Bollywood News: ಫಿನಾಲೆ ವೀಕ್ ತನಕ ಬಂದು, ಎಲಿಮಿನೇಟ್ ಆಗಿ ಹೊರಗೆ ಬಂದಿರುವ ಉದ್ಯಮಿ ವಿಕಿ ಜೈನ್, ಬೇರೆ ನಟಿಯರೊಂದಿಗೆ ಸೇರಿ ಪಾರ್ಟಿ ಮಾಡಿದ್ದಾರೆ.
ಬಾಲಿವುಡ್ ನಟಿ ಅಂಕಿತಾ ಲೋಖಂಡೆ ಮತ್ತು ಅವರ ಪತಿ ವಿಕಿ ಜೈನ್ ಹಿಂದಿಯ ಬಿಗ್‌ಬಾಸ್ 17ಕ್ಕೆ ಒಟ್ಟಿಗೆ ಹೋಗಿದ್ದರು. ಈ ಸೀಸನ್ ಬಿಗ್‌ಬಾಸ್‌ಗೆ ಇವರಿಂದಾನೇ ಟಿಆರ್‌ಪಿ ಬಂದಿರಬಹುದು ಅನ್ನೋದು ಹಲವರ ಅನಿಸಿಕೆ. ಏಕೆಂದರೆ, ಹಲವರು ಇವರಿಬ್ಬರು ಆಡುವ ಜಗಳ ನೋಡಲೆಂದೇ, ಬಿಗ್‌ಬಾಸ್ ನೋಡುತ್ತಿದ್ದರು. ಅಷ್ಟು ಜಗಳವಾಡಿ ಸೀನ್ ಕ್ರಿಯೇಟ್ ಮಾಡುತ್ತಿದ್ದರು ಈ ಕಪಲ್.
ಕೆಲವೊಮ್ಮೆ ಇವರಿಬ್ಬರ ಜಗಳ ಡಿವೋರ್ಸ್ ಮಾತುಕತೆಯ ತನಕವೂ ಹೋಗಿತ್ತು. ಅಂಕಿತಾ ವಿಕಿಗೆ ಡಿವೋರ್ಸ್ ಕೊಡಬಹುದು ಅಂತಾ ನೆಟ್ಟಿಗರು ಚರ್ಚಿಸುತ್ತಿದ್ದರು. ಏಕೆಂದರೆ ವಿಕಿ ಬೇರೆ ಮಹಿಳಾ ಸ್ಪರ್ಧಿಗಳೊಂದಿಗೆ ತುಂಬಾ ಸಲುಗೆಯಿಂದ ಇರುತ್ತಿದ್ದರು. ಬಳಿಕ ಫಿನಾಲೆ ವೀಕ್ ತನಕ ಇಬ್ಬರು ಜೊತೆಯಾಗಿ ಬಂದು, ಫಿನಾಲೆಗೆ ಅಂಕಿತಾ ಉಳಿದುಕೊಂಡಿದ್ದು, ವಿಕ್ಕಿ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.
ಬಳಿಕ ಹಲವು ನಟಿಯರೊಂದಿಗೆ ಸೇರಿ ವಿಕಿ ಪಾರ್ಟಿ ಮಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಕ್ಕಿ ಪಾರ್ಟಿ ಫೋಟೋಸ್ ರಾರಾಜಿಸುತ್ತಿದೆ. ಅದಕ್ಕೆ ಬರೀ ನೆಗೆಟಿವ್ ಕಾಮೆಂಟ್ಸ್‌ಗಳೇ ಕೇಳಿ ಬರುತ್ತಿದೆ. ಈ ಪಾರ್ಟಿಯಲ್ಲಿ ನಟಿ ಪೂರ್ವ ರಾಣಾ ಕೂಡ ಭಾಗಿಯಾಗಿದ್ದು, ಆಕೆಯೊಂದಿಗೆ ವಿಕ್ಕಿ ತುಂಬಾ ಆಪ್ತವಾಗಿದ್ದಾರೆ. ಈ ಫೋಟೋ ನೋಡಿ ಅಂಕಿತಾ ಅಭಿಮಾನಿಗಳು, ಆಕ್ರೋಶ ಹೊರಹಾಕಿದ್ದಾರೆ. ಅಂಕಿತಾಗೆ ಇವನಿಗಿಂತ ಒಳ್ಳೆಯ ಪತಿ ಸಿಗುತ್ತಿದ್ದ ಎಂದಿದ್ದಾರೆ.
ಮಕ್ಕಳ ವರ್ತನೆಗೆ ಮನನೊಂದು ಸಾಕುಪ್ರಾಣಿ ಹೆಸರಿಗೆ 23 ಕೋಟಿ ರೂ. ಆಸ್ತಿ ಬರೆದಿಟ್ಟ ವೃದ್ಧೆ