ನಿಲ್ಲದ ಮಧ್ಯಂತರಿ ಮೊಹಮ್ಮದ್‌ ಉಪಟಳ..! ಭಾರತದ ವಿರುದ್ಧ ಮತ್ತೆ ಕೆಂಡ ಕಾರಿದ ಬಾಂಗ್ಲಾ..

Bangla News: ತನ್ನ ಷಡ್ಯಂತ್ರದ ಮೂಲಕ ಬಾಂಗ್ಲಾದಲ್ಲಿ ಶೇಖ್‌ ಹಸೀನಾ ಸರ್ಕಾರ ಪತನಗೊಳಿಸಿ ಮಧ್ಯಂತರ ಆಡಳಿತವನ್ನು ರಚಿಸಿರುವ ಮೊಹಮ್ಮದ್‌ ಯೂನಸ್‌ ಕಾಲು ಕೆದರಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಹಾಗೂ ನಾಗರಿಕ ಸಂಘರ್ಷದಿಂದ ಕಂಗಾಲಾಗಿರುವ ಮಧ್ಯಂತರಿ ಯೂನಸ್‌ ಇದೀಗ ಚೀನಾ ಸಖ್ಯ ಬೆಳೆಸುತ್ತಿದ್ದಾರೆ. ಅಲ್ಲದೆ ಭಾರತದ ಈಶಾನ್ಯ ಭಾಗದಲ್ಲಿರುವ 7 ರಾಜ್ಯಗಳ ಹತ್ತಿರ ಇರುವ ಕರಾವಳಿ ಪ್ರದೇಶಕ್ಕೆ ಚೀನಾ ಬಾಸ್‌ ಎಂದು ಹೇಳುವ ಮೂಲಕ ತಮ್ಮ ಬುದ್ದಿ ಭ್ರಮಣೆಯನ್ನು ಎತ್ತಿ ತೋರಿಸಿದ್ದಾರೆ.

ಬಾಂಗ್ಲಾ ಕರಾವಳಿ ಬಳಸಿಕೊಳ್ಳಿ..

ಇನ್ನೂ ಚೀನಾದಲ್ಲಿ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಎದುರು ಮಾತನಾಡಿರುವ ಈ ಮಧ್ಯಂತರಿ ಮೊಹಮ್ಮದ್‌, ನೀವು ನಮ್ಮ ದೇಶದ ಅಭಿವೃದ್ದಿಯಲ್ಲಿ ಪಾಲುದಾರರಾಗಿ, ಅಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ನೆರವಾಗಿ. ಅಲ್ಲದೆ ಭಾರತದ ಈಶಾನ್ಯ ಭಾಗದಲ್ಲಿರುವ ರಾಜ್ಯಗಳಲ್ಲಿ ಭೂ ಭಾಗವೇ ಹೆಚ್ಚಾಗಿದೆ. ಅವುಗಳು ನೇರ ಸಮುದ್ರ ಮಾರ್ಗವನ್ನು ಹೊಂದಿಲ್ಲದಿರುವುದು ಚೀನಾ ಹಾಗೂ ಬಾಂಗ್ಲಾ ದೇಶಗಳ ಮೇಲೆ ಅವಲಂಬನೆಯಾಗಿವೆ. ಈ ಭಾಗಗಳಲ್ಲಿ ಚೀನಾ ತನ್ನ ಆರ್ಥಿಕ ಚಟುವಟಿಕೆಗಳನ್ನು ವಿಸ್ತಾರ ಮಾಡಿಕೊಳ್ಳಲಿ ಎಂದು ಯೂನಸ್‌ ಹೇಳಿರುವುದು ಭಾರತಕ್ಕೆ ಆತಂಕ ತರಲು ಕಾರಣವಾಗಿದೆ.

ತೀಸ್ತಾ ನದಿಯಲ್ಲಿ ಹೂಡಿಕೆ ಮಾಡಿ..

ಅಲ್ಲದೆ ಚೀನಾ ದೇಶದ ಬಳಿ ಬಾಂಗ್ಲಾದ ಅಭಿವೃದ್ದಿಗಾಗಿ ಅಂಗಲಾಚಿಕೊಳ್ಳುವ ಮೂಲಕ ಭಾರತವನ್ನು ಟೀಕಿಸುವ ಕೆಲಸ ಮಾಡಿರುವ ಯೂನಸ್‌, ಭಾರತದ ಗಡಿಗೆ ಹೊಂದಿಕೊಂಡಿರುವ ತೀಸ್ತಾ ನದಿಯ ಸಂರಕ್ಷಣಾ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಚೀನಾ ಸರ್ಕಾರಕ್ಕೆ ಆಹ್ವಾನ ನೀಡಿದ್ದಾರೆ. ಆದರೆ ಇದಕ್ಕೂ ಮುನ್ನ ಭಾರತವೂ ಸಹ ಈ ಯೋಜನೆಗೆ ಬೆಂಬಲ ಸೂಚಿಸಿತ್ತು. ಅಲ್ಲದೆ ಇದಕ್ಕಾಗಿಯೇ ತಂತ್ರಜ್ಞರ ತಂಡವನ್ನೂ ಸಹ ಕಳುಹಿಸಲು ಒಪ್ಪಿಗೆ ಸೂಚಿಸಿತ್ತು. ಹೀಗಾಗಿ ಸರಕು ಸಾಗಣೆಗೋಸ್ಕರ ಚಿತ್ತಗಾಂಗ್‌ನ ಬಂದರನ್ನು ಬಳಕೆ ಮಾಡಲು ಕಳೆದ 2017ರಲ್ಲಿ ಬಾಂಗ್ಲಾ ದೇಶವು ಭಾರತಕ್ಕೆ ಅನುಮತಿ ನೀಡಿತ್ತು. ಆದರೆ ಈಗ ಅದರ ಸಮೀಪ ಆರ್ಥಿಕ ಮತ್ತು ಕೈಗಾರಿಕಾ ಪಾರ್ಕ್‌ ನಿರ್ಮಾಣ ಕಾರ್ಯದಲ್ಲಿ ಚೀನಾದೊಂದಿಗೆ ಬಾಂಗ್ಲಾ ಕೈ ಜೋಡಿಸಿದೆ.

ಯೂನಸ್‌ ನಡೆ ಅಪಾಯಕಾರಿ..!

ಇನ್ನೂ ಇದೇ ವಿಚಾರಕ್ಕೆ ತನ್ನ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್‌, ಭಾರತ ದೇಶವನ್ನು ಆವರಿಸಿಕೊಳ್ಳುವಂತೆ ಚೀನಾಗೆ ಆಹ್ವಾನ ನೀಡಿರುವುದು ಭಾರತದ ಈಶಾನ್ಯ ಪ್ರದೇಶದ ಸುರಕ್ಷತೆಗೆ ಅಪಾಯಕಾರಿಯಾಗಿದೆ. ಕೇಂದ್ರ ಸರ್ಕಾರವು ಮಣಿಪುರ ಸೇರಿದಂತೆ ದೇಶದ ಈಶಾನ್ಯ ಭಾಗಗಳನ್ನು ನಿರ್ಲಕ್ಷ್ಯಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ಯಾವ ದೇಶದ ರಚನೆಯಲ್ಲಿ ನಮ್ಮ ಭಾರತವು ಪ್ರಮುಖ ಪಾತ್ರವನ್ನು ವಹಿಸಿತ್ತೋ.. ಅದೇ ದೇಶವು ಇಂದು ನಮ್ಮ ವಿರುದ್ಧವೇ ಕತ್ತಿ ಮಸೆಯುತ್ತಿದೆ ಎಂದು ಕಾಂಗ್ರೆಸ್‌ನ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಕಿಡಿ ಕಾರಿದ್ದಾರೆ.

ಒಟ್ನಲ್ಲಿ.. ಆದರೆ ಹೇಳಿ ಕೇಳಿ ಇ ಚೀನಾ ನಂಬಿಸಿ ಮೋಸ ಮಾಡುವುದರಲ್ಲಿ ನಂಬರ್‌ 1 ಇದೆ. ಹೀಗಿರುವಾಗ ಈ ಯೂನಸ್‌ ಅದರ ನೆರವು ಪಡೆಯುವ ದುರಾಸೆಯಿಂದ ಬಾರತದ ಕರಾವಳಿಯ ಬಗ್ಗೆ ಪ್ರಸ್ತಾಪಿಸಿರುವುದನ್ನು ನೋಡಿದಾಗ ನಿಜಕ್ಕೂ ಭಾರತಕ್ಕಿಂತ ಚೀನಾ ಮುಂದಿನ ದಿನಗಳಲ್ಲಿ ಬಾಂಗ್ಲಾಗೆ ಗುನ್ನ ಇಡಲಿದೆ ಎನ್ನುವುದನ್ನು ನಾವಿಲ್ಲಿ ಅಲ್ಲಗಳೆಯುವಂತಿಲ್ಲ.

About The Author