Wednesday, March 26, 2025

Latest Posts

ಖ್ಯಾತ ಜ್ಯೋತಿಷಿ ವೇಣುಗೋಪಾಲ ಶರ್ಮಾರಿಂದ ಯುಗಾದಿ ರಾಶಿ ಭವಿಷ್ಯ: ಮೀನ ರಾಶಿಗೆ ಹೇಗಿರಲಿದೆ ಈ ವರ್ಷ..?

- Advertisement -

Horoscope: ಈ ಬಾರಿಯ ಯುಗಾದಿ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿಗಳಾದ ವೇಣುಗೋಪಾಲ ಶರ್ಮ ಅವರು ಹೇಳಿದ್ದು, 12 ರಾಶಿಗಳ ಫಲಾಫಲ ಹೇಗಿದೆ ಎಂದು ವಿವರಿಸಿದ್ದಾರೆ. ಅದರಲ್ಲಿ ಮೀನ ರಾಶಿಯವರಿಗೆ ಈ ವರ್ಷ ಹೇಗಿರಲಿದೆ. ಕಷ್ಟವೋ, ನಷ್ಟವೋ, ಇಲ್ಲಾ ಲಾಭವೋ ಅಂತಾ ತಿಳಿಯೋಣ ಬನ್ನಿ.

ಜನ್ಮಕ್ಕೆ ಶನಿ ಬಂಂದಾಗ, ಆರೋಗ್ಯದಲ್ಲಿ ಏರುಪೇರಾಗುತ್ತದೆ. ಅಲ್ಲದೇ ಸತ್ಯ ಗೊತ್ತಿಲ್ಲದೇ, ಬಾಯಿಗೆ ಬಂದ ಹಾಗೆ ಮಾತನಾಡಿ, ಮಾನಹಾನಿ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೀನ ರಾಶಿಯವರ ಮಾತು ಮಿತವಾಗಿರಬೇಕು.

ಅಲ್ಲದೇ ಮೀನ ರಾಶಿಯ ಹೆಣ್ಣು ಮಕ್ಕಳು ಗರ್ಭಿಣಿಯಾಗಿದ್ದರೆ, ಅಂಥವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಎಚ್ಚರಿಕೆಯಿಂದಿರಬೇಕು. ಮೆಟ್ಟಿಲಿನ ಹತ್ತಿರ, ದೇವಸ್ಥಾನದ ಬಳಿ ನಡೆದಾಡುವಾಗ ಹುಷಾರಾಗಿರಬೇಕು.

ಅಲ್ಲದೇ, ಅತೀಯಾಗಿ ಕೋಪ ಬಂದರೆ, ಎಡವಟ್ಟುಗಳಾಗುತ್ತದೆ. ಜಗಳವಾಗುತ್ತದೆ. ನಿಷ್ಠುರತನ ಹೆಚ್ಚಾಗುತ್ತದೆ. ಹಾಗಾಗಿ ಕೋಪ ಸ್ವಲ್ಪ ಕಂಟ್ರೋಲಿನಲ್ಲಿಡುವುದು ಉತ್ತಮ. ಈಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss