Saturday, October 5, 2024

Latest Posts

ಹಿರಿಯ ನಟ ದ್ವಾರಕೀಶ್ ನಿಧನ ವದಂತಿ- ನನಗೇನೂ ಆಗಿಲ್ಲ ಚೆನ್ನಾಗಿದ್ದೀನಿ ಎಂದ ‘ಕರ್ನಾಟಕದ ಕುಳ್ಳ’..!

- Advertisement -

ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನರಾಗಿದ್ದಾರೆ , ಅವರ ಆತ್ಮಕ್ಕೆ ಶಾಂತಿ ಸಿಗಲಿ ಅನ್ನೋ ಸುದ್ದಿ ನೋಡುತ್ತಿದ್ದಂತೆಯೇ ಎಲ್ಲರಿಗೂ ಶಾಕ್ ಆಗಿತ್ತು. ಸ್ಯಾಂಡಲ್ ವುಡ್ ಪ್ರೇಕ್ಷಕರನ್ನು ರಂಜಿಸಿದ್ದ ಮತ್ತೋರ್ವ ಕಲಾವಿದ, ನಿರ್ಮಾಪಕನನ್ನು ಕಳೆದಕೊಂಡಿತಲ್ಲಾ ಅಂತ ಕೆಲವರು ಸಂತಾಪ ಕೂಡ ಸೂಚಿಸಿದ್ರು. ಆದ್ರೆ ದ್ವಾರಕೀಶ್ ನಿಧನ ಸುದ್ದಿ ಕಿಡಿಗೇಡಿಗಳು ಹಬ್ಬಿಸಿದ ವದಂತಿಯಷ್ಟೆ. ಇದಕ್ಕೆ ಸ್ವತಃ ದ್ವಾರಕೀಶ್ ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಬ್ಬಿದ್ದ ವದಂತಿ

ರಾಜ್ಯಾದ್ಯಂತ ಸಾಮಾಜಿಕ ಜಾಲತಾಣದ ಮೂಲಕ ಹಬ್ಬಿದ್ದ ಈ ವದಂತಿಗೆ ಸ್ಪಷ್ಟನೆ ನೀಡಿರುವ ದ್ವಾರಕೀಶ್, ನಿಮ್ಮ ಕರ್ನಾಟಕದ ಕುಳ್ಳ ಆರೋಗ್ಯವಾಗಿದ್ದೇನೆ, ಯಾವುದೇ ಸುಳ್ಳು ವದಂತಿಗೆ ಕಿವಿಗೊಡಬೇಡಿ. ನನಗೆ ಏನಾದ್ರೂ ನಿಮಗೆ ಗೊತ್ತಾಗುತ್ತೆ. ನಿಮ್ಮೆಲ್ಲರ ಪ್ರೀತಿ, ಹಾಗೂ ರಾಯರ ಆಶೀರ್ವಾದಿಂದ ನಾನು ಚೆನ್ನಾಗಿದ್ದೀನಿ, ಚೆನ್ನಾಗಿರುತ್ತೇನೆ ಅಂತ ಹೇಳಿದ್ದಾರೆ.

ಪ್ರಪಂಚಾದ್ಯಂತ ಪೈಲ್ವಾನ್ ಪ್ರದರ್ಶನ..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=pI4RUA-wZYY
- Advertisement -

Latest Posts

Don't Miss