷ್ಟದ 8 ಪತ್ನಿಯರಿದ್ದರು. ಆದರೆ ಆ 8 ಪತ್ನಿಯರು ತಮ್ಮ ಪತಿಗೆ ದೇವರ ಸ್ಥಾನ ಕೊಟ್ಟಿದ್ದೇವೆ. ನಮ್ಮ ಪಾದದ ಧೂಳನ್ನು ಅವರ ಹಣೆಗೆ ಹಚ್ಚಲು ನಮ್ಮ ಮನಸ್ಸು ಒಪ್ಪುತ್ತಿಲ್ಲ. ಬೇರೆ ಮದ್ದು ಇದ್ದರೆ ಹೇಳಿ ಎನ್ನುತ್ತಾರೆ.
ಆದರೆ ವೈದ್ಯರು, ಬೇರೆ ಯಾವ ಮದ್ದು ಕೂಡ ಶ್ರೀಕೃಷ್ಣನ್ ಆರೋಗ್ಯ ಸುಧಾರಿಸಲು ಸಹಕರಿಸುವುದಿಲ್ಲ. ಇದೊಂದೇ ಮದ್ದು ಎನ್ನುತ್ತಾರೆ. ಬಳಿಕ, ಗೋಪಿಕೆಯರಿಗೆ ಈ ವಿಚಾರ ತಿಳಿದಾಗ, ಅವರು ತಮ್ಮ ಪಾದದ ಧೂಳನ್ನು ಶ್ರೀಕೃಷ್ಣನಿಗೆ ಕಳುಹಿಸುತ್ತಾರೆ. ಆಗ ವೈದ್ಯರು ನಾವು ಶ್ರೀಕೃಷ್ಣನ ಅಷ್ಟ ಪತ್ನಿಯರಲ್ಲಿ ಅವರ ಪಾದದ ಧೂಳು ಕೊಡು ಎಂದಾಗ, ಅವರ್ಯಾರೂ ಇದಕ್ಕೆ ಒಪ್ಪಲಿಲ್ಲ. ಏಕೆಂದರೆ, ಪತ್ನಿಯ ಧೂಳು ಪತಿಯ ಹಣೆ ತಾಕಿದರೆ, ಪತ್ನಿಗೆ ನರಕ ಪ್ರಾಪ್ತಿಯಾಗುತ್ತದೆ ಎಂಬ ಭಯ ಅವರಿಗಿತ್ತು. ನಿಮಗೆ ಆ ಭಯವಿಲ್ಲವೇ ಎಂದು ಕೇಳುತ್ತಾರೆ. ಅದಕ್ಕೆ ಗೋಪಿಕೆಯರು ಹೇಳುತ್ತಾರೆ, ಶ್ರೀಕೃಷ್ಣನಿಗಾಗಿ ನಾವು ನರಕಕ್ಕೂ ಹೋಗಲು ಸಿದ್ಧ. ನಾವು ಶ್ರೀಕೃಷ್ಣನನ್ನು ಅಷ್ಟು ಪ್ರೀತಿಸುತ್ತೇವೆ ಎನ್ನುತ್ತಾರೆ.
ಎಂಟನೇಯ ಸತ್ಯ. ನೀವು ಹಿಂದಿಯ ಥ್ರೀ ಈಡಿಯಟ್ಸ್ ಸಿನಿಮಾ ನೋಡಿದ್ರೆ, ಅದರಲ್ಲಿ ಅಮೀರ್‌ಖಾನ್ ಹೆಸರು ನಿಮಗೆ ಗೊತ್ತಿರುತ್ತದೆ. ರಾಂಛೋಡ್ ದಾಸ್. ಈ ಹೆಸರಿಗೂ ಶ್ರೀಕೃಷ್ಣನಿಗೂ ಸಂಬಂಧವಿದೆ. ಏಕೆಂದರೆ, ರಾಂಛೋಡ್ ದಾಸ್ ಅನ್ನೋದು ಶ್ರೀಕೃಷ್ಣನ ಇನ್ನೊಂದು ಹೆಸರು. ರಾಂಛೋಡ್ ಅಂದರೆ, ರಣರಂಗವನ್ನು ಬಿಟ್ಟು ಓಡುವುದು ಎಂದರ್ಥ. ಶ್ರೀಕೃಷ್ಣ ಯುದ್ಧ ಭೂಮಿಯನ್ನು ಬಿಟ್ಟು ಓಡಿ ಹೋಗಿದ್ದ. ಏಕೆಂದರೆ, ಆ ಸಂದರ್ಭದಲ್ಲಿ ಯುದ್ಧ ಮಾಡುವುದು ಉಚಿತವಲ್ಲ ಎಂದು ಅವನಿಗೆ ಅನ್ನಿಸಿತ್ತು. ಜರಾಸಂಧ ಯುದ್ಧ ಭೂಮಿಗೆ ಬಂದ ಸಂದರ್ಭದಲ್ಲಿ, ನಾನು ಇವನೊಂದಿಗೆ ಯುದ್ಧ ಮಾಡಿದರೆ, ಮುಂದಿನ ನಿರ್ಣಯಕ್ಕೆ ತೊಂದರೆಯಾಗುತ್ತದೆ ಎಂದು ತಿಳಿದ ಶ್ರೀಕೃಷ್ಣ, ಯುದ್ಧ ಭೂಮಿ ಬಿಟ್ಟು ಓಡುತ್ತಾನೆ. ಹಾಗಾಗಿ ಅವನಿಗೆ ರಾಂಛೋಡ್ ದಾಸ್ ಎಂಬ ಹೆಸರು ಬಂತು.
ಒಂಭತ್ತನೇಯ ಸತ್ಯದ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ. ಒಂಭತ್ತನೇಯ ಭಾಗದ ಕಥೆ ಕುತೂಹಲಕಾರಿಯಾಗಿದೆ. ತಪ್ಪದೇ ಓದಿ.
ನಿಮ್ಮ ಪರ್ಸ್‌ನಲ್ಲಿ ಯಾವುದೇ ಕಾರಣಕ್ಕೂ ಈ 5 ವಸ್ತುಗಳನ್ನು ಇಟ್ಟುಕೊಳ್ಳಬೇಡಿ