ಕೋಟಿಗೊಬ್ಬ 3 ಬಳಿಕ, ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣಾ ರಿಲೀಸ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂಥ ಸಮಯದಲ್ಲೇ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದ್ದು, ಇದೇ ಯುಗಾದಿ ಹಬ್ಬದಂದು ವಿಕ್ರಾಂತ್ ರೋಣ ಸಿನಿಮಾದ ಟೀಸರ್ ರಿಲೀಸ್ ಆಗಲಿದೆಯಂತೆ. ಈ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಪೋಸ್ಟ್ ಮಾಡಿದ್ದು, ಏಪ್ರಿಲ್ 2 ಬೆಳಿಗ್ಗೆ 9.55ಕ್ಕೆ ಸಿನಿಮಾ ಟೀಸರ್ ರಿಲೀಸ್ ಆಗಲಿದೆ.
ದೆವ್ವದ ಆಗಮನದ ಘೋಷಣೆ ಎಂದು ಬರೆದುಕೊಂಡಿರುವ ನಿರ್ದೇಶಕ ಅನೂಪ್ ಬಂಢಾರಿ, ಟೀಸರ್ ರಿಲೀಸ್ ಆಗುವ ಡೇಟ್, ಟೈಮ್ ಅನೌನ್ಸ್ ಮಾಡಿದ್ದಾರೆ. ಈ ಮೂಲಕ ಕಿಚ್ಚನ ಫ್ಯಾನ್ಸ್‌ಗೆ ಯುಗಾದಿ ಉಡುಗೊರೆ ನೀಡೋಕ್ಕೆ ಸಿದ್ಧವಾಗಿದೆ, ಚಿತ್ರತಂಡ. ಇನ್ನೂ ವಿಶೇಷ ಸಂಗತಿ ಅಂದ್ರೆ, ಕನ್ನಡ, ತೆಲುಗು, ತಮಿಳು ಜೊತೆಗೆ ಇಂಗ್ಲಿಷ್‌ನಲ್ಲಿಯೂ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗುತ್ತಿದೆ. ಇಂಗ್ಲಿಷ್ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಕಿಚ್ಚ ಸುದೀಪ್ ಅವರೇ, ಧ್ವನಿ ನೀಡಿದ್ದಾರೆ.
ಇನ್ನು ಇಂದು ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನಲ್ ರೂಟ್ ಮ್ಯಾಪ್ ನೀಡಿದ್ದು, ಟೀಸರ್ ಬಳಿಕ, ಏನೇನು, ಯಾವಾಗ ರಿಲೀಸ್ ಆಗಲಿದೆ ಎಂದು ತಿಳಿಸಿದೆ. ಮೊದಲು ಟೀಸರ್, ನಂತರ ಹೇ ಫಕೀರಾ ಹಾಡು, ಗುಮ್ಮಾ ಬಂದಾ ಗುಮ್ಮಾ ಹಾಡು, ಚಿಕ್ಕಿ ಬೊಂಬೆ ಹಾಡು, ನಂತರ ಒಂದು ಸರ್ಪ್ರೈಸ್, ಲುಲ್ಲಾಬಿ ಹಾಡು, ನಂತರ ಮತ್ತೊಂದು ಸರ್ಪ್ರೈಸ್, ರುಕ್ಕಮ್ಮಾ ಹಾಡು, ನಂತರ ಟ್ರೈಲರ್ ರಿಲೀಸ್, ಕೊನೆಗೆ ಮತ್ತೊಂದು ಸರ್ಪ್ರೈಸ್, ಇದಾದ ನಂತರ ಪ್ರಪಂಚದಾದ್ಯಂತ ಸಿನಿಮಾ ರಿಲೀಸ್ ಆಗಲಿದೆ.