ನಮ್ಮ ಕಿಚ್ಚನ ವಿಕ್ರಾಂತ್ ರೋಣಾ ಕಿಕ್ಕು ಇಂಡಿಯಾದಲ್ಲೇ ಹವಾ ಎಬ್ಬಿಸಿದೆ. ದಿನಕ್ಕೊಂದು ಭಾಷೆಯಲ್ಲಿ ಬಿಡುಗಡೆಯಾಗ್ತಿರೋ ರಾ ರಾ ರಕ್ಕಮ್ಮ ಹಾಡು ಮಿಲಿಯನ್ಗಟ್ಟಲೆ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ. ಅನೂಪ್ ಭಂಡಾರಿ ನಿರ್ದೇಶನದ ಅವರೇ ಲಿರಿಕ್ಸ್ ಬರೆದ ಜಾಕ್ವೆಲಿನ್ ಫರ್ನಾಂಡಿಸ್ ಸೊಂಟ ಬಳುಕಿಸಿರೋ ಹಾಡು ಈಗ ದೇಶದ ಐದು ಭಾಷೆಗಳಲ್ಲಿ ರ್ತಿದೆ. ಸದ್ಯ ಕನ್ನಡ ಹಿಂದಿ ತೆಲುಗಿನಲ್ಲಿ ರಿಲೀಸ್ ಆಗಿದ್ದು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ.
ಹಿAದಿ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ೪ ಮಿಲಿಯನ್ ವೀವ್ಸ್ ಜೊತೆ ಮುನ್ನುಗ್ತಿರೋ ರಾ ರಾ ರಕ್ಕಮ್ಮ ಅಜನೀಶ್ ಲೋಕನಾಥ್ ಸಂಗೀತದ ಮ್ಯೂಸಿಕಲ್ ಮ್ಯಾಜಿಕ್. ಕಿಚ್ಚ ಕೂಡ ಸ್ಟೆಪ್ ಹಾಕಿ ಕಿಕ್ ಕೊಡೋ ರಕ್ಕಮ್ಮ ಲಿರಿಕ್ಸ್ ಕ್ಯಾಚಿಯಾಗಿದ್ದು, ಎಲ್ಲ ಕಡೆ ಕಿಕ್ಕಮ್ಮ ಅನ್ನೋ ಹಂಗಿದೆ. ಇವತ್ತು ತಮಿಳಿನಲ್ಲಿ ರಕ್ಕಮ್ಮನ ಎಂಟ್ರಿ ಇದ್ದು ನಾಳೆ ಮಲೆಯಾಳಂನಲ್ಲಿ ಕಿಚ್ಚ ಜಾಕ್ವೆಲಿನ್ ಕಮಾಲ್ ಕಿಕ್ ಕೊಡಲಿದೆ.
ಇಲ್ಲಿ ನಾವ್ ನಿಮ್ಗೆ ಹೇಳೋಕೆ ಹೊರಟಿದ್ದು ಒಂದೇ ಕೆಜಿಎಫ್ ನಂತ್ರ ಕನ್ನಡದ ಸಿನಿಮಾ ವಿಕ್ರಾಂತ್ ರೋಣ ಅದೇ ಲೆವೆಲ್ಗೆ ರ್ತಿದೆ ಅನ್ನೋದ್ರಲ್ಲಿ ಅನುಮಾನಾನೇ ಬೇಡ. ಈಗ ಪ್ರಶಾಂತ್ ನೀಲ್ ಮುಂದೆ ಅನೂಪ್ ಭಂಡಾರಿ. ಕನ್ನಡ ಚಿತ್ರರಂಗದ ಮತ್ತೊಂದು ಸಿನಿಮಾ ಜಗತ್ತನ್ನು ಬೆರಗುಗೊಳಿಸೋಕೆ ರ್ತಿದೆ. ಜುಲೈ ೨೮ಕ್ಕೆ ರಿಲೀಸ್ ಆಗ್ತಿರೋ ಸಿನಿಮಾದ ಟೀಸರ್ ಯಾವಾಗ ಅಂತ ಬಾದ್ಷಾ ಕಿಚ್ಚನ ಫ್ಯಾನ್ಸ್ ಸದ್ಯ ವೆಯ್ಟಿಂಗ್..
ಎಕ್ಕ ಸಕಾ ರಕ್ಕಮ್ಮ ಎಲ್ಲಾ ಕಡೆ ಕಿಕ್ಕಮ್ಮಾ..!
- Advertisement -
- Advertisement -