Udupi News: ಕೃಷ್ಣಮಠದಲ್ಲಿ ಪಾರ್ಕಿಂಗ್ ಜಾಗದಲ್ಲಿ ಸೈಡ್ ನೀಡುವ ವಿಚಾರಕ್ಕೆ ಮಾರಾಮಾರಿ

Udupi: ಉಡುಪಿಯ ಶ್ರೀ ಕೃಷ್ಣ ದೇವಸ್ಥಾನದ ಪಾರ್ಕಿಂಗ್ ಸ್ಥಳದಲ್ಲಿ ಗಾಡಿ ಪಾರ್ಕ್‌ಗೆ ಸೈಡ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾರಾಮಾರಿ ನಡೆದಿದೆ. ಹೈದರಾಬಾದ್‌ ಮೂಲದ ಪ್ರವಾಸಿ ಮತ್ತು ಸ್ಥಳೀಯ ನಿವಾಸಿಯ ನಡುವೆ ಈ ಗಲಾಟೆ ನಡೆದಿದೆ.

ಇಲ್ಲಿ ಉಡುಪಿ ನಿವಾಸಿ ಸುಪ್ರೀತ್ನದ್ದೇ ತಪ್ಪು ಎಂದು ಆರೋಪಿಸಲಾಗಿದೆ. ಹೈದರಾಬಾದ್‌ನಿಂದ ತಾನು ಮಕ್ಕಳ ಜತೆ ಉಡುಪಿ ಪ್ರವಾಸಕ್ಕಾಗಿ ಬಂದಿದ್ದೆ. ಆದರೆ ಎದುರಿಗೆ ಕಾರ್ ಪಾರ್ಕ್ ಮಾಡುತ್ತಿದ್ದ ಸುಪ್ರೀತ್‌ಗೆ ನಿಧಾನವಾಗಿ ಕಾರ್ ಓಡಿಸಿ ಎಂದು ಹೇಳಿದ್ದೇ ತಪ್ಪಾಯ್ತು. ಅಷ್ಟಕ್ಕೆ ಕೋಪಗ“ಂಡ ಸುಪ್ರೀತ್ ಬೈಯ್ದಿದ್ದಲ್ಲದೇ, ಕಾರ್‌ನಲ್ಲಿ್ದ ಕಂಬಳದ ಕೋಲಿನಿಂದ ಹಲ್ಲೆ ಮಾಡುವ ಪ್ರಯತ್ನ ಮಾಡಿದರಂತೆ ಪ್ರವಾಸಿಗ ಆರೋಪಿಸಿದ್ದಾನೆ.

ಇನ್ನು ಸುಪ್ರೀತ್ ಆರೋಪದ ಪ್ರಕಾರ, ಪ್ರವಾಸಿಗ ಸುಪ್ರೀತ್ ಕಾರ್ ಗ್ಲಾಸ್ ಜಖಂಗ“ಳಿಸಿದ್ದಾನೆ. ಹಲ್ಲೆಯ ಪರಿಣಾಮ ತನ್ನ ಬಾಯಿಯಿಂದ ರಕ್ತ ಸೋರಿದೆ ಎಂದು ಸುಪ್ರೀತ್ ಆರೋಪಿಸಿದ್ದಾನೆ. ಇನ್ನು ಸ್ಥಳೀಯ ಪೋಲೀಸ್ ಸ್ಟೇಶನ್‌ನಲ್ಲಿ ಇಬ್ಬರ ವಿರುದ್ಧ ಪರಸ್ಪರ ಪ್ರಕರಣ ದಾಖಲಾಗಿದೆ. ಪ್ರವಾಸಿಗ ಪವನ್ ಮತ್ತ ಸುಪ್ರೀತ್ ವಿರುದ್ಧ ಸ್ಥಳೀಯ ಸ್ಟೇಶನ್‌ನಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

About The Author