ಪೃಥ್ವಿ ಸಿಂಗ್ ಬೋಗಸ್ ಎಂದ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನ ಬಂಧನಕ್ಕೆ ವಿಜಯೇಂದ್ರ ಆಗ್ರಹ

Political News: ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತ ಪೃಥ್ವಿ ಸಿಂಗ್ ಮೇಲೆ ಚಾಕು ಇರಿತ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಆಪ್ತರ ವಿರುದ್ಧ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಬೆಳಗಾವಿ ಸುವರ್ಣಸೌಧದಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, “ಪೃಥ್ವಿ ಸಿಂಗ್ ಮೋಸ್ಟ್ ಬೋಗಸ್” ಎಂದಿದ್ದಾರೆ. “ಇದೆಲ್ಲ ರಾಜಕೀಯ ಪ್ರೇರಿತ ಷಡ್ಯಂತ್ರ, ಇದರ ಹಿಂದೆ ಯಾರಿದ್ದಾರೆ ಗೊತ್ತಾಗಬೇಕು” ಎಂದಿದ್ದಾರೆ. “ತನಿಖೆ ಆಗಬೇಕು ಅಂತ ಎಸ್‌ಪಿ ಹತ್ತಿರವೂ ಮಾತಾಡಿದ್ದೇನೆ. ಯಾರ ಆಪ್ತ ಅನ್ನೋದಕ್ಕಿಂತ ನಮ್ಮ ಹೆಸರು ಬಂದ ತಕ್ಷಣ ಅದರ ಬಗ್ಗೆ ವಿಚಾರ ಮಾಡಿದ್ದೇನೆ. 24 ಗಂಟೆ ಒಳಗೆ ಸತ್ಯಾಸತ್ಯತೆ ಗೊತ್ತಾಗಬೇಕು” ಎಂದಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra), “ವಿಧಾನ ಪರಿಷತ್ ಸದಸ್ಯ ಸೇರಿ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು” ಅಂತ ಆಗ್ರಹಿಸಿದ್ದಾರೆ.

ಪೃಥ್ವಿ ಸಿಂಗ್ ಮೋಸ್ಟ್ ಬೋಗಸ್ ಎಂದ ಸಚಿವೆ

ಪೃಥ್ವಿ ಸಿಂಗ್ ಹೆಸರು ಬರೆದಿಟ್ಟು ಹುಡುಗರು ಆತ್ಮಹತ್ಯೆ ಮಾಡಿಕೊಂಡಿದ್ದರು, ಮೋಸ್ಟ್ ಬೋಗಸ್ ಅವನು ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಪೃಥ್ವಿ ಸಿಂಗ್‌ನನ್ನೂ ವಿಚಾರಣೆ ಮಾಡಬೇಕು, 24 ಗಂಟೆಗಳ ಒಳಗೆ ಘಟನೆಯ ಸತ್ಯಾಸತ್ಯತೆ ಗೊತ್ತಾಗಬೇಕು ಎಂದಿದ್ದಾರೆ. ಇನ್ನು ಈ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ ಅಂತ ಅವರು ಸ್ಪಷ್ಟಪಡಿಸಿದ್ದಾರೆ.

ದುರದ್ದೇಶಪೂರ್ವಕವಾಗಿ ನಮ್ಮ ಮೇಲೆ ಆರೋಪ

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಲಕ್ಷ್ಮಿ ಹೆಬ್ಬಾಳ್ಕರ್, ದುರುದ್ದೇಶಪೂರ್ವಕವಾಗಿ ಆತ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾನೆ. ಒಂದು ದಾಖಲೆ ಸಲುವಾಗಿ ಅವರ ಮನೆಗೆ ನಮ್ಮ ಕಡೆಯವರು ಹೋಗಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದಿದ್ದಾರೆ.

ಶರ್ಟ್‌ನ ಬಣ್ಣವೇ ಬದಲಾಗಿದೆ!

ನಮ್ಮ ಕಡೆಯವರು ಆತನೊಂದಿಗೆ ಮಾತನಾಡುವಾಗ ಆತ ಕೇಸರಿ ಬಣ್ಣದ ಟೀ ಶರ್ಟ್‌ ಹಾಕಿದ್ದು ಸೆರೆಯಾಗಿದೆ. ಆದರೆ ರಕ್ತ ಅಂಟಿಕೊಂಡಿದ್ದ ಬಿಳಿ ಬಣ್ಣದ ಅಂಗಿಯನ್ನು ಧರಿಸಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಈತ ದುರದ್ದೇಶಪೂರ್ವವಾಗಿ ಆರೋಪ ಮಾಡುತ್ತಿರುವುದು ಸ್ಪಷ್ಟವಾಗಿದೆ. ಪೊಲೀಸರು ತನಿಖೆ ನಡೆಸಿ ಈ ಕೃತ್ಯದ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲಿ ಎಂದು ಸಚಿವೆ ಆಗ್ರಹಿಸಿದ್ದಾರೆ.

ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದ ವಿಜಯೇಂದ್ರ

ಇನ್ನು ಕೆಎಲ್‌ಇ ಆಸ್ಪತ್ರೆಗೆ ಭೇಟಿ ನೀಡಿದ ಬಿವೈ ವಿಜಯೇಂದ್ರ, ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಪಿಎ, ಆಪ್ತರು ಸೇರಿ ಪೃಥ್ವಿ ಸಿಂಗ್ ಮನೆಗೆ ಹೋಗಿದ್ದಾರೆ. ಪೃಥ್ವಿ ಸಿಂಗ್‌ರನ್ನು ಹೊರಗೆ ಕರೆಸಿ ಮಾತುಕತೆ ಮಾಡಿದ್ದಾರೆ. ಪೃಥ್ವಿ ಸಿಂಗ್ ‌ವಿಡಿಯೋ ರೆಕಾರ್ಡಿಂಗ್ ಮಾಡೋ ಪ್ರಯತ್ನ ಮಾಡಿದ್ದಾರೆ. ಆ ವೇಳೆ ಕಪ್ಪು ಬಣ್ಣದ ಇನ್ನೋವಾ ಕಾರಿನಲ್ಲಿ ಚನ್ನರಾಜ್ ಹಟ್ಟಿಹೊಳಿ ಇದ್ರು. ಇದೇ ವೇಳೆ ಕಾರ್ಯಕರ್ತರು ಪೃಥ್ವಿ ಸಿಂಗ್ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.

‘ಕಾಂಗ್ರೆಸ್‌ನ ಸವಾಲಿಗೆ ಪ್ರತ್ಯುತ್ತರ ಕೊಡುವ ಸಾಮರ್ಥ್ಯ ಜೆಡಿಎಸ್ ಹಾಗೂ ಬಿಜೆಪಿ ಒಕ್ಕೂಟಕ್ಕೆ ಇದೆ’

8 ಬಾರಿ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಇನ್ನು ನೆನಪು ಮಾತ್ರ

ಕಾಂಗ್ರೆಸ್ ಪಕ್ಷದ ಪೊಳ್ಳು ಗ್ಯಾರಂಟಿಗಳನ್ನು ಜನ ನಂಬಲಿಲ್ಲ: ಬಿ.ವೈ.ವಿಜಯೇಂದ್ರ

About The Author