Sunday, June 1, 2025

Latest Posts

ನವೆಂಬರ್ 26 ರಿಂದ ಮತ್ತೆ ವರುಣಾರ್ಭಟ.

- Advertisement -

ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 26 ರಿಂದ ಬಾರಿ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ರಾಜ್ಯದಾದ್ಯಂತ ಮಳೆಯಿಂದಾಗಿ ಬಾರಿ ಪ್ರಾಣ ಹಾನಿ ಉಂಟಾಗಿದ್ದು ಆಸ್ತಿ ಹಾನಿ, ಹಾಗೂ ರೈತರ ಸಾವಿರಾರು ಹೆಕ್ಟರ್ ಬೆಳೆ ಹಾನಿ,ಸಾವಿರಾರು ಮನೆಗಳು ಉರುಳಿವೆ.ಇದರ ಪರಿಣಾಮವಾಗಿ ಕರ್ನಾಟಕದ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ,ಕೋಲಾರ, ರಾಮನಗರ,ಮಂಡ್ಯ,ಮೈಸೂರು,ಚಿಕ್ಕಬಳ್ಳಾಪುರ ಚಾಮರಾಜನಗರ,ತುಮಕೂರು ಹಾಗೂ ತಮಿಳುನಾಡಿನ ದಕ್ಷಿಣ ವಲಯಗಳಲ್ಲಿ ಸಹ ನವೆಂಬರ್ 26 ರಿಂದ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾಹಿತಿ ನೀಡಿದ್ದಾರೆ. ನವೆಂಬರ್ 22ರಿಂದ ನಾಲ್ಕು ದಿನಗಳ ಕಾಲ ಮಳೆ ಕ್ಷಿಣಿಸಲಿದ್ದು , ನಂತರ ನವೆಂಬರ್ 26 ರಿಂದ ಮಲೆನಾಡು,ಕರಾವಳಿ,ಹಾಗೂ ಉತ್ತರವಲಯ ನಾಡಿನಲ್ಲಿ ಅಷ್ಟೇನು ಮಳೆಯಾಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

- Advertisement -

Latest Posts

Don't Miss