Vaikuntha : ಏಕಾದಶಿ ಯಾಕೆ ವಿಶೇಷ ಗೊತ್ತಾ..!

ನಮಸ್ಕಾರ ಗೆಳೆಯರೇ ಪ್ರತಿ ತಿಂಗಳು ಬರುವ ಏಕಾದಶಿ,ಜನವರಿ ತಿಂಗಳಲ್ಲಿ ಬರುವ ವೈಕುಂಠ ಏಕಾದಶಿ ಬಹಳಷ್ಟು ವಿಶೇಷತೆ ಇದೆ. ಜನವರಿಯಲ್ಲಿ ಬರುವ ವೈಕುಂಠ ಏಕಾದಶಿಗೆ ಮೋಕ್ಷ ಏಕಾದಶೀ ಎಂದು ಸಹ ಕರೆಯಲಾಗುತ್ತದೆ. ಇನ್ನು ವೈಕುಂಠ ಏಕಾದಶಿಯ ದಿವಸ ಎಲ್ಲರೂ ಪೂಜೆಯನ್ನು ಮಾಡಿ ದೇವರಿಗೆ ನೈವೇದ್ಯ ಅರ್ಪಿಸುತ್ತಾರೆ. ಆದರೆ ಈ ಒಂದು ನೈವೇದ್ಯವನ್ನು ಏಕಾದಶಿಯ ದಿನ ಅರ್ಪಿಸಬಾರದು. ಹಾಗಾದರೆ ಏಕಾದಶಿಯ ದಿನ ಯಾವ ತಪ್ಪುಗಳನ್ನು ಮಾಡಬಾರದು, ಯಾವ ನೈವೇದ್ಯ ಅರ್ಪಿಸಬಾರದು ಎಂದು ತಿಳಿದುಕೊಳ್ಳೋಣ ಬನ್ನಿ. ಏಕಾದಶಿ ವ್ರತ ಮಾಡುತ್ತಿದ್ದರೆ ಮೊದಲು ಮನೆಯನ್ನು ಶುದ್ಧಗೊಳಿಸಬೇಕು. ಮನೆಯಲ್ಲಿ ವ್ರತಮಾಡುವವರು, ಮಾಡದೇ ಇರುವವರು ಎಲ್ಲರೂ ದೈಹಿಕವಾಗಿ ಶುದ್ಧವಾಗಿರಬೇಕು. ವೈಕುಂಠ ಏಕಾದಶಿಯ ದಿವಸ ಗಂಡ-ಹೆಂಡತಿ ಸೇರುವಂತಿಲ್ಲ. ಏಕಾದಶಿ ಪ್ರಾರಂಭವಾಗಿ ಮುಗಿಯುವ ವರೆಗೂ ದೇವರ ಪೂಜೆ ವಿಷ್ಣುವಿನ ನಾಮಸ್ಮರಣೆಯನ್ನು ಮಾಡುತ್ತಾ ವ್ರತಾಚರಣೆಯ ಪೂಜೆಯನ್ನು ಪೂರ್ತಿ ಮಾಡಬೇಕು. ವೈಕುಂಠ ಏಕಾದಶಿಯ ದಿನ ಯಾವುದೇ ಕಾರಣಕ್ಕೂ ಮಾಂಸಹಾರ ಸೇವಿಸಬಾರದು. ವೈಕುಂಠ ಏಕಾದಶಿಯ ದಿವಸ ವ್ರತ ಮಾಡುವುದು ಪಾಪಕರ್ಮಗಳನ್ನು ಕಳೆಯುವುದಕ್ಕಾಗಿ, ಹಾಗಾಗಿ ಮಾಂಸಾಹಾರ ಸೇವನೆ ವೈಕುಂಠ ಏಕಾದಶಿಯ ದಿನ ನಿಷಿದ್ಧ. ಇನ್ನೂ ಸಾಮಾನ್ಯವಾಗಿ ಗೊತ್ತು ಗೊತ್ತಿಲ್ಲದೆಯೋ ತಪ್ಪುಗಳನ್ನು ಮಾಡುತ್ತಿರುತ್ತೇವೆ ಆದರೆ ಆದಷ್ಟು ಜಾಗರೂಕತೆಯಿಂದ ಇರುವುದು ಉತ್ತಮ. ಯಾವುದೇ ಕಾರಣಕ್ಕೂ ಬೇರೆಯವರು ಮಾಡುತ್ತಿದ್ದಾರೆ ಎಂದು ತೋರಿಕೆಗಾಗಿ ವೈಕುಂಠ ಏಕಾದಶಿ ವ್ರತವನ್ನು ಮಾಡಬಾರದು. ಶ್ರದ್ಧೆ ಭಕ್ತಿ ನಂಬಿಕೆಯಿಂದ ವ್ರತ ಮಾಡಬೇಕು. ವೈಕುಂಠ ಏಕಾದಶಿಯ ದಿವಸ ದೇವರಿಗೆ ನೈವೇದ್ಯವನ್ನು ಮಾಡಬೇಕಾದರೆ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬಾರದು. ಮಹಾವಿಷ್ಣುವಿಗೆ ನೈವೇದ್ಯ ಮಾಡಬೇಕು ಎಂದರೆ ಭಕ್ತಿಯಿಂದ ತುಳಸಿ ತೀರ್ಥವನ್ನು ಅರ್ಪಿಸಿದರೆ ಸಾಕು, ಮಹಾವಿಷ್ಣು ಪ್ರಸನ್ನನಾಗುತ್ತಾನೆ. ಯಾವುದೇ ಕಾರಣಕ್ಕೂ ವೈಕುಂಠ ಏಕಾದಶಿಯ ದಿವಸ ಅನ್ನವನ್ನು ನೈವೇದ್ಯವಾಗಿ ಅರ್ಪಿಸಬಾರದು, ಯಾಕೆಂದರೆ ವೈಕುಂಠ ಏಕಾದಶಿಯ ದಿನ ಪ್ರತಿಯೊಂದು ಅನ್ನದ ಅಗಳಿನಲ್ಲೂ ಕೂಡ ರಾಕ್ಷಸ ಗುಣವಿರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಏಕಾದಶಿಯ ದಿನ ಅನ್ನವನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ. ಹೀಗಾಗಿ ವೈಕುಂಠ ಏಕಾದಶಿಯನ್ನು ಕಟ್ಟುನಿಟ್ಟಾಗಿ ಆಚರಿಸುವುದರಿಂದ ಉತ್ತಮ ಫಲಗಳು ಲಭಿಸುತ್ತದೆ. ಜೊತೆಗೆ ಪಾಪಕರ್ಮಗಳನ್ನು ಕಳೆದುಕೊಳ್ಳಬಹುದು.

About The Author