ವಿಕ್ರಾಂತ್ ರೋಣನ ಗಡಂಗ್ ರಕ್ಕಮ್ಮ ಬರೋಕೆ ೨ ದಿನ ಬಾಕಿ. ನಾಳೆ ಅಲ್ಲ ನಾಡಿದ್ದು ಗಡಂಗ್ ರಕ್ಕಮ್ಮ ಮಣ್ಣಿನ ಮಡಿಕೆ ತುಂಬಾ ಹೆಂಡ ತುಂಬ್ಕೊAಡು ರ‍್ತಾಳೆ. ಗೊತ್ತಾಯ್ತಲ್ಲ, ಸ್ಯಾಂಡಲ್‌ವುಡ್‌ನ ಗಡಂಗ್ ರಕ್ಕಮ್ಮ ಇವಳು. ಜಾಕ್ವೆಲಿನ್ ಫರ್ನಾಂಡಿಸ್ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಮೊದಲ ಸಿನಿಮಾ ಈ ವಿಕ್ರಾಂತ್ ರೋಣ. ಚಿತ್ರ ಬಿಡುಗಡೆಯಾಗೋಕೆ ೨ ತಿಂಗಳು ಇರುವಾಗಲೇ ಅನೂಪ್ ಭಂಡಾರಿ ವಿಕ್ರಾಂತ್ ರೋಣನ ಪ್ರಚಾರಕ್ಕೆ ಮುನ್ನುಡಿ ಬರೀತಿದ್ದಾರೆ.
ಗಡಂಗ್ ರಕ್ಕಮ್ಮ ಸ್ಪೆಷಲ್ ಸಾಂಗ್ ಲಿರಿಕಲ್ ವಿಡಿಯೋ ಅಜನೀಶ್ ಲೋಕನಾಥ್ ಸಂಗೀತದಲ್ಲಿ ಅನೂಪ್ ಭಂಡಾರಿ ಸಾಹಿತ್ಯದಲ್ಲಿ ಕಲರ್‌ಫುಲ್ಲಾಗಿ ಮೂಡಿ ಬಂದಿದ್ದು, ಸ್ವತಃ ಜಾಕ್ವೆಲಿನ್ ಕೂಡ ಈ ಸಾಂಗ್ ಬಗ್ಗೆ ಕುತೂಹಲದಿಂದಿದ್ದಾರೆ. ಕೇವಲ ಕನ್ನಡ ಮಾತ್ರ ಅಲ್ಲ ಹಿಂದಿ ೨೪, ತೆಲುಗ ೨೫, ತಮಿಳ್ ೨೬, ಮಲೆಯಾಳಂ ೨೭ರಂದು ಬಿಡುಗಡೆಯಾಗಲಿದ್ದು ಒಂದೊAದು ದಿನ ಗ್ಯಾಪ್ ಕೊಟ್ಟು ಪ್ರತಿದಿನ ಒಂದೊAದು ಭಾಷೆಯನ್ನು ಚಿತ್ರತಂಡ ಆಯ್ದುಕೊಂಡಿರೋದು ಕೂಡ ಭರ್ಜರಿ ಪ್ರಚಾರದ ಭಾಗ.
ಸುದೀಪ್ ಟ್ವೀಟ್ ಮಾಡಿ ಗಡಂಗ್ ರಕ್ಕಮ್ಮ ಎಂಟ್ರಿ ಟ್ವೀಟ್ ಮಾಡಿದ್ದು ಥ್ರಿಲ್ಲರ್ ವಿಕ್ರಾಂತ್ ರೋಣ ಪ್ರೋಮೋಷನ್‌ಗೆ ಭರ್ಜರಿ ಓಪನಿಂಗ್ ಸಿಗ್ತಿದೆ. ಕನ್ನಡದಲ್ಲಿ ಅನೂಪ್ ಭಂಡಾರಿ ಲಿರಿಕ್ಸ್ ಬರೆದಿದ್ರೆ ತೆಲುಗಿನಲ್ಲಿ ರಾಮ ಜೋಗಯ್ಯ ಶಾಸ್ತಿç ಲಿರಿಕ್ಸ್ನಲ್ಲಿ ಗಡಂಗ್ ರಕ್ಕಮ್ಮ ರೆಡಿಯಾಗಿದೆ. ವಿಕ್ರಾಂತ್ ರೋಣನ ಒಂದೇ ಲುಕ್ ನೋಡಿ ಕಿಚ್ಚ ಹೇಗೆಲ್ಲಾ ಕಾಣುಸ್ಬಹುದು ಅಂತ ಕಾದಿರೋ ಫ್ಯಾನ್ಸ್ ರಕ್ಕಮ್ಮನ ಗಡಂಗ್‌ಲ್ಲಿ ಕಿಚ್ಚ ರ‍್ತಾರಾ ಅಂತ ನೋಡೋಕೆ ಕಾಯ್ತಿದ್ದಾರೆ.
೨ ತಿಂಗಳು ಬಾಕಿ ಈಗ್ಲೇ ಬಾದ್ಷಾ ಭರ್ಜರಿ ತಯಾರಿ : ಈ ಸಾರಿ ಕಿಚ್ಚಂದೇ ಹವಾ ರೀ..!
- Advertisement -
- Advertisement -